garanti

 

 

ದಿನಾಂಕ 26/12/2025 ರಂದು  ಬಿ.ಎಸ್‌ ಜಯರಾಮ್‌   ಅಧ್ಯಕ್ಷರು ಮೂಡಿಗೆರೆ ತಾಲ್ಲೂಕು ಗ್ಯಾರಂಟಿ  ಯೋಜನೆಗಳ ಅನುಷ್ಠಾನ ಸಮಿತಿ ಇವರ ಅಧ್ಯಕ್ಷತೆಯಲ್ಲಿ  ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ  ಗ್ಯಾರಂಟಿ  ಯೋಜನೆ ಅನುಷ್ಠಾನ ಸಮಿತಿ ಸಭೆ ನಡೆಯಿತು.

ಶ್ರೀಮತಿ ದಯಾವತಿ ಎಂ.ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಮೂಡಿಗೆರೆ ರವರು ಹಾಜರಿದ್ದ ಗ್ಯಾರಂಟಿ  ಯೋಜನೆ ಅನುಷ್ಠಾನ ಸಮಿತಿ ಸದಸ್ಯರುಗಳಿಗೆ ಹಾಗೂ ಅನುಷ್ಠಾನ ಇಲಾಖೆಯ ಅಧಿಕಾರಿಗಳಿಗೆ ಸ್ವಾಗತ  ಕೋರಿದರು.

ಉಪಸ್ಥಿತಿ:

  1. ಬಿ.ಎಸ್.‌ ಜಯರಾಮ್‌ ಮಾನ್ಯ ಅಧ್ಯಕ್ಷರು, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
  2. ಶ್ರೀಮತಿ ದಯಾವತಿ ಎಂ. ಸದಸ್ಯ ಕಾರ್ಯದರ್ಶಿ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
  3. ಹೆಚ್.ಪಿ. ರಮೇಶ್‌, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
  4. ಹರ್ಷ ಮೆಲ್ವಿನ್‌ ಲಾಸ್ರದೋ, ನಿರ್ದೇಶಕರು ಕ್ರಿಶ್ಛಿಯನ್‌ ಅಭಿವೃದ್ದಿ ನಿಗಮ ಹಾಗೂ ಮಾನ್ಯ ಸದಸ್ಯರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಮೂಡಿಗೆರೆ
  5. ಗುರುವಪ್ಪ, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
  6. ಶ್ರೀನಿವಾಸ್‌, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
  7. ನವೀನ್‌, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ  ಯೋಜನೆ ಅನುಷ್ಠಾನ ಸಮಿತಿ
  8. ಶ್ರೀಮತಿ ಲೀಲಾವತಿ, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
  9. ದೀಕ್ಷಿತ್‌, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
  10. ಶ್ರೀಮತಿ ಜಯಮ್ಮ, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
  11. ಅರುಣ್‌, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ

ಸಭೆಯಲ್ಲಿ ಈ ಕೆಳಗಿನ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

ಅನ್ನಭಾಗ್ಯ ಯೋಜನೆ:

ಆಹಾರ ಶಿರಸ್ತೇದಾರರು ಸಭೆಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಒಟ್ಟು 843 ಬಿಪಿಎಲ್‌ ಪಡಿತರಚೀಟಿಯನ್ನು ರದ್ದುಪಡಿಸಿ ಎಪಿಎಲ್‌ ಕಾರ್ಡಿಗೆ ವರ್ಗಾಯಿಸಲಾಗಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದ 30 ಸದಸ್ಯರ ಬಿ.ಪಿ.ಎಲ್‌. ಕಾರ್ಡ್‌ಗಳು ಅನರ್ಹಗೊಂಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಹಾಗೂ ಮದುವೆಯಾಗಿ ಹೊರಗೆ ಹೋದ ಹೆಣ್ಣುಮಕ್ಕಳ ಹೆಸರು ರೇಷನ್‌ ಕಾರ್ಡ್‌ ನಲ್ಲಿ ಇದ್ದ ಕಾರಣದಿಂದಾಗಿ ಬಿ.ಪಿ.ಎಲ್. ಕಾರ್ಡ್‌ ಅನರ್ಹಗೊಂಡಿದ್ದಲ್ಲಿ                1ಕೆ.ಜಿ. ಅಕ್ಕಿಗೆ ರೂ.34/- ದಂಡ ಪಾವತಿಸಿ ಹೆಸರನ್ನು ಡಿಲೀಟ್‌ ಮಾಡಿಸಿ  ಬಿ.ಪಿ.ಎಲ್. ಕಾರ್ಡನ್ನು ಉಳಿಸಿಕೊಳ್ಳಬಹುದು ಎಂದು ಸಭೆಯಲ್ಲಿ ತಿಳಿಸಿದರು.

ಗೃಹಲಕ್ಷ್ಮಿ ಯೋಜನೆ:

ಇಲಾಖಾಧಿಕಾರಿಗಳು ಗೃಹಲಕ್ಷ್ಮಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು.  ತಾಲ್ಲೂಕಿನಲ್ಲಿ ಒಟ್ಟು 29202 ಗೃಹಲಕ್ಷ್ಮಿ ಫಲಾನುಭವಿಗಳು ಇದ್ದು, ಇದರಲ್ಲಿ 28734 ಫಲಾನುಭವಿಗಳಿಗೆ ಯೋಜನೆಯ ಹಣ ಬರುತ್ತಿರುವುದಾಗಿ ಹಾಗೂ ಯೋಜನೆಯಿಂದ ಬಾಕಿ ಉಳಿದ ರೇಷನ್‌ ಕಾರ್ಡ್‌ಗಳು  NPCI  114, IT/GST 210, ತಿದ್ದುಪಡಿ/ಮರಣ 144  ಒಟ್ಟು 468 ಇರುತ್ತದೆ.     ಆಗಸ್ಟ್-2025 ರ ಮಾಹೆಯವರೆಗೆ ಗೃಹಲಕ್ಷ್ಮೀ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗಿರುವುದಾಗಿ ತಿಳಿಸಿದರು.

ಗೃಹಜ್ಯೋತಿ ಯೋಜನೆ:

ಇಲಾಖಾಧಿಕಾರಿಗಳು ಗೃಹಜ್ಯೋತಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಒಟ್ಟು 25767 ಗೃಹಜ್ಯೋತಿ ಫಲಾನುಭವಿಗಳು ಇದ್ದು, ಸರ್ಕಾರದಿಂದ ರೂ. 9402574/- ಅನುದಾನ ಬಿಡುಗಡೆಯಾಗಿರುತ್ತದೆ. ಹಾಗೂ ಸರ್ಕಾರದ ಆದೇಶದಂತೆ 127 ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್‌ ನೀಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಹಾಗೂ ಗೃಹಜ್ಯೋತಿ ಯೋಜನೆಯಲ್ಲಿ ಅಧಿಕ ವಿದ್ಯುತ್‌ ಬಳಸಿರುವ ಫಲಾನುಭವಿಗಳ ಸಂಖ್ಯೆ 7387 ಇದ್ದು, ರೂ. 2414428/- ಬಿಲ್‌ ಪಾವತಿಸಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಯುವನಿಧಿ ಯೋಜನೆ:

ಯುವನಿಧಿ ಯೋಜನೆಗೆ ನವಂಬರ್‌ ಮಾಹೆಯವರೆಗೆ 457 ವಿಧ್ಯಾರ್ಥಿಗಳು ನೊಂದಣಿಯಾಗಿರುತ್ತಾರೆ. ಇವರಿಗೆ ಕೌಶಲ್ಯಾಭಿವೃದ್ದಿ ತರಭೇತಿಗೆ ನೊಂದಣಿ ಮಾಡಿಕೊಳ್ಳುವಂತೆ ತಿಳಿಸಿದ್ದು, 18 ವಿದ್ಯಾರ್ಥಿಗಳು ನೊಂದಣಿಯಾಗಿದ್ದು, ಮೂಲ ದಾಖಲಾತಿಗಳನ್ನು ಸಲ್ಲಿಸಿದ್ದಲ್ಲಿ ಕೌಶಲ್ಯಾಭಿವೃದ್ದಿ ತರಭೇತಿಯನ್ನು ನೀಡಲಾಗುವುದೆಂದು ಸಭೆಯಲ್ಲಿ ತಿಳಿಸಿದರು.

ಶಕ್ತಿ ಯೋಜನೆ:

ತಾಲ್ಲೂಕಿನಲ್ಲಿ  ಡಿಸಂಬರ್-2025 ರ ಮಾಹೆಯಲ್ಲಿ 261646 ಫಲಾನುಭವಿಗಳು ಪ್ರಯಾಣಿಸಿದ್ದು, ರೂ.13170317/- ಸರ್ಕಾರದಿಂದ ಅನುದಾನ ಬಿಡುಗಡೆಯಾಗಿರುತ್ತದೆ.    ಕೊಟ್ಟಿಗೆಹಾರ -ಮಾಗುಂಡಿ ಮಾರ್ಗವಾಗಿ ಯಾವುದೇ ಸರ್ಕಾರಿ ಬಸ್‌ ಇಲ್ಲದಿರುವುದರಿಂದ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಬಸ್‌ ವ್ಯವಸ್ಥೆ ಮಾಡಲು ಸಭೆಯಲ್ಲಿ ಚರ್ಚಿಸಿ, ಈ ಬಗ್ಗೆ ಕ್ರಮವಹಿಸಲು  ತೀರ್ಮಾನಿಸಲಾಯಿತು.

ಮೂಡಿಗೆರೆಯ ಬಿಳಗುಳದಲ್ಲಿ ವೇಗಧೂತ ಬಸ್‌ ಗಳ ನಿಲುಗಡೆಗೆ ಇಲಾಖೆಯಿಂದ ಫಲಕ ಅಳವಡಿಸಿದ್ದು, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಯಿಂದ ಅಭಿನಂದನೆ ಸಲ್ಲಿಸಲಾಯಿತು.

 ಇತರೆ ವಿಷಯಗಳು:

ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶವನ್ನು ಜನವರಿ-2026 ರ ಮಾಹೆಯಲ್ಲಿ ಚಿಕ್ಕಮಗಳೂರಿನಲ್ಲಿ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಮಾನ್ಯ ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು.

ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರ ಸರ್ಕಾರಿ ವಾಹನ ಬೇರೆ ತಾಲ್ಲೂಕಿನಲ್ಲಿ ಓಡಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವರದಿಯಾಗಿದ್ದು, ಈ ಕುರಿತು ಸರಿಯಾದ ಮಾಹಿತಿ ಪಡೆಯದೇ ಏಕಾ-ಏಕಿ ಸುದ್ದಿ ಮಾಡಿರುವುದನ್ನು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯು ಖಂಡಿಸಿರುವುದಾಗಿ ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು.

ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯಿಂದ ತಾಲ್ಲೂಕಿನ ಸುಮಾರು 19 ಕ್ಕಿಂತಲೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಗ್ರಾಮ ಮಟ್ಟದಲ್ಲಿ ಅನುಷ್ಠಾನವಾಗುತ್ತಿರುವ ಬಗ್ಗೆ ಸಮರ್ಪಕವಾಗಿ ಪರಿಶೀಲಿಸಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಗೆ ವರದಿ ನೀಡಲು ಗ್ಯಾರಂಟಿ ಯೋಜನೆ ಸದಸ್ಯರುಗಳನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.

1          ಬಿದರಹಳ್ಳಿ       ಶ್ರೀ ಜಯರಾಮ್‌, ಶ್ರೀ ನವೀನ್‌

2          ಹಳೇಮೂಡಿಗೆರೆ           ಶ್ರೀ ಶ್ರೀನಿವಾಸ್‌, ಶ್ರೀಮತಿ ಜಯಮ್ಮ, ಶ್ರೀ ಹೊಸಕೆರೆ ರಮೇಶ್‌

3          ಹೆಸಗಲ್‌          ಶ್ರೀ ಗುರುವಪ್ಪ, ಶ್ರೀ ಭರತ್‌, ಶ್ರೀ ಹೊಸಕೆರೆ ರಮೇಶ್‌

4          ತ್ರಿಪುರ  ಶ್ರೀ ಅರುಣ್‌, ಶ್ರೀ ಹರ್ಷ ಮೆಲ್ವಿನ್‌, ಶ್ರೀಮತಿ ಲೀಲಾವತಿ

5          ಬಿ.ಹೊಸಳ್ಳಿ      ಶ್ರೀ ಅರುಣ್‌, ಶ್ರೀ ಹರ್ಷ ಮೆಲ್ವಿನ್‌, ಶ್ರೀ ಚಂದ್ರಯ್ಯ

6          ಫಲ್ಗುಣಿ           ಶ್ರೀ ಅರುಣ್‌, ಶ್ರೀ ಹರ್ಷ ಮೆಲ್ವಿನ್‌, ಶ್ರೀ ಚಂದ್ರಯ್ಯ, ಶ್ರೀ ಇರ್ಪಾನ್‌

7          ತರುವೆ  ಶ್ರೀ ಹರ್ಷ ಮೆಲ್ವಿನ್‌, ಶ್ರೀಮತಿ ಲೀಲಾವತಿ, ಶ್ರೀ ಹೊಸಕೆರೆ ರಮೇಶ್‌

8          ಬಣಕಲ್‌          ಶ್ರೀ ಇರ್ಪಾನ್‌, ಶ್ರೀ ಹರ್ಷ ಮೆಲ್ವಿನ್‌, ಶ್ರೀಮತಿ ಲೀಲಾವತಿ,

ಶ್ರೀ ಚಂದ್ರಯ್ಯ

9          ಊರುಬಗೆ        ಶ್ರೀ ನಾರಾಯಣ, ಶ್ರೀ ದೀಕ್ಷಿತ್‌, ಶ್ರೀ ಹೊಸಕೆರೆ ರಮೇಶ್‌

10        ಹಂತೂರು       ಶ್ರೀ ನಾರಾಯಣ, ಶ್ರೀ ದೀಕ್ಷಿತ್‌,

11        ಕಿರುಗುಂದ       ಶ್ರೀ ನಾರಾಯಣ, ಶ್ರೀ ದೀಕ್ಷಿತ್‌,

12        ಗೋಣಿಬೀಡು   ಶ್ರೀ ನಾರಾಯಣ, ಶ್ರೀ ದೀಕ್ಷಿತ್‌,

13        ಚಿನ್ನಿಗಾ           ಶ್ರೀ ನಾರಾಯಣ, ಶ್ರೀ ದೀಕ್ಷಿತ್‌,

14        ಬೆಟ್ಟಗೆರೆ           ಶ್ರೀ ಅರುಣ್‌, ಶ್ರೀ ಹರ್ಷ ಮೆಲ್ವಿನ್‌

15        ದಾರದಹಳ್ಳಿ     ಶ್ರೀ ದೀಕ್ಷಿತ್‌, ಶ್ರೀ ಹೊಸಕೆರೆ ರಮೇಶ್‌

16        ನಂದೀಪುರ      ಶ್ರೀ ಶ್ರೀನಿವಾಸ್‌, ಶ್ರೀಮತಿ ಜಯಮ್ಮ, ಶ್ರೀ ಗುರುವಪ್ಪ

17        ಮಾಕೋನಹಳ್ಳಿ           ಶ್ರೀ ಶ್ರೀನಿವಾಸ್‌, ಶ್ರೀಮತಿ ಜಯಮ್ಮ, ಶ್ರೀ ಹೊಸಕೆರೆ ರಮೇಶ್‌

18        ಕುಂದೂರು      ಶ್ರೀ ಅರುಣ್‌, ಶ್ರೀ ಹರ್ಷ ಮೆಲ್ವಿನ್‌, ಶ್ರೀಮತಿ ಲೀಲಾವತಿ, ಶ್ರೀ ಚಂದ್ರಯ್ಯ

19        ಪಟ್ಟಣ ಪಂಚಾಯಿತಿ   ಶ್ರೀಮತಿ ಜಯಮ್ಮ, ಶ್ರೀ ಹೊಸಕೆರೆ ರಮೇಶ್‌

ವಂದನಾರ್ಪಣೆಯೊಂದಿಗೆ  ಸಭೆಯನ್ನು  ಮುಕ್ತಾಯಗೊಳಿಸಲಾಯಿತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ