23Mudigere2A

 

 

ಹುಬ್ಬಳ್ಳಿಯಲ್ಲಿ ಜಾತಿ ಮನಸ್ಥಿತಿಯಿಂದ ಹೆತ್ತ ಮಗಳನ್ನೇ ಮರ್ಯಾದೆ ಹತ್ಯೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಮಂಗಳವಾರ ದಲಿತ ಸಂಘಟನಾ ಸಮಿತಿ, ಡಾ.ಬಿ.ಆರ್. ಅಂಬೇಡ್ಕರ್ ಧ್ವನಿ ಮುಖಂಡರು ಮೂಡಿಗೆರೆ ಶಿರಸ್ತೆದಾರ ಸುರೇಂದ್ರ ಬಾಬು ಅವರ ಮೂಲಕ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಡಿಎಸ್‍ಎಸ್ ಜಿಲ್ಲಾಧ್ಯಕ್ಷ ಸುಂದ್ರೇಶ್ ಹೊಯ್ಸಳಲು ಮಾತನಾಡಿ, ಹುಬ್ಬಳ್ಳಿ ಖಾಸಗಿ ಕಾಲೇಜಿನಲ್ಲಿ ವಿವೇಕನಂದ ಮತ್ತು ಮಾನ್ಯ ಇವರಿಬ್ಬರು ಡಿಗ್ರಿ ಓದುತ್ತಿದ್ದ ಸಮಯದಲ್ಲಿ ಪರಿಚಯವಾಗಿ ಕಳೆದ ಜೂನ್‍ನಲ್ಲಿ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದರು. 6 ತಿಂಗಳ ಗರ್ಭಿಣಿಯಾದ ಮಾನ್ಯ ಹಾಗೂ ಅವಳ ಪತಿಯಾದ ವಿವೇಕಾನಂದ ಕುಟುಂಬದವರ ಜಾತಿಯನ್ನು ಮುಂದಿಟ್ಟುಕೊಂಡು ಮಾನ್ಯ ಅವರ ಮೇಲೆ ಪ್ರಕಾಶ್‍ಗೌಡ ಪಾಟೀಲ್ ಎಂಬುವರು ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿ ಅಪರಾದ ಎಸಗಿದ್ದಾರೆ. ಇದು ಮಾನವ ಸಮಾಜವೆ ತಲೆ ತಗ್ಗಿಸುವ ಘಟನೆಯಾಗಿದೆ ಎಂದು ಹೇಳಿದರು.

ಇಂತಹ ಘಟನೆ ಎಲ್ಲಿಯೂ ಮರುಕಳಿಸಬಾರದು. ಮಾನ್ಯ ಅವರ ತಂದೆ ಪ್ರಕಾಶ್ ಗೌಡ ಪಾಟಿಲ್‍ರವರಿಗೆ ಮರಣ ದಂಡನೆ ವಿಧಿಸಬೇಕು. ದಲಿತ ಯುವಕ ವಿವೇಕಾನಂದ ಅವರಿಗೆ ಹಾಗೂ ಕುಟುಂಬಸ್ಥರಿಗೆ ಸರಕಾರ ಭದ್ರತೆ ನೀಡುವ ಜತೆಗೆ ತಕ್ಕ ಪರಿಹಾರ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ಸಂಘದ ತಾಲೂಕು ಅಧ್ಯಕ್ಷ ಪೂರ್ಣೇಶ್, ಕಸಬಾ ಹೋಬಳಿ ಅಧ್ಯಕ್ಷ ಸತಿಶ್ ನಾಗಲಪುರ, ಗೊಣಿಬೀಡು  ಹೋಬಳಿ ಅಧ್ಯಕ್ಷ ಚಂದ್ರಶೇಖರ್,  ಮುಖಂಡರಾದ ಧರ್ಮೇಶ್ ಗೌರಿಕೆರೆ, ವೆಂಕಟೇಶ್ ಘಟ್ಟದಹಳ್ಳಿ,  ಹರೀಶ್, ರವಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ