lokavalli

 

 

ಮೂಡಿಗೆರೆ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು ಲೋಕವಳ್ಳಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಕಲ ರೀತಿಯಲ್ಲೂ ಸುಸಜ್ಜಿತವಾಗಿ ಲೋಕವಳ್ಳಿ ಶಾಲೆಯ 2 ಎಕರೆ 20 ಗುಂಟೆ ಶಾಲಾವರಣದಲ್ಲಿ ವ್ಯವಸ್ಥಿತವಾದ, ವಿಶಾಲವಾದ ವೇದಿಕೆಯನ್ನು ಸಜ್ಜುಗೊಳಿಸಲಾಗಿತ್ತು. ಹಾಗೆಯೇ ಶಾಲಾ ಪ್ರವೇಶ ದ್ವಾರದಲ್ಲಿ ಸಾಂಪ್ರದಾಯಿಕವಾಗಿ ಮಲೆನಾಡಿನ ಬೈನೆ ಬೀಳಿನ ಚಪ್ಪರ ಹಾಕುವ ಮೂಲಕ ಶೃಂಗರಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಸ್ವಸಹಾಯ ಸಂಘಗಳ ಮಹಿಳೆಯರು ಹಾಗೂ ಗ್ರಾಮಸ್ಥರು ಹಿಂದಿನ ರಾತ್ರಿಯೇ ರಂಗೋಲಿ ಹಾಕಿ ಬಣ್ಣಗಳಿಂದ ಅಲಂಕರಿಸಿದ್ದು ಕಾರ್ಯಕ್ರಮದ ಕೇಂದ್ರ ಬಿಂದು ಆಗಿತ್ತು. ಶಾಲೆಯನ್ನು ಸುಣ್ಣ ಬಣ್ಣದಿಂದ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.

ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ನವೀನ್ ಬಿ ಆರ್ ರವರು  ಎಸ್ಡಿಎಂಸಿ, ಗ್ರಾಮಸ್ಥರು, ಪೋಷಕರು, ಹಳೆ ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ದಾನಿಗಳ ಸರ್ವರ ಸಹಕಾರದಲ್ಲಿ ಅತ್ಯುತ್ತಮವಾಗಿ ಆಯೋಜಿಸಿದ್ದರು.

ಲೋಕವಳ್ಳಿಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಮಾಜಿ ಸಚಿವರಾದ ಮೊಟ್ಟಮ್ಮ, ಬಿ ಬಿ ನಿಂಗಯ್ಯ ಸೇರಿದಂತೆ ಮುಖ್ಯ ಅತಿಥಿಗಳನ್ನು ಗ್ರಾಮದ ಪ್ರವೇಶ ದ್ವಾರದಿಂದ ನಾಸಿಕ್ ಡೋಲು ವಾದ್ಯದೊಂದಿಗೆ ಅದ್ದೂರಿಯಾಗಿ ವೇದಿಕೆಗೆ ಕರೆತರಲಾಯಿತು. ತಾಲೂಕಿನ ಎಲ್ಲಾ ಹೋಬಳಿಗಳಿಂದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು 200 ಕ್ಕೂ ಹೆಚ್ಚು ಶಿಕ್ಷಕರು, ತೀರ್ಪುಗಾರರು, ಪೋಷಕರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರುಚಿಕರವಾದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಭಿನಯ ಗೀತೆ,ಚದ್ಮವೇಷ, ಕಂಠಪಾಠ ಸೇರಿದಂತೆ 20ಕ್ಕೂ ಹೆಚ್ಚು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಲೋಕವಳ್ಳಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಮೂಲಕ ಚಾಲನೆ ನೀಡಿದರು. ನಂತರ ಸ್ವಾಗತ ನೃತ್ಯ ಮಾಡಿದರು. ಶಿಕ್ಷಕರು ನಾಡಗೀತೆಯನ್ನು ಹಾಡಿದರು. ಗಾಯಕರಾದ ಬಕ್ಕಿ ಮಂಜು ಹಾಗೂ ಬಕ್ಕಿ ರವಿ ಅವರು ರೈತರ ಗೀತೆಯನ್ನು ಹಾಡುವ ಮೂಲಕ ರೈತರಿಗೆ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಲಾಯಿತು. ಮಾಜಿ ಸಚಿವರಾದ ಶ್ರೀಮತಿ ಮೊಟಮ್ಮರವರು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಉದ್ಘಾಟನಾ ಭಾಷಣ ಮಾಡಿದರು. ಲೋಕವಳ್ಳಿಯಲ್ಲಿ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು ಉತ್ತಮವಾಗಿ ಆಯೋಜಿಸಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಜಿ ಸಚಿವರಾದ ಬಿ ಬಿ ನಿಂಗಯ್ಯ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಜಯರಾಮ್ ಗೌಡರು ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಿರ್ವಹಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಯಾದ ಜಗದೀಶ್ ನಾಯಕ್ ರವರು ಪ್ರತಿಭಾ ಕಾರಂಜಿಯ ಸ್ಪರ್ಧೆಗಳು ಹಾಗೂ ರೂಪುರೇಷೆಗಳ ಬಗ್ಗೆ ಮಾತನಾಡಿದರು. ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರಾದ ಪುಟ್ಟರಾಜು ಪಿ ಹೆಚ್ ಮಾತನಾಡಿದರು.

ಆತಿಥೇಯ ಶಾಲೆಯ ಮುಖ್ಯ ಶಿಕ್ಷಕರಾದ ಹಾಗೂ ಮೂಡಿಗೆರೆ ತಾಲೂಕಿನ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ನವೀನ್ ಬಿ ಆರ್ ಮಾತನಾಡಿ ಕಾರ್ಯಕ್ರಮದ ಆಯೋಜನೆಗೆ ಶ್ರಮಿಸಿದ ಹಾಗೂ ಸಹಕರಿಸಿದ, ಗ್ರಾಮಸ್ಥರು, ಜನಪ್ರತಿನಿಧಿಗಳು , ಎಸ್ಡಿಎಂಸಿ, ಹಳೆ ಮೂಡಿಗೆರೆ ಗ್ರಾಮ ಪಂಚಾಯಿತಿ ಪೋಷಕರು, ಹಳೆ ವಿದ್ಯಾರ್ಥಿಗಳು ದಾನಿಗಳನ್ನು ಸ್ಮರಿಸಿ ಮಾತನಾಡಿದರು. ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು ಒಂದು ವಾರದಲ್ಲಿ ಆಯೋಜನೆ ಮಾಡಲು ಸಾಕಷ್ಟು ಶ್ರಮ ಪಟ್ಟಿದ್ದನ್ನು ಹಂಚಿಕೊಂಡರು. ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿದ್ದುದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ಗ್ರಾಮದ ಮುಖಂಡರಾದ ಲೋಕವಳ್ಳಿ ರಮೇಶ್ ರವರು ಗ್ರಾಮದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಪ್ರತಿಭಾ ಕಾರಂಜಿಯ ವ್ಯವಸ್ಥಿತ ಆಯೋಜನೆ ಕುರಿತು ಮಾತನಾಡಿದರು.

ಗ್ರಾಮ ಪಂಚಾಯಿತಿಯ ಪ್ರಥಮ ಪ್ರಜೆಯಾಗಿರುವ ಅಧ್ಯಕ್ಷರಾದ ಕುಮಾರಿ ರಂಜಿತಾ ರವರು ಪ್ರತಿಭಾ ಕಾರಂಜಿಯಲ್ಲಿ ಅಧ್ಯಕ್ಷೀಯ ಭಾಷಣವನ್ನು ಮಾಡಿದರು. ಲೋಕವಳ್ಳಿ ಶಾಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ತುಂಬಾ ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ಆಯೋಜನೆ ಮಾಡುವುದಾಗಿ ಪ್ರಶಂಸೆ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿಯಿಂದಲೂ ಶಾಲಾವರಣ ಸ್ವಚ್ಛಗೊಳಿಸಿ ಹಾಗೂ ಇತರೆ ಸಹಕಾರ ನೀಡಿರುವುದಾಗಿ ತಿಳಿಸಿದರು. ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಯಶಸ್ವಿಯಾಗಿ ನೆರವಿರಲಿ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಹಾಜರಿದ್ದ ಗಣ್ಯರಿಗೆ ಕಾರ್ಯಕ್ರಮದ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಕುಸುಮ ಸಂದೀಪ್, ಮಾಜಿ ಅಧ್ಯಕ್ಷರಾದ ಶ್ರೀ ಶಿವಾನಂದ್, ಸೋನಿಯಾ ಕ್ರಾಸ್ತ, ಸಫಿಯಾ ಅಯೂಬ್, ಕಾಫಿ ಬೆಳೆಗಾರರಾದ ವಿನಯ್ ಕುಮಾರ್, ಸ್ಟೀಫನ್ ಸಿಕ್ವೇರ, ಮಧ್ಯಾಹ್ನ ಬಿಸಿಯೂಟದ ಅಧಿಕಾರಿಯವರಾದ ಹೇಮಚಂದ್ರ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಕೆ ಬಿ ಶ್ರೀನಿವಾಸ್ , ಸರ್ಕಾರಿ ನೌಕರ ಸಂಘದ ರಾಮಯ್ಯ.ಬಿ.ಎಸ್, ಪ್ರಧಾನ ಕಾರ್ಯದರ್ಶಿ ಆದರ್ಶ ಫೈರೋಜ್ ಅಹಮದ್ ,ವೀಣಾ.ಎಂ ಕೆ, ವೇಣಿ, ಮಂಜಪ್ಪ, ಗಂಗಾಧರಪ್ಪ ಜಯಂತ್, ಆಯೂಬ್, ಸತೀಶ್ ಎನ್, ಜಿನ್ನಪ್ಪ, ಹೊನ್ನಯ್ಯ, ಸಂಜಯ್, ಗಣೇಶ್, ತಿರುಮಲೇಶ್,ಸುನಿಲ್, ಅಬ್ದುಲ್ ರಜಾಕ್, ಮೋಹಿದ್ದಿನ್, ರಘು, ಹಸೈನಾರ್ ಬಿಳಗುಳ, ಲಕ್ಷ್ಮಣ ಪೂಜಾರಿ, ಪ್ರದೀಪ್, ಅಣ್ಣು, ನಾಗರಾಜ್ ಎಂ.ಎಸ್, ಬಕ್ಕಿ ಮಂಜುನಾಥ್, ಶಾಲಾ ಶಿಕ್ಷಕರಾದ ನವೀನ್, ರೇಣುಕಾ, ಮಂಜುಳಾ, ಕೀರ್ತಿ, ಎಸ್ ಡಿ ಎಂ ಸಿ ಯವರು, ಸಿ.ಆರ್.ಪಿ, ಸಿ.ಆರ್.ಪಿ, ವಿವಿಧ ಶಾಲೆಗಳ ಶಿಕ್ಷಕರು, ಪೋಷಕರು ಮಕ್ಕಳು, ಗ್ರಾಮಸ್ಥರು, ಸ್ವಸಹಾಯ ಸಂಘಗಳ ಮಹಿಳೆಯರು, ಹಳೆ ವಿದ್ಯಾರ್ಥಿಗಳು, ಇತರರು ಹಾಜರಿದ್ದರು.ಮುಖ್ಯ ಶಿಕ್ಷಕರಾದ ನವೀನ್ ಬಿ.ಆರ್ ಸ್ವಾಗತಿಸಿದರು. ಶಿಕ್ಷಕರಾದ ಆದಿತ್ಯ ರವರು ನಿರೂಪಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ