ಮಲೆನಾಡು ನಾಗರೀಕ ರೈತ ಹಿತರಕ್ಷಣಾ ಸಮಿತಿ ಆಯೋಜಿಸಿದ ಜನಜಾಗೃತಿ ಯಾತ್ರೆಗೆ ನರಸಿಂಹವನದ ಗುರುನಿವಾಸದಲ್ಲಿ ಶಾರದಾ ಪೀಠದ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿಯವರು ಚಾಲನೆ ನೀಡಿದರು.
`ಮಲೆನಾಡಿನ ರೈತರ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಪೂರಕವಾಗಿ ಕಾರ್ಯ ಪ್ರವೃತ್ತರಾದ ಸಮಿತಿಯ ಆಶಯಗಳು ಕೂಡಲೇ ಈಡೇರಲಿ. ರೈತರ ಸಮಸ್ಯಗಳಿಗೆ ಪರಿಹಾರ ಸೀಗಲಿ ಎಂದು ಗುರುಗಳು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ಮಾಜಿ ಶಾಸಕ ಡಿ.ಎನ್ ಜೀವರಾಜ್, ಸಮಿತಿ ಉಪಾಧ್ಯಕ್ಷ ನವೀನ್ ಕರಗಣೆ, ಪ್ರಧಾನ ಕಾರ್ಯದರ್ಶಿ ರಂಜಿತ್ ಶೃಂಗೇರಿ, ಕಾರ್ಯದರ್ಶಿ ಅಭಿಷೇಕ್, ಮಾಜಿ ಅಧ್ಯಕ್ಷ ನಾಗೇಶ್, ಪದಾಧಿಕಾರಿಗಳಾದ ರತ್ನಾಕರ್, ಆದರ್ಶ, ಅಶ್ವಿನ್, ಚಂದ್ರಶೇಖರ್ ರೈ, ಸಂತೋಷ್, ಪುರುಷೋತ್ತಮ್, ಅಭಿಲಾಷ್, ಸುಭಾಷ್ ಹಾಗೂ ತಾಲ್ಲೂಕಿನ ರೈತರು ಇದ್ದರು.




