dantha 1

 

 

ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ (ರಿ.) ಬಣಕಲ್ ಮತ್ತು ಎ.ಜೆ. ದಂತ ವಿಜ್ಞಾನಗಳ ಸಂಸ್ಥೆ ಮಂಗಳೂರು, ದಕ್ಷಿಣ ಕನ್ನಡ, ಹಾಗೂ ರೋಟರಿ ಸಂಸ್ಥೆ ಬೆಳ್ತಂಗಡಿ, ಇವರುಗಳ ಸಂಯುಕ್ತಾಶ್ರಯದಲ್ಲಿ ಬಣಕಲ್ ಚರ್ಚ್ ಸಮುದಾಯ ಭವನದಲ್ಲಿ ಉಚಿತ ಹಲ್ಲುಗಳ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ 07-12-2025 ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ದಯಾಕರ್ ಎಂ.ಎಂ. ಶ್ರೀ ಡೆಂಟಲ್ ಕ್ಲಿನಿಕ್ ಉಜಿರೆ, ಪ್ರಾಧ್ಯಾಪಕರು ಕೆವಿಜೆ ಡೆಂಟಲ್ ಕಾಲೇಜ್ ಸುಳ್ಯ ಇವರು ನೆರವೇರಿಸಿ ಮಾತನಾಡಿ ಹಲ್ಲುಗಳ ಸಂರಕ್ಷಣೆಯ ಮಾರ್ಗಸೂಚಿಗಳ ಬಗ್ಗೆ ತಿಳಿಸಿದರು. ಹಲ್ಲುಗಳು ಮನುಷ್ಯನ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ದಂತ ಸಮಸ್ಯೆಗಳಿಗೆ ಸ್ವಪರಿಹಾರ ಒಳ್ಳೆಯದಲ್ಲ ದಂತ ವೈದ್ಯರನ್ನ ಭೇಟಿ ಮಾಡಿ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುವುದು ಸೂಕ್ತ ಎಂದರು, ಹಾಗೆಯೇ ವಿಮುಕ್ತಿ ಸಂಸ್ಥೆಯ ಕಾರ್ಯಾಚರಣೆಗಳನ್ನು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಹರ್ಷ ಮೇಲ್ಬಿನ್ ಲಾಸ್ರದೋ ರವರು ಮಾತನಾಡಿ ವಿಮುಕ್ತಿ ಸಂಸ್ಥೆ ಇಪ್ಪತೈದು ವರ್ಷಗಳಿಂದ ಬಡವರಿಗೆ ದೀನರಿಗೆ ಹಿಂದುಳಿದ ಸಮುದಾಯಗಳಿಗೆ ಅಗತ್ಯ ವಸ್ತುಗಳ ಪೂರೈಕೆ ಮತ್ತು ಮಕ್ಕಳ ಶಿಕ್ಷಣ ಮಹಿಳಾ ಸಬಲೀಕರಣದ ಬಗ್ಗೆ ಕೆಲಸ ಮಾಡುತ್ತಾ ಬಂದಿದೆ ಎಂದು ತಿಳಿಸಿ, ಈ ಹಿಂದೆ ಸೇವೆ ಸಲ್ಲಿಸಿದವರನ್ನು ಜ್ಞಾಪಿಸಿದರು ಹಾಗೆಯೇ ದಂತ ಶಿಬಿರದ ಯಶಸ್ಸಿಗೆ ಶುಭಹಾರೈಸಿದರು.

ವಿಮುಕ್ತಿ  ಸಂಸ್ಥೆಯ ನಿರ್ದೇಶಕರಾದ ಫಾದರ್ ಅರುಣ್ ಲೋಬೊ ರವರು ಮಾತನಾಡಿ ದೇಹದ ಆರೋಗ್ಯಕ್ಕೆ ಬಾಯಿಯ ಆರೋಗ್ಯವೇ ಬಾಗಿಲು, ಆರೋಗ್ಯಕರ ಬಾಯಿ, ಆರೋಗ್ಯಕರ ದೇಹ ಎಂದರು. ಹಾಗೆಯೇ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಧನ್ಯವಾದಗಳನ್ನು ಹೇಳಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಗೋಣಿಬೀಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನವೀನ್ ಆನೆದಿಬ್ಬ ರವರನ್ನು ಅವರ ಸೇವೆ ಮತ್ತು ಸಾಮಾಜಿಕ ಕಳಕಳಿಯನ್ನು ಪ್ರಶಂಸಿಸಿ ಗೌರವ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ಮಾತನಾಡಿದ ಸಂಪನ್ಮೂಲ ವ್ಯಕ್ತಿ ನವೀನ್ ಆನೆ ದಿಬ್ಬರವರು ಸಮಾಜ ಸೇವೆಯಲ್ಲಿ ನನ್ನೊಂದಿಗೆ ಕೈಜೋಡಿಸಿದ ಎಲ್ಲರಿಗೂ ಈ ಗೌರವವನ್ನು ಸಮರ್ಪಿಸುತ್ತಿದ್ದೇನೆ ನಾವೆಲ್ಲರೂ ಸಮಾಜಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸೇವೆಯನ್ನು ಮಾಡುತ್ತಿದ್ದೇವೆ ಆದರೆ ಅವಶ್ಯಕತೆ ಮತ್ತು ಅಗತ್ಯವಿದ್ದಾಗ ಮಾಡುವ ಸೇವೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಶಿಬಿರದಲ್ಲಿ 21 ಸದಸ್ಯರ ವೈದ್ಯಕೀಯ ತಂಡ 156 ಜನರ ಹುಳುಕು ಹಲ್ಲು ತೆಗೆಯುವುದು, ಹಲ್ಲಿನ ನೋವಿನ ಚಿಕಿತ್ಸೆ, ಹಲ್ಲುಗಳ ಸಾಮಾನ್ಯ ತಪಾಸಣೆ, ಸಣ್ಣ ಕ್ಯಾವಿಟಿ ತುಂಬುವುದು, ವಸಡು ಮತ್ತು ಬಾಯಿ ರೋಗದ ತಪಾಸಣೆ, ಹಲ್ಲಿನ ಸ್ವಚ್ಛತೆಯ ಚಿಕಿತ್ಸೆಗಳನ್ನು ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಫಾದರ್ ಥಾಮಸ್ ರವರು ವಹಿಸಿದ್ದರು ಕಾರ್ಯಕ್ರಮದಲ್ಲಿ  ವಿಮುಕ್ತಿ ಸ್ವ ಸಹಾಯ ಸಂಘದ ಪ್ರತಿನಿಧಿಯಾದ ಶರ್ಪುನ್ನಿಸಾ ಎ.ಜೆ. ದಂತ ವಿದ್ಯಾಲಯ ಪ್ರಾಧ್ಯಾಪಕರಾದ ವೀಕ್ಷಾ,  ವಿಮುಕ್ತಿ ಸಂಸ್ಥೆಯ ವಿಂದ್ಯ ಯೋಗೇಶ್, ಸಿದ್ದಾಂತ ಪುತ್ತೂರು, ಪ್ರಶಾಂತಿ. ಶಶಿಕಲಾ. ರಮ್ಯಾ.   ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಗೀತಾ ಕೆ ಆರ್ ವಿಮುಕ್ತಿ ಸಮಾಜ ಸೇವಕ ಆರಿಫ್ ಬಣಕಲ್  ವಿಮುಕ್ತಿ ಸಂಘದ ಸದಸ್ಯರಾದ ಲಿಲ್ಲಿ  ಮೊನೀಸ್, ಭಾರತಿ, ರೇಖಾ,   ಗ್ರಾಮದ ಮಹಿಳೆಯರು ವಿಮುಕ್ತಿ ಸ್ವ ಸಹಾಯ ಸಂಘದ ಮಹಿಳೆಯರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಪ್ರಯೋಜನವನ್ನು ಪಡೆದುಕೊಂಡರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ