19Mudigere1A

 

 

ರೈತರಿಗೆ ಅಧಿಕವಾಗಿ ಬೆಳೆ ಉತ್ಪನ್ನ ಮಾಡುವುದು ಹಾಗೂ ಆದಾಯ ತರುವ ಬಗ್ಗೆ ಕೃಷಿಗೆ ಸಂಬಂಧಪಟ್ಟ ಎಲ್ಲಾ ವಿಶ್ವವಿದ್ಯಾಲಯಗಳು, ಇಲಾಖೆ ಅಧಿಕಾರಿಗಳು ಗಮನಹರಿಸಿದರೆ ಕೃಷಿಯಿಂದ ಯಾರೂ ಹಿಂದೆ ಸರಿಯಲು ಸಾಧ್ಯವಿಲ್ಲ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

ಅವರು ಶುಕ್ರವಾರ ಕೆವಿಕೆ ಆವರಣದಲ್ಲಿ ಶಿಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಸೊಧನಾ ಕೇಂದ್ರ, ಕೆವಿಕೆ, ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಂಯಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕೃಷಿ ಮತ್ತು ತೋಟಗಾರಿಕಾ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆದಾಯ ಕಡಿಮೆಯಾದಾಗ ಸಮಾನ್ಯವಾಗಿ ರೈತರು ಕೃಷಿಯಿಂದ ಹೊರ ಹೋಗುತ್ತಾರೆ. ಇದು ಮುಂದುವರೆದರೆ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಆಯಾ ಪ್ರದೇಶದಲ್ಲಿ ಬೆಳೆಯುವ ಎಲ್ಲಾ ಬೆಳೆಗಳ ಉತ್ಪತ್ತಿಗೆ ಒತ್ತು ನೀಡಬೇಕು. ಜತೆಗೆ ಕಾರ್ಮಿಕರ ಬದುಕಿಗೆ ಸಹಾಯವಾಗುವ ಕಾರ್ಯ ಕೂಡ ಮಾಡಬೇಕು. ತಾನು ಸದನದಲ್ಲಿ ಕೃಷಿಕರ ಬಗ್ಗೆ ಹೆಚ್ಚಾಗಿ ಸದನ ಮತ್ತು ಮಂತ್ರಿಗಳೊಂದಿಗೆ ಮಾತನಾಡಿ ಗಮನ ಸೆಳೆಯುತ್ತಿದ್ದೇನೆಂದು ಹೇಳಿದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಕೃಷಿ ಮೇಳ ಎಂಬುವುದು ರೈತರ ಹಬ್ಬ. ಮೇಳದಲ್ಲಿ ಕೃಷಿ ಬಗ್ಗೆ ಹೊಸ ಸಂಶೊಧನೆ, ಆವಿಷ್ಕಾರ ಬಗ್ಗೆ ರೈತರು ತಿಳಿದುಕೊಳ್ಳಲು ಇದೊಂದು ಸುವರ್ಣಾವಕಾಶ. ಅಲ್ಲದೇ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಂದ ರೈತರು ಮಾಹಿತಿ ಪಡೆಯುವ ಅವಕಾಶ ಸಿಗುತ್ತದೆ. ವಿಜ್ಞಾನಿಗಳು ರೈತರಿಗೆ ಅನುಕೂಲವಾಗುವ ಸಂಶೊಧನೆ ನಡೆಸಿ ಯಶಸ್ಸು ಕಾಣುವ ಮೂಲಕ ರೈತರಿಗೆ ವರದಾನವಾಗಬೇಕೆಂದು ಹೇಳಿದರು.

ಶಿವಮೊಗ್ಗದ ಕೆ.ಶಿ.ನಾ.ಕೃ.ತೋ.ವಿ.ವಿ. ಕುಲಪತಿ ಡಾ. ಆರ್.ಸಿ.ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ಪ್ರತಿ ವರ್ಷ ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಸಾಲೆ ಉತ್ಪನ್ನಕ್ಕೆ ತುಂಬಾ ಬೇಡಿಕೆಯಿದೆ. ಜತೆಗೆ ಬೇಡಿಕೆಯಿರುವ ಬೆಳೆಗಳನ್ನು ಬ್ರಾಂಡ್ ಮಾಡಿ ಮಾರಾಟ ಮಾಡಲು ಮುಂದಾಗಬೇಕು. ಜಾಗತಿಕ ಮಟ್ಟದಲ್ಲಿ ಕಾಫಿ ಬೆಳೆ ಇದೀಗ 3.5ಲಕ್ಷ ಟನ್ ಉತ್ಪಾಧನೆಯಾಗುತ್ತಿದೆ. 2067ಕ್ಕೆ 7 ಲಕ್ಷ ಟನ್‍ಗೆ ಸಾಗುವ ನಿರೀಕ್ಷೆ ಇದೆ. ಹೊಸ ಹೊಸ ಉತ್ಪನ್ನ ತಯಾರಿಸಲು ಉತ್ತಮ ಅವಕಾಶವಿದ್ದು, ಯುವ ಜನತೆಯನ್ನು ಕೃಷಿಯತ್ತ ಕರೆತರುವ ಪ್ರಯತ್ನ ನಡೆಯಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಹ್ಯಾದ್ರಿ ಜಲಮುಕ್ತಿ ಎಂಬ ಹೊಸ ಭತ್ತದ ತಳಿಯನ್ನು ಲೋಕಾರ್ಪಣೆ ಮಾಡಲಾಯಿತು. ಕಿರು ಆಹಾರ ಸಂಸ್ಕರಣೆ ಘಟಕ ಸ್ಥಾಪನೆ ಬಗ್ಗೆ, ಕಾಳು ಮೆಣಸು, ಏಲಕಿ ಉತ್ಪಾಧನೆ ಮತ್ತು ಸಸ್ಯ ಸಂರಕ್ಷಣೆ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.

ಮಳೆದಲ್ಲಿ ಹಣ್ಣು, ಹೂವು ಸೇರಿದಂತೆ ವಿವಿಧ ಬಗೆಯ ಬೆಳೆಗಳ ನರ್ಸರಿ, ಹಳ್ಳಿಕಾರ್ ಹೋರಿ, ಗಿರಿತಳಿ, ತೆರಿಚೆರ್ರಿ ಕುರಿ, ಕೆಂಗ ಕುರಿ, ವಿವಿಧ ಜಾತಿಯ ಕೋಳಿ, ಕೃಷಿ ಯಂತ್ರೋಪಕರಣ ಸೇರಿದಂತೆ ಕೃಷಿ ಪರಿಕರಗಳ ಬಗ್ಗೆ ಪ್ರದರ್ಶನ ಮತ್ತು ಮಾರಾಟ ಮಳಿಗೆ ತೆರೆಯಲಾಗಿತ್ತು.

ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಡಿ.ಎಲ್.ಅಶೋಕ್‍ಕುಮಾರ್, ಮೂಡಿಗೆರೆ ಬೆಳೆಗಾರ ಸಂಘದ ಅಧ್ಯಕ್ಷ ಬಾಲಕೃಷ್ಣ, ರೈತ ಉತ್ಪಾದಕ ಸಂಸ್ಥೆ ಅಧ್ಯಕ್ಷ ಎಚ್.ಕೆ.ಪೂರ್ಣೇಶ್, ಟಿಎಪಿಸಿಎಂಸ್ ಅಧ್ಯಕ್ಷ ಎಂ.ಎಲ್. ಕಲ್ಲೇಶ್, ಕಪೆಕ್ ವ್ಯವಸ್ಥಾಪಕ ಸಿ.ಎನ್.ಶಿವಪ್ರಸಾದ್, ಕೃಷಿ ಉದ್ದಿಮೆದಾರ ಡಾ.ಬಿ.ಕೆ.ಕುಮಾರಸ್ವಾಮಿ, ತೋಟಗಾರಿಕೆ ಮಹಾವಿದ್ಯಾಲಯ ಡೀನ್ ಶ್ರೀನಿವಾಸ್, ಕೆವಿಕೆ ಮುಖ್ಯಸ್ಥ ಡಾ. ಎ.ಟಿ.ಕೃಷ್ಣಮೂರ್ತಿ, ಆಡಳಿತ ಮಂಡಳಿ ಸದಸ್ಯರಾದ ದೇವಿಕುಮಾರ್, ಕಾವೇರಿಯಪ್ಪ, ಶಶಾಂಕ್, ಶಿಕ್ಷಣ ನಿರ್ದೇಶಕ ಎಂ.ಡಿ.ಶಿವಪ್ರಕಾಶ್, ದುಶ್ಯಂತ್, ಗಿರಿರಾಜ್, ಡಾ.ಎಸ್.ಮಾವರ್ಕರ್, ಡಾ.ಸುಚಿತ್ರ, ಮಂಗಳ, ಸದಾನಂದ ಬಂಗೇರ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ