ಹಿಂದೂ ಸಮಾಜದ ಉನ್ನತವಾದ ವಿಚಾರಗಳು ಹಾಗೂ ಆದರ್ಶಗಳ ಕುರಿತ ಭಾವನೆಗಳು ನಮ್ಮಲ್ಲಿ ಕಡಿಮೆಯಾಗಿದೆ. ನಮ್ಮ ಪಾರಂಪರಿಕ ಮೌಲ್ಯಗಳ ಕುರಿತು ಕ್ಷಣ ಕ್ಷಣವೂ ನಾವು ಚಿಂತನೆ ಮಾಡಬೇಕಿದೆ ಎಂದು ಹರಿಹರಪುರ ಶ್ರೀಮಠದ ಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ತಿಳಿಸಿದರು.
ಅವರು ಗುರುವಾರ ಶೃಂಗೇರಿ ತಾ|ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಗುರುವಾರ ಕಿಗ್ಗಾಮಂಡಲದಲ್ಲಿ ಆಯೋಜಿಸಿದ “ಹಿಂದೂ ಸಮಾಜೋತ್ಸವ”ಉದ್ಘಾಟಿಸಿ ಮಾತನಾಡಿದರು.
ಭಾರತದ ಹಿರಿಮೆ ಗೊತ್ತಿದ್ದರೂ ನಾವಿನ್ನೂ ನಿದ್ರೆಯಲ್ಲಿದ್ದೇವೆ.ಭಾರತದಲ್ಲಿ ವಿಕಸಿತಗೊಂಡ ಸಂಸ್ಕøತಿ ನಮ್ಮದು.ದೇವರು ಒಂದೇ..ಹಲವು ರೂಪಗಳು,ಸತ್ಯ ಒಂದೇ…ಮಾರ್ಗಗಳು ಆನೇಕ ಎಂಬ ಅರಿವು ನಮ್ಮಲ್ಲಿರಬೇಕು ಎಂದ ಅವರು ಜೈನ,ಬೌದ್ಧ,ಸಿಖ್ಖ್,ವೀರಶೈವರು ಹೀಗೆ ಎಲ್ಲಾ ಮತಗಳ ತಾಯಿಬೇರು ಭಾರತ ದಲ್ಲಿದೆ.ಸತ್ಯ ಒಂದೇ-ಮಾರ್ಗ ಒಂದೇ ಎಂಬ ಭಾವ ನಮ್ಮದಲ್ಲ.ಭಾರತೀಯ ಸಂಸ್ಕøತಿ ವಿಶಾಲ ತತ್ವದ ಅಡಿಯಲ್ಲಿ ನಿಂತಿರುವ ತಾಯಿಬೇರು,ಪ್ರಸ್ತುತ ಬೇರಿನ ರೆಂಬೆ,ಕೊಂಬೆಗಳು ಒಣಗುತ್ತಿದೆ.ಅದಕ್ಕೆ ನೀರು ಉಣಿಸುವ ಕಾಯಕಕ್ಕೆ ಪ್ರತಿಯೊಬ್ಬ ಹಿಂದೂ ಸಿದ್ಧವಾಗಬೇಕು.ವಿವಿಧತೆಯಲ್ಲಿ ಏಕತೆ ಎಂಬುದು ನಮ್ಮ ಧ್ಯೇಯ ವಾಕ್ಯವಾಗಬೇಕು ಎಂದರು.
ದಿಕ್ಸೂಚಿ ಭಾಷಣಗೈದು ಸಾಮಾಜಿಕ ಕಾರ್ಯಕರ್ತ ಪ್ರೇಮಾನಂದ ಶೆಟ್ಟಿ ಅವರು ಮಾತನಾಡಿ”ಗಂಗೆ ಪಾಪ ತೊಳೆಯುತ್ತಾಳೆ.ಚಂದ್ರ ತಾಪ ಕಡಿಮೆ ಮಾಡುತ್ತಾನೆ.ದೇಶದ ಸಂತರು ಅವರಿಗಾಗಿ ಬದುಕುವುದಿಲ್ಲ.ಉನ್ನತಮಾರ್ಗದಲ್ಲಿ ನಡೆಯಿರಿ ಎಂದು ಹೇಳುವುದು ಅವರ ಪ್ರಮುಖ ಕಾರ್ಯ.ಸಂಘ ಎಂದರೆ ಸಂಸ್ಥೆಯಲ್ಲ. ಸಂಘ ಎಂದರೆ ಎಲ್ಲರನ್ನೂ ಒಗ್ಗೂಡಿಸುವುದು.ಅದಕ್ಕೆ ರಿಜಿಸ್ಟ್ರೇಷನ್ ಮಾಡುವ ಅಗತ್ಯವಿಲ್ಲ.ಸ್ವಯಂಪ್ರೇರಣೆಯಿಂದ ಹಿರಿಯರ ಉನ್ನತ ವಿಚಾರಧಾರೆಯಿಂದ ಪರಿಮೂಡಿದ ಸಂಘಕ್ಕೆ ಅದರದೇ ಆದಂತಹ ಜೌನತ್ಯವಿದೆ.ನಾವು ಪಾಶ್ವಾತ್ಯ ಸಂಸ್ಕøತಿ ಗುಂಗಿನಲ್ಲಿದ್ದೇವೆ.ಬೇರೆ ದೇಶದಲ್ಲಿ ಹಿಂದೂಗಳನ್ನು ಹೊಡೆದು ಕೊಲ್ಲುತ್ತಿದ್ದಾರೆ,ಭಾರತ ಹಿಂದೂ ರಾಷ್ಟ್ರ.ನಮ್ಮ ಆತ್ಮವಿಸ್ಮøತಿ ಸಮಾಜದ ವಿಕಾಸಕ್ಕೆ ಇರಬೇಕು.ಮನಸ್ಸು ಮಲೀನವಾದರೆ ನಮಗೆ ಸ್ವಂತ ಸಹೋದರ ಮೈಲಿಗೆಯಾಗಿ ಕಾಣುತ್ತಾನೆ.ಹಿಂದೂಗಳಲ್ಲಿ ಅಪವಿತ್ರಭಾವ ಇರಬಾರದು ಎಂದರು.
ವೇದಿಕೆಯಲ್ಲಿ ಆಯೋಜನಾ ಸಮಿತಿ ಅಧ್ಯಕ್ಷ ಪ್ರದೀಪ್ ಚೋಳರಮನೆ,ಸದಸ್ಯರಾರ ಟಿ.ಕೆ.ಪರಾಶರ,ಸುಧೀಂದ್ರ ಬೆಟ್ಟಗದ್ದೆ,ಸಂಸ್ಕøತಿ ಚಿಂತಕ ಸುರ್ಗೋಡು ಕೃಷ್ಣಮೂರ್ತಿ ಉಪಸ್ಥಿತರಿದ್ದರು.ಕಿಗ್ಗಾ ಗ್ರಾ.ಪಂ ವ್ಯಾಪ್ತಿಯ ಕೆಲ್ಲಾರಿನಿಂದ ಹಮ್ಮಿಕೊಂಡ ಶೋಭಾಯಾತ್ರೆಗೆ ವಾದ್ಯಗೋಷ್ಠಿಗಳು, ಮಕ್ಕಳವೇಷ ಭೂಷಣ ಗಳು,ರಂಗವಲ್ಲಿ ಚಿತ್ತಾರಗಳು,ತಳಿರು ತೋರಣಗಳು ಮೆರಗು ನೀಡಿದವು. ಹರಿಹರಪುರ ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.



