ನಕಲಿ ದಾಖಲೆ ಸೃಷ್ಠಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ಓರ್ವನನ್ನು ಬಂಧಿಸಲಾಗಿದೆ.
ನಕಲಿ ದಾಖಲೆ ಮೂಲಕ ಅಷ್ಟು ಜಮೀನನ್ನೂ ತಮ್ಮ ಹೆಸರಿಗೆ ಖಾತೆ ಮಾಡಿಕೊಳ್ಳಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಮೂಡಿಗೆರೆ ಪೊಲೀಸ್ ಠಾಣೆಗೆ ತಹಶೀಲ್ದಾರ್ ದೂರ ನೀಡಿದ್ದರು.
ಮೂಡಿಗೆರೆ ಪೊಲೀಸರಿಂದ ಆರೋಪಿ ಗೋಣಿಬೀಡು ಹೋಬಳಿ ಮರೇಬೈಲ್ ಗ್ರಾಮದ ಮನ್ಮಥ (ನೇಮಣ್ಣಗೌಡ) ಬಂಧನವಾಗಿದೆ.
ಮೂಡಿಗೆರೆಯ ವಿವಿಧ ಸರ್ವೇ ನಂಬರ್ ಗಳಲ್ಲಿ 512 ಎಕರೆ 21 ಗುಂಟೆ ಕಬಳಿಸಲು ಯತ್ನ ಮಾಡಿ
512 ಎಕರೆಯನ್ನೂ ತಮ್ಮ ಪೂರ್ವಜರಾದ ಈರೇಗೌಡ ಸಾಗುವಳಿ ಮಾಡುತ್ತಿದ್ದರು ಎಂದು ಸುಳ್ಳು ದಾಖಲೆ ನೀಡಿದರು ಎನ್ನಲಾಗಿದೆ.
1956ರಲ್ಲಿ ಇನಾಂ ರದ್ಧತಿ ಕಾಯ್ದೆ ಪ್ರಕಾರ ಈ ಭೂಮಿ ಸರ್ಕಾರಕ್ಕೆ ವಾಪಸ್ ಹೋಗಿದೆ. 1974ರಲ್ಲಿ ಈರೇಗೌಡರಿಗೆ ಹಕ್ಕು ಮರು ವರ್ಗಾವಣೆಯಾಗಿದೆ ಎಂಬ ನಕಲಿ ದಾಖಲೆ ಸೃಷ್ಟಿ ಮಾಡಲಾಗಿದೆ.
ಮೇಲ್ನೋಟಕ್ಕೆ ಗ್ರಾಮ ಲೆಕ್ಕಾಧಿಕಾರಿಯ ನಕಲಿ ಸಹಿ, ನಕ್ಷೆ ಮಾಡಿರುವುದು ಕಂಡು ಬಂದಿದೆ.
ಮೂಡಿಗೆರೆ ತಹಶೀಲ್ದಾರ್ ಗೆ ಪೊಲೀಸ್ ಠಾಣೆಗೆ ದೂರು ನೀಡುವಂತೆ ಎಸಿ ಸೂಚನೆ ನೀಡಿದ್ದರು.
ಇತ್ತೀಚಿಗೆ ಈ ಅಂಶವನ್ನು ಕಂದಾಯ ಸಚಿವರು ಬಹಿರಂಗಪಡಿಸಿ ಕ್ರಮಕ್ಕೆ ಸೂಚಿಸಿದ್ದರು.
ಈ ಪ್ರಮಾಣದಲ್ಲಿ ಓರ್ವ ವ್ಯಕ್ತಿಯಿಂದ ಭೂಮಿ ಕಬಳಕೆ ಆಗಿದ್ದರೂ ಈ ಹಿಂದಿನ ಅಧಿಕಾರಿಗಳು ಗಮನಹರಿಸದೇ ಇರುವುದು ಮತ್ತು ಕ್ರಮ ತೆಗೆದುಕೊಳ್ಳದೇ ಇರುವುದು ಹಲವು ಅನುಮಾನಕ್ಕೂ ಕಾರಣವಾಗಿದೆ.





