ಹೊಸವರ್ಷಾಚರಣೆ ಹಿನ್ನಲೆಯಲ್ಲಿ ಹೋಂ ಸ್ಟೇ ಮತ್ತು ರೆಸಾರ್ಟ್ ಗಳಿಗೆ ಪ್ರವಾಸಿಗರು ಹೆಚ್ಚಿಗೆ ಆಗಮಿಸುತ್ತಿದ್ದು ಮದ್ಯ ಇತರೆ ಪಾರ್ಟಿಗಳನ್ನು ಆಯೋಜಿಸಿದರೆ ದೊಡ್ಡ ಮಟ್ಟದ ಡಿಜೆ ಬಳಸಿದಲ್ಲಿ ಸಿ.ಎಲ್.5 ಪರವಾನಿಗೆಯನ್ನು ಖಡ್ಡಾಯವಾಗಿ ಹೊಂದಿರಬೇಕು. ಎಂದು ಮೂಡಿಗೆರೆ ಅಬಕಾರಿ ಉಪ ಅಧಿಕ್ಷಕ ಕೀರ್ತಿಕುಮಾರ್ ಟಿ.ತಿಳಿಸಿದ್ದಾರೆ.
ಮೂಡಿಗೆರೆ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು. ಹೊಸವರ್ಷ ಆಚರಣೆಯಲ್ಲಿ ಹೋಂ ಸ್ಟೇ ಮತ್ತು ರೆಸಾರ್ಟ್‌ನಲ್ಲಿ ಮದ್ಯದ ಪಾರ್ಟಿ ಆಯೋಜಿಸಿಕೊಂಡಲ್ಲಿ ಗೋವ ಮತ್ತು ಹೊರರಾಜ್ಯಗಳಿಂದ ಮದ್ಯ ತೆರಿಗೆ ರಹಿತ ಮದ್ಯಗಳಿಗೆ ಅವಕಾಶ ನೀಡಬಾರದು ಎಂದು ತಿಳಿಸಿದರು.
ಆಕಸ್ಮಿಕವಾಗಿ ಅಲ್ಲಿಗೆ ಬಂದಾಗ ಅಂತಹ ಮದ್ಯಗಳು ಕಂಡು ಬಂದಲ್ಲಿ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಅದಕ್ಕೆ ಅವಕಾಶ ನೀಡದೆ ಕಾನೂನಿನ ನಿಯಮದ ರೀತಿಯಲ್ಲಿ ನಡೆದು ಕೊಳ್ಳುವಂತೆ ಮನವಿಗೊಂಡರು.
ಹೊಸ ವರ್ಷಾಚರಣೆ ಯಲ್ಲಿ 100-200 ಜನ ಡಿಜೆ ಪಾರ್ಟಿಗೆ ಸೇರಿದರೆ ಒಂದು ದಿನಕ್ಕೆ 11500 ರೂ ಕಟ್ಟಿದಲ್ಲಿ ಪರವಾನಿಗೆ ನೀಡುತ್ತೇವೆ. ಅದನ್ನು ಒಂದೆರಡು ದಿನ ಮುಂಚಿತವಾಗಿ ಪಡೆಯಬಹುದು ಎಂದರು.
ಇತ್ತೀಚಿನ ದಿನಗಳಲ್ಲಿ ಗಾಂಝಾ ,ಅಫಿಮಿನಂತ ಮಾದಕ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಅದನು ಸಂಪೂರ್ಣ ನಿರ್ಭಂದಿಸುವಂತೆ ಪ್ರವಾಸಿಗರ ಕೈಯಲಿ ಅಂಥಹ ಮಾದಕ ವಸ್ತುಗಳು ಕಂಡು ಬಂದರೆ ನೀವು ಅವರುಗಳಿಗೆ ಏನು ಮಾಡಲು ಹೋಗಬೇಡಿ ಏಕೆಂದರೆ ಅವರು ನಿಮಗೆ ಅಪಾಯ ಮಾಡುವ ಸಾಧ್ಯತೆಗಳೆ ಅಧಿಕವಾಗಿರುತ್ತದೆ. ನಮ್ಮ ಖಾಸಗಿ ದೂರವಾಣಿ ಸಂಖ್ಯೆಗೆ ಕರೆ ಮಾಡಿದಲ್ಲಿ ನಮ್ಮ ತಂಡ ಬಂದು ಅವರನ್ನು ವಶಕ್ಕೆ ತೆಗೆದುಕೊಳ್ಳುವುದಾಗಿ ಮತ್ತು ಹೋಂ ಸ್ಟೇ ಮತ್ತು ರೆಸಾರ್ಟ್ ಹಾಗೂ ಮಾಲೀಕರ ಹೆಸರುಗಳನ್ನು ಗೌಪ್ಯವಾಗಿರಿಸಲಾಗುವುದು ಎಂದರು.

ಇನ್ಸಪೆಕ್ಟರ್ ನಾರಾಯಣ್, ಹೋಂ ಸ್ಟೇ ಮತ್ತು ರೆಸಾರ್ಟ್ ಸಂಘದ ಅಧ್ಯಕ್ಷರಾದ ಜಿ.ಎಂ. ಜಗದೀಶ್ ಗುತ್ತಿ, ಕಾರ್ಯದರ್ಶಿ ರಾಘವೇಂದ್ರ ಕೆಸವಳಲು, ತಾಲ್ಲೂಕಿನ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರುಗಳು ಉಪಸ್ಥಿತರಿದ್ದರು.



