ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹಾಗೂ ಕೊಟ್ಟಿಗೆಹಾರ ಚರ್ಚ್ ದರ್ಮಗುರು ಫಾ.ವಿಲಿಯಂ ಬರ್ನಾರ್ಡ್ ಹಾಗೂ ಫಾ.ಥಾಮಸ್ ಕಲಘಟಗಿ ನೇತೃತ್ವದಲ್ಲಿ ಬಣಕಲ್ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಡಿ.ವಿ.ರೇಣುಕಾ ಹಾಗೂ ಠಾಣೆಯ ಸಿಬ್ಬಂದಿ ವರ್ಗದವರಿಗೆ ಕೇಕ್ ವಿತರಿಸಿ ಕ್ರಿಸ್ಮಸ್ ಶುಭಾಶಯ ಕೋರಿದರು.
ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಬಿ.ಮಂಜುನಾಥ್,ಜಾವಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಪಿ.ಪ್ರದೀಪ್ ಮತ್ತಿತರರಿಗೆ ಕೇಕ್ ವಿತರಿಸಿ ಹಬ್ಬದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಮುಖಂಡರಾದ ವಿನ್ಸೆಂಟ್ ಲೋಬೊ,ಪೆಡ್ಡಿ ಲೋಬೊ,ಬೇಬಿ ಪಿ.ಜಿ,ವಿಕ್ಟರ್ ಮಾರ್ಟಿಸ್,ಅಶೋಕ್ ಸೆರಾವೊ,ಬಿನು ವರ್ಗೀಸ್ ಇದ್ದರು.



