ಸ್ವಂತ ಕಾರಿಗೆ ಪೊಲೀಸ್ ಬೋರ್ಡ್ ಹಾಕ್ಕೊಂಡ್ ಧರ್ಮಸ್ಥಳಕ್ಕೆ ಹೋಗ್ತಿದ್ದ ಪೊಲೀಸ್ ಫ್ಯಾಮಿಲಿ ಕಾರನ್ನು ತಡೆದು ದಂಡ ವಿಧಿಸಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.
ಸ್ವಂತ ಕಾರಿಗೆ ಅಕ್ರಮವಾಗಿ ಪೊಲೀಸ್ ಬೋರ್ಡ್ ಹಾಕಿಕೊಂಡು ಪ್ರವಾಸ ಹೋಗುತ್ತಿದ್ದ ಪೊಲೀಸ್, ಕೊಟ್ಟಿಗೆಹಾರ ಚೆಕ್ ಪೋಸ್ಟ್ ಬಳಿ ಪೊಲೀಸ್ ತಪಾಸಣೆ ವೇಳೆ ಪೊಲೀಸ್ ಬೋರ್ಡ್ ಕಂಡು ಕಾರನ್ನು ತಡೆದ ಬಣಕಲ್ ಪಿಎಸ್ಐ ರೇಣುಕಾ ಅವರು ಪೊಲೀಸ್ ಬೋರ್ಡ್ ತೆಗೆಸಿದ್ದಾರೆ. ಐ.ಡಿ ಕಾರ್ಡ್ ತೋರಿಸಿದ್ರು ಸಹ ರಿಯಾಯಿತಿ ತೋರದೇ ದಂಡ ಹಾಕಿದ ಪಿಎಸೈ.

ಫ್ಯಾಮಿಲಿ ಜೊತೆ ಧಾರವಾಡದಿಂದ ಧರ್ಮಸ್ಥಳಕ್ಕೆ ತನ್ನ ಖಾಸಗಿ ಕಾರಿನಲ್ಲಿ ಪ್ರವಾಸ ಹೋಗ್ತಿದ್ದ ಪೊಲೀಸ್ ಒಬ್ಬರು ತನ್ನ ಕಾರಿಗೆ ಪೊಲೀಸ್ ಬೋರ್ಡ್ ಹಾಕಿಕೊಂಡು ತೆರಳುತ್ತಿದ್ದರು. ಸರ್ಕಾರಿ ಸಿಬ್ಬಂದಿಗಳು ತಮ್ಮ ಖಾಸಗಿ ವಾಹನಗಳಿಗೆ ಇಲಾಖೆಯ ಬೋರ್ಡ್ ಹಾಕಿಕೊಂಡು ಹೋಗಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ.
ಕಾನೂನು ಉಲ್ಲಂಘನೆ ಮಾಡಿದ್ದ ಪೊಲೀಸರಿಗೆ ದಂಡ ವಿಧಿಸಿದ ಬಣಕಲ್ ಪಿಎಸ್ಐ ಅವರ ಕರ್ತವ್ಯ ನಿಷ್ಠೆಯ ಬಗ್ಗೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.



