11Mudigere2A

 

 

ಕೇಂದ್ರ ಸರಕಾರದ ಫಸಲ್ ಭೀಮಾ ಯೋಜನೆಯ ಹವಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ ಅವ್ಯವಹಾರ ನಡೆದಿರುವುದರಿಂದ ರೈತರು ಕಟ್ಟಿದ ವಿಮೆ ಹಣ ಕೈಗೆ ಸಿಗದಂತಾಗಿದೆ ಎಂದು ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ.ಲಕ್ಷ್ಮಣ್‍ಕುಮಾರ್ ದೂರಿದರು.

ಅವರು ಗುರುವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಹವಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ 2024ರಿಂದ 2026ರ ಸಾಲಿನವರೆಗೆ ರೈತರು ಅಡಿಕೆ ಮತ್ತು ಕಾಳು ಮೆಣಸು ಬೆಳೆಗೆ ವಿಮೆ ಹಣ ಕಟ್ಟಿದ್ದಾರೆ. 2024 ರಿಂದ 26 ನೇ ಸಾಲಿನವರೆಗೆ ಅತಿಯಾದ ಮಳೆ ಬಿದ್ದಿದೆ. ಅಲ್ಲದೇ ಈ ಬಾರಿ ತಾಲೂಕಿನ ಅನೇಕ ಭಾಗದಲ್ಲಿ ಸುಮಾರು 250 ಇಂಚಿಗೂ ಅಧಿಕ ಮಳೆಯಾಗಿದೆ.  ಇದರಿಂದ ಅಡಿಕೆ. ಕಾಳುಮೆಣಸು, ಕಾಫಿ, ಏಲಕ್ಕಿ ಮುಂತಾದ ಬೆಳೆ ಹಾನಿಯಾಗಿ ರೈತರಿಗೆ ನಷ್ಟವುಂಟಾಗಿದೆ. 2024-25 ನೇ ಸಾಲಿನಲ್ಲಿ ವಿಮಾ ಕಂಪನಿ ಕೆಲ ರೈತರಿಗೆ ಕಟ್ಟಿದ ಹಣಕ್ಕಿಂತ ಕಡಿಮೆ ಮೊತ್ತ ಬಿಡುಗಡೆ ಮಾಡಿದ್ದು,  ಅನೇಕ ರೈತರಿಗೆ ವಿಮಾ ಮೊತ್ತ ಪಾವತಿಸದೇ ವಂಚಿಸಲಾಗಿದೆ ಎಂದು ಹೇಳಿದರು.

ತಾಲೂಕಿನಲ್ಲಿ ಅತಿ ಮಳೆಯಾಗುವ ಊರುಬಗೆ, ತ್ರಿಪುರ, ತರುವೆ ಸೇರಿದಂತೆ ಅನೇಕ ಗ್ರಾ.ಪಂ.  ವ್ಯಾಪ್ತಿಯ ಅಳವಡಿಸಿರುವ ಹವಮಾನ ಮಳೆ ಮಾಪನ ಕೇಂದ್ರಗಳು ಹಾಳಾಗಿದ್ದು,  ಮಳೆ ಪ್ರಮಾಣದ ಲೆಕ್ಕ ಸಿಕ್ಕಿಲ್ಲ. ಇದರಿಂದ ರೈತರಿಗೆ ಬೆಳೆ ವಿಮೆ ನೀಡಲು ಸಾಧ್ಯವಾಗಿಲ್ಲ.  ಇದೀಗ ಹಾಳಾಗಿರುವ ಮಳೆ ಮಾಪನ ಪ್ರದೇಶದ ಸಮೀಪವಿರುವ ಮಳೆ ಮಾಪನದ ಮಾಹಿತಿ ಪಡೆದು ವಿಮೆ ನೀಡಲು ಮುಂದಾದರೆ ರೈತರಿಗೆ ಅನ್ಯಾಯವಾಗುತ್ತದೆ ಎಂದು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಗಮನ ಸೆಳೆಯಲಾಗಿದೆ.  ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

ಊರುಬಗೆ ಗ್ರಾ.ಪಂ. ವ್ಯಾಪ್ತಿಯ ಹೊಸಕೆರೆ ಗ್ರಾಮದ ಮಳೆ ಮಾಪನ ಕೇಂದ್ರದಲ್ಲಿ ಆಗಿರುವ ಮಳೆಯ ಲೆಕ್ಕವನ್ನು ಪರಿಗಣಿಸಿ  ರೈತರಿಗೆ ವಿಮಾ ಪರಿಹಾರ ನೀಡಬೇಕು. ಇಲ್ಲವಾದರೆ ಚಳುವಳಿ ಮತ್ತು ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ ಅವರು, ಫಾ.ನಂ 50 ಮತ್ತು 53ಯಲ್ಲಿ ಆಗಿರುವ ಧೋಷವನ್ನು ಸರಿಪಡಿಸಲು ಅಧಿವೇಶನದಲ್ಲಿ ಚಿಕ್ಕಮಗಳೂರು ಶಾಸಕ ತಮ್ಮಯ್ಯ ಧ್ವನಿ ಎತ್ತಿದ್ದು, ಅವರಿಗೆ ರೈತರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಕೆಜಿಎಫ್ ಮಾಜಿ ಅಧ್ಯಕ್ಷ ಜಯರಾಂಗೌಡ ಮಾತನಾಡಿ, ಸರ್ಫೇಸಿ ಕಾಯಿದೆ ಕೂಡ ರೈತರಿಗೆ ಮಾರಕವಾಗಿದೆ. ಈ ಬಗ್ಗೆ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಸಂಸತ್‍ನಲ್ಲಿ ಧ್ವನಿ ಎತ್ತಿರುವುದು ಸ್ವಾಗತಾರ್ಹ. ಹಾಗೆಯೇ ಸರ್ಪೇಸಿ ಕಾಯಿದೆಯಲ್ಲಿ ಪ್ಲಾಂಟೇಷನ್ ಬೆಳೆ ಹೊರಗಿಡಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ಡಿ.ಎಲ್.ಅಶೋಕ್ ಕುಮಾರ್, ಮುಖಂಡರಾದ ಜಿ.ಹೆಚ್.ಹಾಲಪ್ಪಗೌಡ, ಎಸ್.ಪಿ.ರಾಜು, ಪಿ.ಕೆ.ನಾಗೇಶ್, ಸುರೇಂದ್ರ ಹ್ಯಾರಗುಡ್ಡೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ