IMG-20260107-WA0066

 

 

 ಭೀಮಾ ಕೋರೆಗಾಂವ್ ವಿಜಯೋತ್ಸವ ಮೆರವಣಿಗೆಯು ಬುಧವಾರ ಚಿಕ್ಕಮಗಳೂರು ನಗರದಲ್ಲಿ ಆಕರ್ಷಕವಾಗಿ ನಡೆಯಿತು.

ಜಿಲ್ಲೆಯ ವಿವಿಧ 40ಕ್ಕೂ ಹೆಚ್ಚು ದಲಿತ ಹಾಗೂ ಪ್ರಗತಿಪರ ಸಂಘಟನೆಗಳನ್ನು ಒಳಗೊಂಡ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಸಮಿತಿ ಆಶ್ರಯದಲ್ಲಿ ನಡೆದ ಶೌರ್ಯದಿನದ ಮೆರವಣಿಗೆ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಕೆಪಿಟಿಸಿಎಲ್ ಕಛೇರಿ ಆವರಣದಲ್ಲಿ ಮಧ್ಯಾಹ್ನ ಆರಂಭಗೊಂಡ ಮೆರವಣಿಗೆಯಲ್ಲಿ ನೀಲಿ ಕೊರಳಪಟ್ಟಿ-ಶಾಲುಗಳೋಂದಿಗೆ ಪಾಲ್ಗೊಂಡಿದ್ದ ಯುವಜನರು ಕೋರೆಗಾಂವ್ ವಿಜಯೋತ್ಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪರ ಘೋಷಣೆ ಮೊಳಗಿಸಿ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು.

ಬಸವನಹಳ್ಳಿ ಅರಳಿಕಟ್ಟೆ, ಹನುಮಂತಪ್ಪ ವೃತ್ತ ಹಾದು ಎಂ.ಜಿ.ರಸ್ತೆಯ ಮೂಲಕ ಆಜಾದ್‍ಮೈದಾನ ಸೇರುವ ವೇಳೆಗೆ ಬೃಹದ್ ಗಾತ್ರತಾಳಿ ಸಮಾಪನಗೊಂಡಿತು. ವಾದ್ಯವೃಂದ, ದೊಡ್ಡಗಾತ್ರದ ಗೊಂಬೆಗಳು ವಿಶೇಷ ಆಕರ್ಷಣೆಯಾಗಿದ್ದು, ಎರಡು ಡಿ.ಜಿ.ಮೊಳಗಿಸಿದ ಹಾಡಿಗೆ ವಯೋಮಾನ ಮರೆತು ಹೆಜ್ಜೆಹಾಕಿ ಖುಷಿಪಟ್ಟರು.

ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮನೆ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಅಲಂಕರಿಸಿಟ್ಟಿದ್ದು ಮೆರವಣಿಗೆಕಾರರು ಪುಷ್ಪನಮನದ ಗೌರವ ಸಲ್ಲಿಸಿದ್ದು, ಮಜ್ಜಿಗೆ ವಿತರಿಸಲಾಯಿತು.

ಸಮಿತಿ ಮುಖಂಡರುಗಳಾದ ದಂಟರಮಕ್ಕಿ ಶ್ರೀನಿವಾಸ, ಹಿರೇಗೌಡ ಶಿವು, ನಿವೃತ್ತಶಿಕ್ಷಕ ಹರಿಯಪ್ಪ, ಕೃಷ್ಣಮೂರ್ತಿ, ಮರ್ಲೆ ಅಣ್ಣಯ್ಯ, ಜವರಯ್ಯ ಮೆರವಣಿಗೆಗೆ ಸಂಯುಕ್ತವಾಗಿ ಚಾಲನೆ ನೀಡಲಾಯಿತು.

ಸಮಾನತೆ ಮತ್ತು ವೈಜ್ಞಾನಿಕ ಭಾರತ ಕಟ್ಟಲು ಚಿಕ್ಕಮಗಳೂರಿನಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದ ದಂಟರಮಕ್ಕಿ ಶ್ರೀನಿವಾಸ್, 200ವರ್ಷಗಳ ಹಿಂದೆ ಅಸ್ಪøಶ್ಯತೆ ಮತ್ತು ಅಸಮಾನತೆ ವಿರುದ್ಧ ಸ್ವಾಭಿಮಾನಕ್ಕಾಗಿ ನಡೆದ ಯುದ್ಧದ ನೆನಪಿಗಾಗಿ ಜನವರಿ 1 ರಂದು ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ದೇಶಾದ್ಯಂತ ಆಚರಿಸಲಾಗುತ್ತದೆ ಎಂದರು.

ಕಾರ್ಯಕ್ರಮದ ಪೂರ್ವಭಾವಿಯಾಗಿ ಮಂಗಳವಾರ ನಗರದಲ್ಲಿ ಬೃಹತ್ ಬೈಕ್ ಜಾಥಾ ನಡೆಸಲಾಗಿತ್ತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ