IMG-20251229-WA0036

 

 

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಸೇರಿದಂತೆ ವಿವಿಧ ಯೋಜನೆಯಡಿ 60 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಕಿರುಗುಂದ ಗ್ರಾಮ ಪಂಚಾಯ್ತಿಯ ಕಟ್ಟಡವನ್ನು  ವಿಧಾನ ಪರಿಷತ್ ಉಪ ಸಭಾಪತಿಗಳಾದ ಎಂ ಕೆ ಪ್ರಾಣೇಶ್ ಉದ್ಘಾಟಿಸಿದರು.

ವಿಧಾನ ಪರಿಷತ್ ಉಪ ಸಭಾಪತಿ ಎಂ ಕೆ ಪ್ರಾಣೇಶ್ ಮಾತನಾಡಿ ಗ್ರಾಮ ಪಂಚಾಯ್ತಿಗಳು ರಾಜ್ಯ ಸರ್ಕಾರದ ಹಲವು ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡುತ್ತಿದೆ. ಗ್ರಾಮಗಳ ಸ್ವಚ್ಛತೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ ದೊಡ್ಡದು. ಗ್ರಾಮ ಪಂಚಾಯ್ತಿಗಳು ಸಹಕಾರದ ಮನೋಭಾವದ ಮೂಲಕ ಸಂವಿಧಾನದ ಆಶಯಗಳಿಗೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಬೇಕು. ಗ್ರಾಮ ಪಂಚಾಂಯ್ತಿ ಕಟ್ಟಡಗಳು ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ನೀಡುವ ಕಟ್ಟಡಗಳಾಗಬೇಕು ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶ್ರೀಮತಿ ಸ್ವಾತಿಶ್ರೀ ಮಾತನಾಡಿ ಗ್ರಾಮ ಪಂಚಾಯ್ತಿ ಸದಸ್ಯರು ಜನರ ಒಳಿತಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಅಭಿರುದ್ದಿ  ಸಾಧ್ಯ, ಕಿರುಗುಂದ ಗ್ರಾಮ ಪಂಚಾಂಯ್ತಿ ಒಂದು ಮಾದರಿ ಪಂಚಾಯ್ತಿಯಾಗಿದೆ. ಇಲ್ಲಿ 7 ಸದಸ್ಯರಿದ್ದು ಅವರ ಹೊಂದಾಣಿಕೆಯ ಫಲವಾಗಿ ಇಂದು ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ನೂತನ ಗ್ರಾಮ ಪಂಚಾಂಯ್ತಿಯೊಂದಿಗೆ ಜನಪ್ರತಿನಿದಿನಗಳ ಮತ್ತು ಗ್ರಾಮಸ್ಥರ ಸಹಕಾರವಿದ್ದಾಗ ಗ್ರಾಮಗಳು ಉತ್ತಮ ಅಭಿರುದ್ದಿ ಹೊಂದಲು ಸಾಧ್ಯ ಪ್ರತಿಯೊಬ್ಬರ ಸಹಕಾರದಿಂದ ಗ್ರಾಮ ಪಂಚಾಂಯ್ತಿಯ ನೂತನ ಕಟ್ಟಡ ನಿರ್ಮಾಣಗೊಂಡಿದೆ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಕೆ.ಕೆ. ರಾಮಯ್ಯ ಗ್ರಾಮ ಪಂಚಾಯಿತಿ ಅನುಷ್ಠಾನಕ್ಕೆ ಬಂದಾಗ ಕಿರುಗುಂದ ಗ್ರಾಮದ ಗಣ್ಯ ವ್ಯಕ್ತಿ  ದಿ. ಎಂ. ಎ ರಝಕ್ ಅದಿಕಾರದ ಚುಕ್ಕಾಣಿ ಹಿಡಿದು ಕಿರುಗುಂದ ಗ್ರಾಮ ಪಂಚಾಯಿತಿಯ ಮನೆ, ರಸ್ತೆ,  ಕುಡಿಯುವ ನೀರನ ಸೌಲಭ್ಯ ಒದಗಿಸಿದ ಕೀರ್ತಿ ರಝಕ್ ಅವರಿಗೆ ಸಲ್ಲುತ್ತದೆ ಎಂದು ಕಿರುಗುಂದ ಗ್ರಾಮ ಪಂಚಾಯಿತಿ ಬೆಳೆದು ಬಂದ ಹಾದಿ ವಿವರಿಸಿದರು.

ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಶಾಸಕರು ಶ್ರೀಮತಿ ಮೋಟಮ್ಮ ತಾಲೋಕು ಪಂಚಾಂಯಿತಿ ಇ ಓ ದಯಾವತಿ, ಉಪಾಧ್ಯಕ್ಷ ಪೂರ್ಣೇಶ್, ಸದಸ್ಯರಾದ ದಿನೇಶ್ ಕೆ ಅರ್, ದರ್ಮೇಶ್, ಇಂದಿರಾ, ಚಂದ್ರಿಕಾ, ಪೂರ್ಣೇಮಾ ರವಿ, ಗ್ರಾಮ ಪಂಚಾಯ್ತಿ  ಪಿಡಿಓ ಕೃಷ್ಣಪ್ಪ, ಕಾರ್ಯದರ್ಶಿ ನಂಜಯ್ಯ, ಸುದೀಶ್ ಬಿ ಎಲ್, ಮಂಜುನಾಥ್, ಭವಾನಿ,ಗೋಪಾಲ್, ದೀಪ್ತಿ ವರ್ಗಾವಣೆಗೊಂಡ ಪಿಡಿಓ ಸಾಹಿತ್ಯ, ಮುಖಂಡರಾದ  ನಜೀರ್ ಕಿರುಗುಂದ, ಸಿ ಅರ್ ನೇಮಿರಾಜ್,ಹೇಮಶೇಖರ್ ಯು ಹೆಚ್, ಯ ಎನ್ ಚಂದ್ರೇಗೌಡ, ಎ.ಜಿ. ಸುಬ್ರಾಯಗೌಡ ,ಚಂದ್ರಶೇಖರ ಬಿ ಕೆ, ಗುತ್ತಿಗೆದಾರರದ ಓಂಕಾರ್ ಬಿ ಎಸ್ , ಪತ್ರಕರ್ತ ಅಬ್ಬಾಸ್  ಕಿರುಗುಂದ ಹಾಗೂ ಕಿರುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಸ್ಥರು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪ್ರೇಮ ಮಂಜುನಾಥ್ ಮತ್ತು ಸದಸ್ಯರು ಭಾಗಿಯಾಗಿದ್ದರು.

ವರದಿ : ಸಿ. ಎಲ್ ಪೂರ್ಣೇಶ್ ಚಕ್ಕುಡಿಗೆ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ