IMG-20251209-WA0395

 

 

ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿಯ ಸುಂಕಸಾಲೆ  ಕೃಷಿಪತ್ತಿನ ಸಹಕಾರ ಸಂಘದ ವೃತ್ತಿಪರ ನಿರ್ದೇಶಕರಾಗಿ ಹಿರಿಯ ಕೃಷಿಕ ಅರಮನೆ ತಲಗೂರು ಗ್ರಾಮದ ಬೆದೆಮಕ್ಕಿ ಎ.ಆರ್.ಕೃಷ್ಣೇಗೌಡ ಅವರನ್ನು  ಆಯ್ಕೆ ಮಾಡಲಾಗಿದೆ.

ನೂತನ ವೃತ್ತಿಪರ ನಿರ್ದೇಶಕರಾಗಿ ಆಯ್ಕೆಯಾದ ಎ.ಆರ್. ಕೃಷ್ಣೇಗೌಡ ಅವರ ಅಭಿನಂದನಾ ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾದ ಡಿ.ವೈ.ಮಹೇಶ್ ಮಾತನಾಡಿ ಸಹಕಾರ ಸಂಘಗಳನ್ನು ಅಭಿವೃದ್ದಿ ಮಾಡಬೇಕಾದರೆ ಸಂಘಟಿತರಾಗಿ ಕೈಜೋಡಿಸಿದರೆ ಮಾತ್ರ ಎಲ್ಲ ಕಾರ್ಯಗಳನ್ನು ಸುಸೂತ್ರವಾಗಿ ಮಾಡಲು ಸಾಧ್ಯವಾಗುತ್ತದೆ. ವೃತ್ತಿಪರ ನಿರ್ದೇಶಕರಾಗಿ ಎ.ಆರ್.ಕೃಷ್ಣೇಗೌಡ ಅವರನ್ನು ಆಯ್ಕೆ ಮಾಡಿರುವುದು ಸೊಸೈಟಿಯ ಏಳಿಗೆಗೆ ಮತ್ತಷ್ಟು ಪುಷ್ಟಿ ಸಿಗಲಿದೆ. ಉತ್ಸಾಹಿಯಾದ ಇವರು ಸೊಸೈಟಿಯ ಅಭಿವೃದ್ದಿಗೆ ಶ್ರಮಿಸುವ ಪೂರ್ಣ ಭರವಸೆ ಇದೆ ಎಂದರು.

ಅಭಿನಂದನಾ ಸಮಾರಂಭದಲ್ಲಿ ನಿರ್ದೇಶಕರಾದ ಡಿ.ವಿ.ಅಶ್ವಿನಿ ಪುಟ್ಟಸ್ವಾಮಿ, ಡಿ.ಸಿ.ಆದೇಶ್, ಕೆ.ಎಂ.ಚಂದ್ರನ್, ಎಂ.ಎಸ್.ಕಾರ್ತಿಕ್, ಎಂ.ಪಿ.ವಿಜೇಂದ್ರ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ  ಎಚ್.ಎಚ್.ಯೋಗೀಶ್ ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ