Hunsure 2

 

 

ಮೈಸೂರು ಜಿಲ್ಲೆ ಹುಣಸೂರು   ಪಟ್ಟಣದಲ್ಲಿ ಹಾಡಹಗಲೇ ಚಿನ್ನದಂಗಡಿ ದರೋಡೆ   ನಡೆದಿದೆ. ಭಾನುವಾರ ಮಟಮಟ ಮಧ್ಯಾಹ್ನ 5 ಕ್ಕೂ ಹೆಚ್ಚು ಜನರ ಗ್ಯಾಂಗ್‌ವೊಂದು ಏಕಾಏಕಿ   ಚಿನ್ನದಂಗಡಿಗೆ ನುಗ್ಗಿ ಬರೋಬ್ಬರಿ 4 ರಿಂದ 5 ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳನ್ನ ದರೋಡೆ ಮಾಡಿದೆ.

ಹುಣಸೂರು ಬಸ್ ನಿಲ್ದಾಣದ ಹಿಂಭಾಗದಲ್ಲಿ ಬೈಪಾಸ್‌ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ʼ ಚಿನ್ನಂಗಡಿಯಲ್ಲಿ ದರೋಡೆ ನಡೆದಿದೆ. ದರೋಡೆಕೋರರು ಗನ್‌ ತೋರಿಸಿ ಸುಮಾರು 4 ರಿಂದ 5 ಕೋಟಿ ಮೌಲ್ಯದಷ್ಟು ಚಿನ್ನ-ವಜ್ರಾಭರಣ ದರೋಡೆ ಮಾಡಿ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಹುಣಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.

ದರೋಡೆ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್  ಮಾತನಾಡಿ ;

5 ಜನರಿಂದ ದರೋಡೆ ನಡೆದಿದೆ. ಗನ್ ತೋರಿಸಿ ದರೋಡೆ ಮಾಡಿದ್ದು ಇಬ್ಬರು ಮುಖ ಮುಚ್ಚಿಕೊಂಡಿದ್ದಾರೆ. ಮತ್ತೆ ಮೂವರು ಮುಖ ಮುಚ್ಚಿಕೊಂಡಿಲ್ಲ. ಎಷ್ಟು ಪ್ರಮಾಣದ ಚಿನ್ನಾಭರಣ ದೋಚಿದ್ದಾರೆ ಎಂಬ ಮಾಹಿತಿ ಇನ್ನೂ ಲಭ್ಯವಿಲ್ಲ. ತನಿಖೆಗೆ ಐದು ತಂಡ ರಚನೆ ಮಾಡಿದ್ದೇವೆ ಅಂತ ತಿಳಿಸಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಬಂದಿದ್ದ ದರೋಡೆಕೋರರು, ಹಿಂದಿ ಮಾತಾಡುತ್ತಿದ್ದರು. ಎಲ್ಲರ ಕೈಯಲ್ಲೂ ಗನ್ ಇದ್ವು ಎಂದು ಹೇಳಿದ್ದಾರೆ. ಸದ್ಯ ತನಿಖೆ ಪ್ರಗತಿಯಲ್ಲಿದೆ.

ಈ ಮಧ್ಯೆ ಜ್ಯುವೆಲರಿ ಶಾಪ್‌ ಮಾಲೀಕ   ರಶೀದ್   ಮಾತನಾಡಿ ; 5 ಜನ ದರೋಡೆಕೋರರು ಬಂದಿದ್ದರು. ಇಬ್ಬರ ಕೈಯಲ್ಲಿ ಎರಡೆರಡು ಗನ್ ಇದ್ವು. ಮತ್ತೆ ಮೂವರ ಕೈಯಲ್ಲಿ ಒಂದೊಂದು ಗನ್ ಇತ್ತು. ಗನ್ ತೋರಿಸಿ ಬೆದರಿಸಿದ್ದಾರೆ. ಕೇವಲ ದೊಡ್ಡ ದೊಡ್ಡ ಬಂಗಾರದ ಸರಗಳನ್ನ ದರೋಡೆ ಮಾಡಿದ್ದಾರೆ. ಹತ್ತೇ ನಿಮಿಷದಲ್ಲಿ ಕೈಗೆ ಸಿಕ್ಕಿದ್ದ ದೊಡ್ಡ ದೊಡ್ಡ ಚಿನ್ನದ ಸರ   ದೋಚಿಕೊಂಡು ಹೋಗಿದ್ದಾರೆ ಎಂದು ವಿವರಿಸಿದ್ದಾರೆ.

ಬೆಳ್ಳಿ   ಮತ್ತು ನಗದು ಯಾವುದನ್ನೂ ದರೋಡೆಕೋರರು ಮುಟ್ಟಿಲ್ಲ. ದರೋಡೆ ಮಾಡಿ ಹೋಗುವಾಗ ಯಾರು ಹಿಂಬಾಲಿಸದಂತೆ ಹೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾರೆ.

ಕೇರಳ ಮೂಲದ ಈ ಸ್ಕೈ ಜ್ಯುವೆಲ್ಲರಿ ಶಾಪನ್ನ ಇದೇ ವರ್ಷದ ಏಪ್ರಿಲ್ 27ರಂದು ಡಾಲಿ ಧನಂಜಯ್ ಉದ್ಘಾಟನೆ ಮಾಡಿದ್ದರು ಎಂದು ಮಾಹಿತಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ