ಮೂಡಿಗೆರೆ ತಾಲೂಕು ಅಂಗಡಿ ಪ್ರೌಢ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಜನ ಜಾಗೃತಿ ವೇದಿಕೆ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಪ್ರಶಾಂತ್ ಚಿಪ್ರಗುತ್ತಿ ರವರು ಉಪನ್ಯಾಸ ನೀಡುತ್ತಾ ಇವತ್ತಿನ ದಿನಗಳಲ್ಲಿ ಮಾದಕ ವಸ್ತುಗಳ ಸೇವನೆ, ಭ್ರಷ್ಟಾಚಾರ ಅಧರ್ಮ ಮೋಸ ವಂಚನೆ ಕೆಟ್ಟ ಯೋಚನೆಗಳು, ಇವುಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ.
ಒಂದು ಸ್ವಾಸ್ಥ್ಯ ಸಮಾಜ ನಿರ್ಮಾಣ ಆಗಬೇಕೆಂದರೆ ಆ ಸಮಾಜದಲ್ಲಿ ಇರುವಂತ ವ್ಯಕ್ತಿಗಳಿಗೆ ಸರಿಯಾದ ತಿಳುವಳಿಕೆಯನ್ನು ನೀಡುವುದರ ಮೂಲಕ ಅವರಲ್ಲಿ ಮೌಲ್ಯ ಮತ್ತು ಒಳ್ಳೆಯ ಸಂಸ್ಕಾರವನ್ನು ಕೊಡಬೇಕು. ಇದು ಮನೆಯಿಂದ ಹಿಡಿದು ಶಾಲಾ-ಕಾಲೇಜುಗಳಿಂದ ಹಿಡಿದು ಎಲ್ಲಾ ಸಂಸ್ಥೆಗಳು ಈ ಕೆಲಸವನ್ನು ಮಾಡಬೇಕಾಗಿದೆ.
ಮನುಷ್ಯ ಮೊದಲು ತನ್ನನ್ನು ತಾನು ಅರ್ಥ ಮಾಡಿಕೊಂಡು ಒಳ್ಳೆಯ ಮಾನವನಾಗಿ ನಂತರ ಡಾಕ್ಟರ್ ಇಂಜಿನಿಯರ್ ನ್ಯಾಯವಾದಿ ನ್ಯಾಯಾಧೀಶ ವಿಜ್ಞಾನಿ ಏನು ಬೇಕಾದರೂ ಆಗಬಹುದು ಮೊದಲು ಅವನು ಒಳ್ಳೆಯ ಮಾನವನಾಗಬೇಕು, ಅದಕ್ಕೆ ಬೇಕಾದಂತ ಪೂರಕವಾದ ವಿದ್ಯಾಭ್ಯಾಸವನ್ನು ಪಠ್ಯಪುಸ್ತಕದಲ್ಲಿ ಕಡ್ಡಾಯವಾಗಿ ನೀಡಬೇಕು, ಇದು ಸರಕಾರದ ಜವಾಬ್ದಾರಿಯಾಗಿರುತ್ತದೆ. ಇಂದು ಈ ಜವಾಬ್ದಾರಿಯನ್ನು ಸರಕಾರ ಮರೆತರೆ ಮುಂದೆ ಒಂದು ದಿನ ಸ್ವಾಸ್ಥ್ಯ ಸಮಾಜವನ್ನು ನೋಡಲು ಸಾಧ್ಯವಿಲ್ಲದಂತೆ ಆಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ವಿದ್ಯಾರ್ಥಿಗಳ ಹತ್ತಿರ ಸ್ವಾಸ್ಥ್ಯ ಸಂಕಲ್ಪದ ಪ್ರತಿಜ್ಞೆಯನ್ನು ಮಾಡಿಸಲಾಯಿತು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಟಿಎಂಸಿ ಅಧ್ಯಕ್ಷರಾದ ಸತೀಶ್ ಅವರು ವಹಿಸಿಕೊಂಡಿದ್ದರು ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ವೀರೇಂದ್ರ ಹೆಗ್ಗಡೆಯವರು ಒಂದು ಒಳ್ಳೆಯ ಸಮಾಜದ ನಿರ್ಮಾಣಕ್ಕಾಗಿ ಮಾಡುತ್ತಿರುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವು ಈಗಿನ ಸಮಾಜಕ್ಕೆ ಅತ್ಯಗತ್ಯ ಎಂದು ಹೇಳಿದರು.
ಒಕ್ಕೂಟ ಉಪಾಧ್ಯಕ್ಷರಾದ ಗಿರೀಶ್ ರವರು ಉಪಸ್ಥಿತರಿದ್ದರು. ದೀಪಕ್ ಮೇಲ್ವಿಚಾರಕರು ಸ್ವಾಗತವನ್ನು ಮಾಡಿ ಶಿಕ್ಷಕಿ ಲತಾ ರವರು ವಂದನಾರ್ಪಣೆ ನೆರವೇರಿಸಿದರು.



