ಚಿಕ್ಕಮಗಳೂರು ಸಮಾನ ಮನಸ್ಕ ಸ್ನೇಹಿತೆಯರು ಸೇರಿ ರಚಿಸಿಕೊಂಡಿರುವ ಸ್ಪಂದನ ಬಳಗದಿಂದ ಸಮಾಜದಲ್ಲಿ ನೊಂದವರಿಗೆ ಸಹಾಯಹಸ್ತವನ್ನು ಚಾಚುತ್ತಿದ್ದು, ತಮ್ಮ ಸ್ವಂತ ಹಣವನ್ನು ಒಟ್ಟುಗೂಡಿಸಿ ಸಮಾಜಸೇವೆ ಬಳಸುತ್ತಿದ್ದಾರೆ.
ಈಗಾಗಲೇ ಇಪ್ಪತ್ತೊಂದು ಜನರಿಗೆ ತಮ್ಮ ಸಹಾಯವನ್ನು ನೀಡಿದ್ದು, ಇದೀಗ ಇಪ್ಪತ್ತೆರಡನೇ ಸ್ಪಂದನೆಯನ್ನು ಮೂಡಿಗೆರೆ ತಾಲ್ಲೂಕು ತುರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತಿಗೆರೆ ಗ್ರಾಮ ನಿವಾಸಿ ಮಹೇಂದ್ರ ರವರ ಮಗಳು ಸಿರಿ (18 ವರ್ಷ) ಅವರಿಗೆ ನೀಡಿದೆ.
ಸಿರಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು, ಒಂದು ವರ್ಷದ ಹಿಂದೆ ಅಪಘಾತವಾಗಿ ಬ್ರೈನ್ ಸರ್ಜರಿ ಆಗಿರುತ್ತದೆ ಹಾಗೂ ಇವರ ದೇಹದ ಎಡಭಾಗ ಸ್ವಾಧೀನವಿರುವುದಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ನ್ಯೂರೋಪಿಜಿಯೋ ಥೆರಪಿಯ ಅವಶ್ಯಕತೆ ಇದ್ದು, ಸುಮಾರು 15 ಲಕ್ಷ ರೂ. ಖರ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿರುತ್ತಾರೆ ಹಾಗಾಗಿ ದೇವಿರಮ್ಮ ಸ್ಪಂದನ ಬಳಗದ ಗೆಳತಿಯರು ಇದಕ್ಕೆ ಸಹಕರಿಸಿ ಬಳಗದಿಂದ ಧನಸಹಾಯ ಮಾಡಲಾಗಿದೆ ಎಂದು ಸಂಘದ ಶ್ರೀಮತಿ ರೀನಾಸುಜೇಂದ್ರ ತಿಳಿಸಿದ್ದಾರೆ.
ಸಿರಿಯವರ ತಂದೆ ಮಹೇಂದ್ರ ಅವರಿಗೆ ಚಿಕ್ಕಮಗಳೂರಿನಲ್ಲಿ ತಮ್ಮ ಆರ್ಥಿಕ ನೆರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದೇವಿರಮ್ಮ ಸ್ಪಂದನ ಬಳಗದ ಕಲಾವತಿ, ಮಲೈಕ, ಪ್ರನೂಪ ನಾಗರಾಜ್, ಚೈತ್ರಗೌಡ, ಹರಿಣಾಕ್ಷಿ, ಪ್ರೀತಿ ಯೋಗೇಶ್, ಮಮತ, ಶಶಿರೆಡ್ಡಿ, ನೇತ್ರಾ ವೆಂಕಟೇಶ್ ಉಪಸ್ಥಿತರಿದ್ದರು.



