jci 3

 

 

ಜನಪರ ಸೇವೆ ಮಾಡುವ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಲು ಹಾಗೂ ನಾಯಕತ್ವ ಬೆಳೆಸಿಕೊಳ್ಳಲು ಜೇಸಿ ಸಂಸ್ಥೆ ಉತ್ತಮ ವೇದಿಕೆಯಾಗಿದೆ ಎಂದು ಜೇಸಿ ವಲಯ ಅಧ್ಯಕ್ಷ ಪ್ರಜ್ವಲ್‍ಜೈನ್  ಹೇಳಿದರು.

ಅವರು ಭಾನುವಾರ ಸಂಜೆ ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ಏರ್ಪಡಿಸಿದ್ದ  ಜೇಸಿಐ ಪದಾಧಿಕಾರಿಗಳ ಪದಗ್ರಹಣ   ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ನೆರವೇರಿಸಿ ಮಾತನಾಡಿದರು.

ಸಂಸ್ಥೆಯಿಂದ ಸಾಮಾನ್ಯ ಜನರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಮಾಡಬೇಕು. ಮುಖ್ಯವಾಗಿ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಮಾಡಬೇಕೆಂದು ಸಲಹೆ ನೀಡಿದರು.

ವಲಯ ಉಪಾಧ್ಯಕ್ಷ ಬಿ.ಎಂ.ಜಗತ್ ಮಾತನಾಡಿ, ದೇಶದಲ್ಲಿ 240 ರಾಷ್ಟ್ರದಲ್ಲಿ ಜೇಸಿ ಸಂಸ್ಥೆ ಜನಪರ ಕಾರ್ಯಗಳನ್ನು ಮಾಡುವ ಮೂಲಕ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ಸಂಸ್ಥೆಗೆ ಹೆಚ್ಚಾಗಿ ಯುವ ಜನತೆಯನ್ನು ಸೇರ್ಪಡೆಗೊಳಿಸಬೇಕು. ಈ ಮೂಲಕ  ವ್ಯಕ್ವಿತ್ವ ವಿಕಸನ ಮೂಡುಸವ ಜತೆಗೆ  ಸಂಸ್ಥೆ ಮಹತ್ವದ ಬಗ್ಗೆ ಅರಿವು ಮೂಡಿಸಬೇಕೆಂದು ಹೇಳಿದರು.

ನೂತನ ಅಧ್ಯಕ್ಷ ಎಂ.ಎಲ್. ಸುನಿಲ್ ಶೆಟ್ಟಿ ಅಧಿಕಾರ ವಹಿಸಿ ಮಾತನಾಡಿ, ತಾನು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ತನ್ನ ಪೋಷಕರು, ಗುರುಗಳು ಹಾಗೂ ಈ ಜೇಸಿ ಸಂಸ್ಥೆ ಕೂಡ ಒಂದಾಗಿದೆ. ನನಗೆ ಮೂಡಿಗೆರೆ ಸಚೇತನ ಯುವ ಸಂಘ, ಕ್ರಿಯೇಟೀವ್ ಮೈಂಡ್ಸ್, ಕನ್ನಡ ಸಾಹಿತ್ಯ ಪರಿಷತ್ತು, ಛಾಯಾಗ್ರಾಹಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಅನುಭವವಿದೆ. ಸುವರ್ಣ ವರ್ಷಗಳನ್ನು ಆಚರಿಸಿಕೊಂಡಿರುವ ಪ್ರತಿಷ್ಠಿತ ಮೂಡಿಗೆರೆ ಜೇಸಿಐ ನ ಅಧ್ಯಕ್ಷನಾಗುತ್ತಿರುವುದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ.  ತನ್ನ ಅವಧಿಯಲ್ಲಿ ಸಂಸ್ಥೆ ಉನ್ನತಮಟ್ಟದಲ್ಲಿ ಕೊಂಡೊಯ್ಯಲು ಶಕ್ತಿ ಮೀರಿ ಶ್ರಮಿಸುತ್ತೇನೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ವಕೀಲ ಡಿ.ಕೆ.ಪ್ರಸನ್ನ ಕುಮಾರ್, ಟಿಎಪಿಸಿಎಂಎಸ್ ಸದಸ್ಯ ಪಿ.ಜಿ.ಅನುಕುಮಾರ್, ನಿವೃತ್ತ ಶಿಕ್ಷಕಿ ಎಂ.ಡಿ.ಸಾವಿತ್ರಮ್ಮ ಭಾಗವಹಿಸಿದ್ದರು.

ಜೇಸಿ ನಿಕಟಪೂರ್ವ ಅಧ್ಯಕ್ಷ ಕೆ.ಕೆ.ಪ್ರದೀಪ್,  ನೂತನ ಕಾರ್ಯದರ್ಶಿ ಸುದೀಪ್ ತ್ರಿಪುರ, ಲೇಡಿ ಜೇಸಿ ಅಧ್ಯಕ್ಷೆ ಸಂದ್ಯಾಸುದೀಪ್, ಕಾರ್ಯದರ್ಶಿ ನಿಶ್ಚಿತಾ ಯತೀಶ್,  ಲೇಡಿ ಜೇಸಿ ನಿಕಟಪೂರ್ವ ಅಧ್ಯಕ್ಷೆ ರೇಖಾ ನಾಗರಾಜ್, ಜೂನಿಯರ್ ಜೇಸಿ  ಈಶಾನ್ವಿ, ಮೋದಿ  ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ