kalasa

 

 

ಚಿಕ್ಕಮಗಳೂರು  ಜಿಲ್ಲೆಯ ಕಳಸ ತಾಲ್ಲೂಕಿನ ಕಳಕೊಡು ಹೊರನಾಡು, ಇಡಕಿಣಿ, ಸಂಸೆ ಸೇರಿದಂತೆ  ಇನ್ನೂ ಕೆಲ ಗ್ರಾಮಗಳಲ್ಲಿ ಕಂದಾಯ ಭೂಮಿಯನ್ನು ಮೀಸಲು ಅರಣ್ಯಕ್ಕೆ ಸೇರಿಸದಂತೆ ಕಳಸ ರೈತ ಕಾರ್ಮಿಕರ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.

ಚಿಕ್ಕಮಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ  ಸಮಿತಿ ಅಧ್ಯಕ್ಷ ಸುರೇಶ್ ಭಟ್, ಸಂಚಾಲಕರಾದ ಕೆ .ಎಲ್ ವಾಸು,ಕೆ. ಎಲ್. ಅಶೋಕ್ ಮಾತನಾಡಿ  ಈ ಗ್ರಾಮಗಳಲ್ಲಿನ ಕಂದಾಯ ಭೂಮಿಯನ್ನು ಪರಿಭಾವಿತ ಅರಣ್ಯದ ಹೆಸರಿನಲ್ಲಿ ಅರಣ್ಯಕ್ಕೆ ವಹಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕೃಷಿ ಮಾಡಿಕೊಂಡು ವಾಸ ಮಾಡುತ್ತಿರುವ ಪ್ರದೇಶದ ಪೂರಕ ದಾಖಲಾತಿಗಳೊಂದಿಗೆ ಆಕ್ಷೇಪಣೆಗಳಿದ್ದರೆ ವಿಚಾರಣೆಗೆ ಹಾಜರಾಗಿ ಲಿಖಿತ ರೂಪದಲ್ಲಿ  ಖುದ್ದು ನೀಡುವಂತೆ ಅರಣ್ಯಾಧಿಕಾರಿಗಳು  ನೋಟೀಸನ್ನು ನೀಡಿರುತ್ತಾರೆ ಎಂದರು.

ಮೊದಲ ಬಾರಿ ಕಡೂರಿನಲ್ಲಿರುವ ವ್ಯವಸ್ಥಾಪನಾಧಿಕಾರಿ ಕಛೇರಿಗೆ ದಾಖಲಾತಿ ಹಾಗೂ ಆಕ್ಷೇಪಣೆಯನ್ನು ಸಲ್ಲಿಸುವಂತೆ ತಿಳಿಸಲಾಗಿತ್ತು. ನಂತರ ಕಳಸದಲ್ಲೂ ಆಕ್ಷೇಪಣೆಯನ್ನು ಪಡೆದಿರುತ್ತಾರೆ. ಪ್ರತಿಬಾರಿಯೂ ಆಕ್ಷೇಪಣೆಯನ್ನು ಸಲ್ಲಿಸಿದ್ದು ಕಳಕೋಡು ಗ್ರಾಮದಲ್ಲಿ ಸ. ನಂ. 20, 55, 70 ಮತ್ತು 80ರಲ್ಲಿ ಒಟ್ಟು 550.19 ಎಕರೆ ಪ್ರದೇಶವನ್ನು ಮೀಸಲು ಅರಣ್ಯವನ್ನಾಗಿ ಸಂರಕ್ಷಿಸುವ ಪ್ರಸ್ತಾವನೆ ಇದೆ ಎಂದಿದ್ದಾರೆ.

ಸ. ನಂ. 20ರಲ್ಲಿ 123.30 ಎಕರೆ ಕಂದಾಯ. 100 ಎಕರೆ ಅರಣ್ಯ, ಸ. ನಂ. 70ರಲ್ಲಿ 129.00 ಕಂದಾಯ, 474 ಎಕರೆ ಅರಣ್ಯ. ಸ. ನಂ. 80ರಲ್ಲಿ 407,06 ಎಕರೆ ಕಂದಾಯ, 175 ಎಕರೆ ಅರಣ್ಯ, ಸ. ನಂ. 55ರಲ್ಲಿ ಇದು ಕಾಫಿ ಖರಾದ ಒಟ್ಟು 709.34 ಗೋಮಾಳ ಭೂಮಿ ಇದ್ದು, 749 ಅರಣ್ಯವಾಗಿರುತ್ತದೆ.  ಹೊರನಾಡು ಗ್ರಾಮದಲ್ಲೂ ಸ. ನಂ. 62, 65, 76, 81, 90, 98, 175, 229 ಮತ್ತು 166ರಲ್ಲಿ ಒಟ್ಟು  1299.39ಎಕರೆ ಪ್ರದೇಶವನ್ನು ಅನ್ನಪೂರ್ಣೇಶ್ವರಿ ಮೀಸಲು ಅರಣ್ಯವನ್ನಾಗಿ ಸಂರಕ್ಷಿಸುವ ಪ್ರಸ್ತಾವನೆ ಇದೆ ಎಂದು ತಿಳಿಸಿದ್ದಾರೆ.

3 ಬಾರಿ ದಾಖಲಾತಿಗಳನ್ನು ಮತ್ತು ಆಕ್ಷೇಪಣೆಯನ್ನು ಸಲ್ಲಿಸಲಾಗಿದೆ. ಈ ರೀತಿ ಪದೇ ಪದೇ ನೋಟೀಸನ್ನು ನೀಡುತ್ತಿರುವುದು ಇಲ್ಲಿನ ರೈತರಿಗೆ ಆತಂಕ ಮತ್ತು ಹಿಂಸೆಯನ್ನು ನೀಡಿದಂತಾಗುತ್ತಿದೆ ಎಂದು ಕಳವಳ ಹೊರಹಾಕಿದ್ದಾರೆ.
ಈಗ ಜಂಟಿ ಸರ್ವೆ ನಡೆಸಿ, ಕೃಷಿ ಭೂಮಿ ಮತ್ತು ಜನವಸತಿ ಪ್ರದೇಶಗಳನ್ನು ಹೊರತು ಪಡಿಸಿ, ಆರಣ್ಯದ ಗಡಿಗುರುತುಗಳನ್ನು ಮಾಡಬೇಕಾಗಿದೆ.  ಹಿಂದಿನಿಂದಲೂ ವಾಸವಿದ್ದು,  ಕೃಷಿ ಮಾಡಿರುವ ಪ್ರದೇಶವನ್ನು ಅರಣ್ಯಕ್ಕೆ ವಹಿಸುವುದನ್ನು  ಒಪ್ಪಲು ಸಾಧ್ಯವಿಲ್ಲ. ಲಭ್ಯವಿರುವ ಕಂದಾಯ ಭೂಮಿಯನ್ನು ಪರಿಭಾವಿತ ಅರಣ್ಯದ ಹೆಸರಿನಲ್ಲಿ ಅರಣ್ಯಕ್ಕೆ ವಹಿಸಬಾರದು ಎಂದು ಒತ್ತಾಯಿಸಿದ್ದಾರೆ.

1) ಈಗ ಫಹಣಿಗಳಲ್ಲಿ ಲಭ್ಯವಿರುವ ಗೋಮಾಳ ಭೂಮಿಯನ್ನು ಮೀಸಲು ಅರಣ್ಯವನ್ನಾಗಿ ಘೋಷಿಸಬಾರದು.
2) ಮಲೆನಾಡಿನ ಎಲ್ಲಾ ಭೂಮಿಗಳು ಪರಿಭಾವಿತ ಅರಣ್ಯದ ಚಹರೆಯನ್ನು ಹೊಂದಿರುವುದರಿಂದ ಮಲೆನಾಡಿನಲ್ಲಿ ಪರಿಭಾವಿತ ಅರಣ್ಯದ ಕಲ್ಪನೆಯನ್ನೇ ಕೈಬಿಡಬೇಕು.

2001-02ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಅರಣ್ಯ ಎಂದು ಘೋಷಿಸಿರುವ ಸರ್ವೆ ನಂಬರುಗಳಲ್ಲಿ  ಕೃಷಿ ಭೂಮಿಗಳಿದ್ದು, ಇವುಗಳ ಮಂಜೂರಾತಿಗೆ ಸಮಸ್ಯೆಯಾಗಿರುವುದರಿಂದ ಈ ಭೂಮಿಗಳನ್ನು ಮತ್ತೆ ಕಂದಾಯ ಭೂಮಿಯನ್ನಾಗಿ ಘೋಷಿಸಬೇಕು. ಎಲ್ಲಾ ಕೃಷಿ ಭೂಮಿಗಳನ್ನು ಅರಣ್ಯದಿಂದ ಹೊರತು ಪಡಿಸಿ. ಫಹಣಿ – ಪಟ್ಟಾ ಸಿಗದೆ ಇರುವವರಿಗೆ ನಮೂನೆ – 53, 57, 94 ಸಿ ಅಡಿಯಲ್ಲಿ ಅರ್ಜಿ ಕೊಟ್ಟವರಿಗೆ ಕೃಷಿ ಭೂಮಿ ಮತ್ತು ಮನೆಗಳಿಗೆ ಹಕ್ಕುಪತ್ರ ನೀಡಬೇಕು.
ಫಾರಂ ನಂ. 57ರಲ್ಲಿ ವಾಣಿಜ್ಯ ಬೆಳೆಗಳನ್ನು ಹೊರಗಿಟ್ಟಿರುವುದರಿಂದ ಮಲೆನಾಡಿಗರಿಗೆ ಅನ್ಯಾಯವಾಗಿದ್ದು, ಇದನ್ನು ಸರಿಪಡಿಸಬೇಕು.

100-110ವರ್ಷಗಳ ಹಿಂದೆ ಮೀಸಲು ಅರಣ್ಯಗಳ ಗಡಿಗುರುತುಗಳು ಎಲ್ಲಿಯೂ ಸರಿ ಇಲ್ಲದೆ ಇರುವುದರಿಂದ ಕೃಷಿ ಭೂಮಿ ಹೊರತು ಪಡಿಸಿ ಗಡಿಗುರುತುಗಳನ್ನು ಹೊಸತಾಗಿ ಮಾಡಬೇಕು.

ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯಲ್ಲಿ ಪರಿಶಿಷ್ಟ ಪಂಗಡದವರಿಗೆ ಇರುವಂತೆ ಕಾಲಮಿತಿಯನ್ನು ಪಾರಂಪರಿಕ ಅರಣ್ಯವಾಸಿಗಳಿಗೂ 2005, ಡಿಸೆಂಬರ್ 13ಕ್ಕೆ ನಿಗದಿ ಪಡಿಸಿ ಅರಣ್ಯ ಕೃಷಿ ಭೂಮಿಯ ಹಕ್ಕು ಪತ್ರಗಳನ್ನು ಫಲಾನುಭವಿಗಳಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ