Screenshot_20251229-133428~3

 

 

ದಿವ್ಯಾಂಗರ ಸಬಲೀಕರಣಕ್ಕಾಗಿ ಸಮರ್ಪಿತ ರಾಷ್ಟ್ರೀಯ ಸಂಘಟನೆಯಾದ ಸಕ್ಷಂ, ಭಾನುವಾರ ಚಿಕ್ಕಮಗಳೂರಿನಲ್ಲಿ ಸಂಘಟಿಸಿದ ಮೊದಲ ಜಿಲ್ಲಾದಿವ್ಯಾಂಗರ ಸಮ್ಮೇಳನದಲ್ಲಿ ಮಾತನಾಡಿದ ಸುಪ್ರಸಿದ್ದ ವೈದ್ಯರು ಹಾಗೂ ಆಶಾಕಿರಣ ಅಂಧಮಕ್ಕಳ ಶಾಲೆಯ ಸಂಸ್ಥಾಪಕ ಧರ್ಮದರ್ಶಿಗಳಾದ ಡಾ. ಜೆ.ಪಿ. ಕೃಷ್ಣೇಗೌಡರು ದಿವ್ಯಾಂಗತೆ ಶಾಪವಲ್ಲ, ಅದು ಜೀವವೈವಿಧ್ಯತೆಯ ಸಹಜ ಅಂಶ ಎಂದು ಹೇಳಿದರು.

ದಿವ್ಯಾಂಗರಿಗೂ ಸಾಮಾನ್ಯರಿಗೆ ಸಿಗುವ ಅವಕಾಶಗಳು ಸಮಾನವಾಗಿ ದೊರೆತಾಗ ಅವರು ಎಲ್ಲರಂತೆಯೇ ಸ್ವಾವಲಂಬಿಗಳಾಗುತ್ತಾರೆ. ಕುಟುಂಬ ಮತ್ತು ಸಮಾಜದ ಆಸ್ತಿಗಳಾಗುತ್ತಾರೆ. ತಮ್ಮ ಶಾಲೆಯಲ್ಲಿ ಕಲಿತ ನೇತ್ರಸವಾಲು(ಅಂಧತ್ವ) ಉಳ್ಳ ಅನೇಕ ವಿದ್ಯಾರ್ಥಿಗಳು ಸಾಧನೆಗೈದು ಅದನ್ನು ನಿರೂಪಿಸಿದ್ದಾರೆ ಎಂದು ತಿಳಿಸಿದರು.

ಇದೇವೇಳೆ NET ಮತ್ತು JRF ಪರೀಕ್ಷೆಯಲ್ಲಿಉತ್ತೀರ್ಣರಾಗಿ ಸಂಶೋಧನೆಯಲ್ಲಿ ತೊಡಗಿರುವ ಶ್ರೀ ಹೇಮಂತ್‌ ಇವರಿಗೆ ಗೌರವಸಲ್ಲಿಸಿ ವಿದ್ಯಾಸಕ್ಷಂ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿ ವೇತನ ನೀಡಲಾಯಿತು. ಹಾಡುಗಾರಿಕೆ ಮತ್ತು content creation ನಲ್ಲಿತೊಡಗಿರುವ ಶ್ರೀರಾಕೇಶ್ಅವರಿಗೆ ಸಕ್ಷಂಸಾಧಕ ಗೌರವನೀಡಲಾಯಿತು.

ಮೂರು ಅವಧಿಗಳಲ್ಲಿ ನಡೆದ ಸಮ್ಮೇಳನದಲ್ಲಿ ದಿವ್ಯಾಂಗ ಸಶಕ್ತೀಕರಣ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲೆಯ ದಿವ್ಯಾಂಗರ ಸ್ಥಿತಿಗಳನ್ನು ಕುರಿತು, ಅಂಗವಿಕಲ ವ್ಯಕ್ತಿಗಳಹಕ್ಕುಗಳ ಕಾಯ್ದೆ 2016 ರ ಅನುಷ್ಟಾನ ಹಾಗು ಎಲ್ಲಾ ಇಲಾಖೆಗಳಲ್ಲಿ ಮೀಸಲಾಗಿರುವ ಶೇ 5 ರಷ್ಟುಅನುದಾನದ ಸಮರ್ಪಕ ಬಳಕೆ ಕುರಿತು ಚರ್ಚೆ, ಸಂವಾದ ನಡೆಯಿತು ಹಾಗೂ ಅನೇಕ ನಿರ್ಣಯಗಳನ್ನು ಸ್ವೀಕರಿಸಲಾಯಿತು.

ಚಿಕ್ಕಮಗಳೂರಿನ ಶ್ರೀಶಾರದಾಮಠದ ಶುಬವತ್ರ ಪ್ರಾಣಮಾತಾಜಿ ಆಶೀರ್ವಚನ ನೀಡಿದರು. ಜಿಲ್ಲಾವಿಶೇಷಚೇತನರ ಕಲ್ಯಾಣಾಧಿಕಾರಿಗಳಾದ ಶ್ರೀವೀರಭದ್ರಯ್ಯ, ಸಕ್ಷಂಸಂಘಟನೆಯರಾಷ್ಟ್ರೀಯ ದೃಷ್ಟಿಪ್ರಕೋಷ್ಠಪ್ರಮುಖ್‌ ರಾವಿನೋಧ್‌ ಪ್ರಕಾಶ್‌, ಕರ್ನಾಟಕದಕ್ಷಿಣ ಪ್ರಾಂತಕಾರ್ಯದರ್ಶಿ ಶ್ರೀನಾಗರಾಜಕೂಡ್ಲಿ, ದಿವ್ಯಾಂಗರೂ ಸೇರಿದಂತೆ 200 ಕ್ಕೂಹೆಚ್ಚಿನ ಜನಹಾಜರಿದ್ದರು. ಸಮ್ಮೇಳನದಲ್ಲಿ ಬುದ್ಧಿಸವಾಲುಳ್ಲಮಕ್ಕಳಿಗೆ ಊಟದಸಾಮಗ್ರಿಗಳನ್ನು, ಜ್ಙಾನ-ಸಕ್ಷಂಅಡಿಯಲ್ಲಿಬ್ರೈಲ್‌ ಕಿಟ್ಟನ್ನುಸಹವಿತರಿಸಲಾಯಿತು.

ಸಮಾರೋಪಅವಧಿಯಲ್ಲಿಸಕ್ಷಂಸಂಘಟನೆಯಜಿಲ್ಲಾತಂಡದಘೋಷಣೆನಡೆಯಿತು. ಸಮ್ಮೇಳನದಲ್ಲಿಭಾಗವಹಿಸಿದಪ್ರತಿಯೊಬ್ಬರಿಗೂಭಾರತಮಾತೆಯಭಾವಚಿತ್ರಮತ್ತುಕರವಸ್ತ್ರನೀಡಲಾಯಿತು.

ವರದಿ : ಪ್ರಭುಲಿಂಗಶಾಸ್ತ್ರಿ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ