suddi-19

 

 

ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್(ಡಿಸಿಸಿ ಬ್ಯಾಂಕ್) ಆಡಳಿತ ಮಂಡಳಿಗೆ ಜನವರಿ 17 ರಂದು ನಡೆಯುವ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದು, ಸಹಕಾರಿ ಮತದಾರರು ನನಗೆ ಮತ ಚಲಾಯಿಸುವಂತೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮಾಜಿ ನಿರ್ದೇಶಕ ಎಂ.ಎಸ್.ನಿರಂಜನ್ ಮನವಿ ಮಾಡಿದರು.

ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನಾನು ಹಿಂದಿನ ಆಡಳಿತ ಮಡಳಿಯಲ್ಲಿಯೂ ನಿರ್ದೇಶಕನಾಗಿ ಕೆಲಸ ಮಾಡಿದ್ದು, ನಿರ್ದೇಶಕನಾಗಿದ್ದ ಸಂದರ್ಭದಲ್ಲಿ ಚಿಕ್ಕಮಗಳೂರು ತಾಲ್ಲೂಕು ವ್ಯಾಪ್ತಿಗೆ ಬರುವ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕೇಂದ್ರ ಸಹಕಾರ ಬ್ಯಾಂಕಿನಿಂದ ಬರುವ ಸಾಲ ಸೌಲಭ್ಯಗಳು ತಾರತಮ್ಮ ಮಾಡದೆ ತಲುಪುವ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು.

ನನ್ನ ಹಿಂದಿನ ಅವಧಿಯಲ್ಲಿ ಬಹಳಷ್ಟು ಸಹಕಾರ  ಸಂಘಗಳು ಆರ್ಥಿಕ ಚಟುವಟಿಕೆ ನಡೆಸಲಾರದಂತ ಪರಿಸ್ಥಿತಿಗೆ ಬ್ಯಾಂಕ್‍ಗೆ ಡಿಪಾಲ್ಸ್ ಆಗಿದ್ದವು ಅಂತಹ ಸಹಕಾರ ಸಂಘಗಳನ್ನು ಗುರುತಿಸಿ ಹೆಚ್ಚಿನ ಆರ್ಥಿಕ ಸೌಲಭ್ಯ ನೀಡುವ ಮೂಲಕ ಸಹಕಾರ ಸಂಘಗಳು ಆರ್ಥಿಕ ಚೇತರಿಕೆಯೂಂದಿಗೆ ರೈತರಿಗೆ ಸಹಕಾರಿಯಾಗಲು ಶಕ್ತಿ ಮೀರಿ ಶ್ರಮಿಸಿದ್ದೇನೆ ಎಂದರು.

ನಮ್ಮ ಕ್ಷೇತ್ರ ಹೊರತಾಗಿಯು ಅನೇಕ ರೈತರಿಗೆ ಕೇಂದ್ರ ಬ್ಯಾಂಕಿನಿಂದ ಸಾಲ ಸೌಲಭ್ಯ ಒದಗಿಸಿಕೊಡುವಲ್ಲಿ ಶಕ್ತಿ ಮೀರಿ ಶ್ರಮಿಸಿದ್ದೇನೆ.

ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಕಳೆದ ಏಳೆಂಟು ತಿಂಗಳಿಂದಲೂ ಶ್ರಮ ವಹಿಸಿದ್ದು,. ಕೃಷಿ ಪತ್ತಿನ ಸಹಕಾರ ಸಂಘಗಳ ಚುನಾವಣಾ ಸಂಧರ್ಭದಲ್ಲಿ ಪ್ರತಿ ಸಹಕಾರ ಸಂಘಗಳಿಗೂ ಭೇಟಿ ನೀಡಿ ಹೆಚ್ಚು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಚುನಾಯಿತರಾಗುವಂತೆ ಕಾರ್ಯತಂತ್ರ ರೂಪಿಸಿದ್ದಲ್ಲದೆ ಅವರಿಗೆ ಬೇಕಾದ ಸಹಾಯ ಸಹಕಾರ ನೀಡಲು ಶ್ರಮಿಸಿದ್ದು, ಈ ಕಾರಣದಿಂದ ನಾನು ಈ ಬಾರಿ ನಡೆಯುವ ನಿರ್ಧೇಶಕರ ಚುನಾವಣೆಯಲ್ಲಿ ಸಹಕಾರ ಸಂಘಗಳ ಪ್ರತಿನಿಧಿ ಮತದಾರರು ನನ್ನನ್ನು ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆಯೊಂದಿಗೆ ಸ್ಪರ್ಧೆ ಮಾಡಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು

ಈ ಬಾರಿ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಬಲಾಡ್ಯರು ಮತ್ತು ಸಾಮಾನ್ಯರ ನಡುವೆ ನಡೆಯುವ ಚುನಾವಣೆ ಇದಾಗಿದೆ. ನಾನೊಬ್ಬ ಭಾರತೀಯ ಜನತಾಪಕ್ಷದ ಕಾರ್ಯಕರ್ತನಾಗಿದ್ದು ನಾನು ಸಕ್ರೀಯವಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ ನಾನು ಈ ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಕೆಲಸ ಮಾಡಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗುವ ಸಂಧರ್ಭದಲ್ಲಿಯು ನನ್ನನ್ನು ಕಡೆಗಣಿಸಲಾಯಿತು ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಆಯ್ಕೆ ಬಯಸಿದಾಗಲು ನನ್ನನ್ನು ಕಡೆಗಣಿಸಲಾಯಿತು. ಆದರೆ ಈಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ಧೇಶಕರ ಚುನಾವಣೆಗೆ ಸ್ಪರ್ಧಿಸಿದಾಗಲು ಪಕ್ಷ ನನ್ನನ್ನು ಕಡೆಗಣಿಸಿದಂತೆ ಕಾಣುತ್ತಿದೆ. ಸಣ್ಣ ಪುಟ್ಟ ಅವಕಾಶಗಳನ್ನು ನಿರಾಕರಿಸಿ ಹಲವಾರು ಹುದ್ದೆಗಳಲ್ಲಿ ಇರುವವರಿಗೆ ಅವಕಾಶ ಕಲ್ಪಿಸಿದರೆ ನಮ್ಮಂತಹ ಕಾರ್ಯಕರ್ತರು ಯಾರಿಗಾಗಿ ದುಡಿಯಬೇಕು ಎಂಬುದೆ ಅರ್ಥವಾಗುತ್ತಿಲ್ಲ. ಎಂದು ಬೇಸರ ವ್ಯಕ್ತಪಡಿಸಿದರು.

ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷರಾದ ದೇವರಾಜ್ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ದಿಸಿರುವ ಎಂ. ಎಸ್. ನಿರಂಜನ್ ರವರ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದ್ದು, ದೇವರಾಜ್ ಶೆಟ್ಟಿಯವರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಈ ಚುನಾವಣೆಯಲ್ಲಿ ಮತದಾರರು ನನ್ನನ್ನು ಜಯಶಾಲಿಯನ್ನಾಗಿ ಮಾಡುವ ಭರವಸೆ ನನಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ರಘುನಂದನ್, ರಮೇಶ್, ರಾಜು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ