ಕರ್ನಾಟಕ ರಾಜ್ಯದ ಅತ್ಯಂತ ಎತ್ತರದ ಶಿಖರ ಪರ್ವತದಲ್ಲಿ ನೆಲೆಸಿರುವ ಶ್ರೀ ಮೇಲು ಗದ್ರಿಗೆ ಮುಳಪ್ಪ ಸ್ವಾಮಿಯ ಶ್ರೀಮಠಕ್ಕೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ಬಿ. ಹೊಸಹಳ್ಳಿ ಗ್ರಾಮದ ಬಸವನಗುಡಿ ಅಮ್ಮ ಅವರ ಮನೆ ಕುಟುಂಬದಿಂದ ನೂತನವಾದ ಗುರುವಿನ ಪ್ರಭಾವಳಿಯನ್ನು ಮಾಡಿ ಕೊಡಲಾಯಿತು ಎಂದು ಅಮ್ಮ ಅವರ ಮನೆ ಕುಟುಂಬದ ಸದಸ್ಯ ಮತ್ತು ಬಿ. ಹೊಸಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಚ್.ಎಂ. ಆಶ್ರಿತ್ ಗೌಡ ಅವರು ತಿಳಿಸಿದರು.
ಅವರು ಪತ್ರಿಕಾ ಹೇಳಿಕೆ ನೀಡಿ ಮಾಹಿತಿ ನೀಡಿ’ ನಮ್ಮ ಕುಟುಂಬವು ನಮ್ಮ ಹಿರಿಯರ ಕಾಲದಿಂದಲೂ ಶ್ರೀ ಮಠಕ್ಕೆ ನಡೆದುಕೊಳುತ್ತಿದ್ದು ಶ್ರೀ ಮಠದ ಗುರುಗಳ ಕೋರಿಕೆಯಂತೆ ಸ್ವಾಮಿಯ ಪ್ರಭಾವಳಿಯನ್ನು ಮಾಡಿಕೊಡುವುದಾಗಿ ನಮ್ಮ ಕುಟುಂಬದವರು ಒಪ್ಪಿದ್ದರು. ಅದರಂತೆ ನೂತನವಾಗಿ ಪ್ರಭಾವಳಿಯನ್ನು ಮಾಡಿಸಿ ಕುಟುಂಬ ಸದಸ್ಯರೊಂದಿಗೆ ತೆರಳಿ ಶ್ರೀ ಮಠಕ್ಕೆ ಪ್ರಭಾವಳಿಯನ್ನು ಅರ್ಪಿಸಿ ಅನ್ನದಾನ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕುಟುಂಬದ ಹಿರಿಯರಾದ ಹೆಚ್.ಆರ್ ಚಂದ್ರೇಗೌಡ, ಯೋಗೇಶ್ ಗೌಡ, ಮಹದೇವ್ ಗೌಡ, ಮಂಜುನಾಥ್ ಗೌಡ, ರಾಜೇಗೌಡ, ಎಚ್.ಟಿ ಪ್ರಸನ್ನ, ವರುಣ್,ರಮೇಶ್ ಗೌಡ, ಸುಬ್ರಾಯಗೌಡ, ಶ್ರೀಧರ್ ಗೌಡ, ವಿಜೇಂದ್ರ ಗೌಡ, ಸುಮನ್ ಗೌಡ ಧರ್ಮ, ಅರ್ಜುನ್, ಗೀತಾಸುರೇಶ್, ರತ್ನಮ್ಮ,ವಿಕ್ರಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.



