suddi-23(B)

 

 

ಚಿಕ್ಕಮಗಳೂರು ನಗರದ ಹೊರವಲಯದ ಪಾರ್ವತಿಪುರದಲ್ಲಿರುವ ಬಾಲ ಯೇಸು ಪುಣ್ಯಕ್ಷೇತ್ರದ 16ನೇ ವರ್ಷದ ವಾರ್ಷಿಕ ಮಹೋತ್ಸವ ಬುಧವಾರ ನಡೆಯಿತು.

ಕ್ಷೇತ್ರದ  ಬಾಲ ಯೇಸು ಪ್ರತಿಮೆಯನ್ನು ಹಾಡು ಭಜನಾ ತಂಡ ಮತ್ತು ವಾದ್ಯ ಮೇಳಗಳೊಂದಿಗೆ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು ಬಳಿಕ

ಚಿಕ್ಕಮಗಳೂರು ಹಾಸನ ಕ್ರೈಸ್ತ ಧರ್ಮ ಪೀಠದ ಧರ್ಮಾದ್ಯಕ್ಷ ಡಾ. ಟಿ ಅಂತೋಣಿಸ್ವಾಮಿ 30 ಯಾಜಕರೊಂದಿಗೆ ಹಬ್ಬದ ಬಲಿ ಪೂಜೆ ಅರ್ಪಿಸಿ  ಬಾಲ ಯೇಸು

ಭಕ್ತರ ಬೇಡಿಕೆಯನ್ನು ಈಡೇರಿಸುವ ಕರುಣೆಯ ಹೃದಯವುಳ್ಳವರಾಗಿದ್ದು, ಮನಸಿಟ್ಟು ಪ್ರಾರ್ಥಿಸಿದರೆ ಪ್ರತಿಫಲ ನೀಡುವರು.

ಮಾನವ ಸಮಾಜಕ್ಕೆ ಆರೋಗ್ಯ ಶಾಂತಿ ನೆಮ್ಮದಿ ಒದಗಿಸಲಿ ಎಂದು ಸಂದೇಶ ನೀಡಿದರು.

ಪುಣ್ಯಕ್ಷೇತ್ರದ ನಿರ್ದೇಶಕರಾದ ಫಾದರ್ ಫ್ರೆಡ್ರಿಕ್ ಪಾಯ್ಸ್ ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ಧರ್ಮ ಕ್ಷೇತ್ರದ ವಿವಿಧ ಧರ್ಮ ಕೇಂದ್ರಗಳಿಂದ ಒಂಬತ್ತು ದಿನಗಳ ಕಾಲ ನೋವೇನ ಕಾರ್ಯಕ್ರಮ ಬಲಿ ಪೂಜೆ ನಡೆಸಿಕೊಟ್ಟ ಧರ್ಮ ಕೇಂದ್ರ ಗುರುಗಳು ಮತ್ತು ಆಚರಣೆ ಸಮಿತಿಯ ಪದಾಧಿಕಾರಿಗಳು ಸದಸ್ಯರಿಗೆ ಕೃತಜ್ಞತೆಯನ್ನು

ಸಲ್ಲಿಸಿದರು. ಧರ್ಮಕ್ಷೇತ್ರದ ಚಾನ್ಸಲರ್ ಆದಂತಹ ಫಾದರ್ ಚಾರ್ಲ್ಸ್ ಪೆರೇರ, ಸಂತ ಜೋಸೆಫರ ಪ್ರಧಾನಾಲಯದ

ಧರ್ಮ ಕೇಂದ್ರ ಗುರು ಫಾ.ಶಾಂತರಾಜ್, ಫಾ.ಹೆನ್ರಿ ಮಾಡ್ತಾ ಗುರುಗಳು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ