ಪತ್ರಗಳನ್ನು, ಪಾರ್ಸೆಲ್ ಗಳನ್ನು ಹಾಗೂ ಮನಿಯಾರ್ಡರ್ಗಳನ್ನು ಸರಿಯಾದ ಅಂಚೆ ಕಛೇರಿಗೆ ತಲುಪಿಸಲು ಭಾರತೀಯ ಅಂಚೆ ಇಲಾಖೆಯ ಪಿನ್ ಕೋಡ್ ಅತ್ಯಂತ ಅನುಕೂಲಕರವಾಗಿದೆ.
ಈ ನಿಟ್ಟಿನಲ್ಲಿ ಚಿಕ್ಕಮಗಳೂರು ಅಂಚೆ ವಿಭಾಗದ ವ್ಯಾಪ್ತಿಯಲ್ಲಿರುವ ಎಲ್ಲಾ ಅಂಚೆ ಕಛೇರಿಗಳ ಪಿನ್ ಕೋಡ್ ಹಾಗೂ ಪಿನ್ ಕೋಡ್ಗೆ ಸಂಬಂಧಿಸಿದ ಮಾಹಿತಿಯನ್ನು ಹೊಂದಿರುವ ಕೈಪಿಡಿಯನ್ನು ಬಿಡುಗಡೆ ಮಾಡಲಾಗಿದೆ, ಬ್ಯಾಂಕ್ಗಳು, ಸಹಕಾರಿ ಸಂಸ್ಥೆಗಳು, ಶಾಲಾ ಕಾಲೇಜುಗಳು, ವ್ಯವಹಾರ ಸಂಸ್ಥೆಗಳು ಹಾಗೂ ಸಮಸ್ತ ಅಂಚೆ ಗ್ರಾಹಕರಿಗೆ ಈ ಕೈಪಿಡಿಯು ಉಪಯೋಗಿಯಾಗಿದೆ.
ಇದರ ಪ್ರತಿಯನ್ನು ಉಚಿತವಾಗಿ ಗ್ರಾಹಕರು ಚಿಕ್ಕಮಗಳೂರು ಅಂಚೆ ಅಧೀಕ್ಷಕರ ಕಛೇರಿಯ ವಾಟ್ಸಾಪ್ ಸಂಖ್ಯೆ : 9448291068 ಅಥವಾ ಇ ಮೇಲ್ ಐಡಿ dochikmagalur.ka@indiapost.gov.in ಗೆ Send PIN Code Directory ಎಂಬ ಸಂದೇಶವನ್ನು ಕಳುಹಿಸಿ ಪಡೆದುಕೊಳ್ಳಬಹುದಾಗಿದೆ



