Screenshot_2025-12-31-08-32-48-61_40deb401b9ffe8e1df2f1cc5ba480b12

 

 

ಎರಡು ಕಾಡು ಗಿಳಿಗಳನ್ನು ಮನೆಯಲ್ಲಿ ಅಕ್ರಮವಾಗಿ ಸಾಕಿದ್ದ ಆರೋಪದಲ್ಲಿ ಚಿಕ್ಕಮಗಳೂರು ನಗರದ ವ್ಯಕ್ತಿ ಒಬ್ಬರ ಮೇಲೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.

ಚಿಕ್ಕಮಗಳೂರು ನಗರದ ವಿಜಯಪುರ ನೆಹರು ನಗರದ ವಲ್ಲಭ ಗಣಪತಿ ದೇವಸ್ಥಾನದ ಮುಂಭಾಗದ ನಿವಾಸಿ ಅಕ್ಬರ್ ಪಾಷಾ ಎಂಬುವವರ ವಿರುದ್ಧ ಸಂಚಾರಿ ಅರಣ್ಯದಳವು ಪ್ರಕರಣ ದಾಖಲಿಸಿದೆ.

ಅಕ್ಬರ್ ಪಾಷಾ ತಮ್ಮ ವಾಸದ ಮನೆಯ ಕಾಂಪೌಂಡ್ ಒಳಭಾಗದ ಜಾಗದಲ್ಲಿ ಎರಡು ಕಾಡು ಗಿಳಿಗಳನ್ನು ಪಂಜರದಲ್ಲಿರಿಸಿ ಅಕ್ರಮವಾಗಿ ಸಾಕುತ್ತಿದ್ದರು ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಅರಣ್ಯ ಇಲಾಖೆಗೆ ದೊರೆತ ಸುಳಿವಿನ ಮೇರೆಗೆ ರಾಜ್ಯ ಸಿಐಡಿ ಅರಣ್ಯ ಘಟಕದ ಉಪ ಮಹಾ ನಿರೀಕ್ಷಕರಾದ ಸಂಗೀತ ಹಾಗೂ ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪಿ ಎಸ್ ಸುದರ್ಶನ್ ಅವರ ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕ ಬಾಬುದ್ದಿನ್ ನೇತೃತ್ವದಲ್ಲಿ ಇತ್ತೀಚೆಗೆ ಅಕ್ಬರ್ ಭಾಷಾ ಅವರ ಮನೆ ಮೇಲೆ ದಾಳಿ ನಡೆಸಿ ಪಂಜರದ ಸಹಿತ ಎರಡು ಗಿಳಿಗಳನ್ನು ಹೊಸಕೆ ಪಡೆಯಲಾಗಿದೆ ಅಲ್ಲದೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ

ನ್ಯಾಯಾಲಯದ ಆದೇಶದಂತೆ ಇದೀಗ ಕಾಡುಗಿಳಿಗಳನ್ನು ಸಂರಕ್ಷಿಸುವ ಸಲುವಾಗಿ ವಲಯ ಅರಣ್ಯ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ