February 4, 2026

ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ತಂಡ ಮತ್ತು ವಶಪಡಿಸಿಕೊಂಡ ಆಟೋ

 

 

ಚಿಕ್ಕಮಗಳೂರು ನಗರದಲ್ಲಿ ನಡೆದಿದ್ದ ಸುಲಿಗೆ ಪ್ರಕರಣದ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ  ಹಣವನ್ನು ಹಾಗೂ ಕೃತಕ್ಕೆ ಬಳಸಿದ ಆಟೋ ವಶಕ್ಕೆ ಪಡೆಯಲಾಗಿದೆ.

ಚಿಕ್ಕಮಗಳೂರು ನಗರದ ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಂದೂರು ರಸ್ತೆಯಲ್ಲಿ ಜನವರಿ 17 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಕಲ್ಯಾಣನಗರ ವಾಸಿ ಶಾಲಾ ಬಸ್ ಚಾಲಕ ರವಿಕುಮಾರ್ ರವರನ್ನು ಯಾರೋ 3 ಜನ  ಹೆದರಿಸಿ ಆಟೋದಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿದ್ದರು.

ಬಳಿಕ ಬಿಯರ್ ಬಾಟಲಿಯಿಂದ ತಲೆಗೆ ಹಲ್ಲೆ ಮಾಡಿದ್ದು  ಪ್ರಜ್ಞೆ ತಪ್ಪಿ ಬಿದ್ದ ಸಮಯದಲ್ಲಿ ಅವರ ಜೇಬಿನಲ್ಲಿದ್ದ 8500/- ರೂ ಹಣವನ್ನು ಕಿತ್ತುಕೊಂಡು ಹೋಗಿದ್ದರು.

ಈ ಸಂಬಂಧ ಚಿಕ್ಕಮಗಳೂರು ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಚಿಕ್ಕಮಗಳೂರು ತಮಿಳು ಕಾಲೋನಿಯ ಲಾರಿ ಚಾಲಕ ಶಬೀರ್ ಅಹಮದ್ , ಅರವಿಂದ ನಗರದ ಕೂಲಿ ಕಾರ್ಮಿಕ ಹೇಮಂತ್ ಕುಮಾರ್ , ಅರಸೀಕೆರೆಯ ಅಹಮದ್ ಖಾನ್  ಇವರನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸ್ ತಂಡದಲ್ಲಿ ಸಿಪಿಐ ಬಸವನಹಳ್ಳಿ ವೃತ್ತ  ವಿಜಯ್ ಕುಮಾರ್ ಬಿರಾದಾರ್, ಪಿಎಸ್ಐ   ಕೀರ್ತಿಕುಮಾರ್ ಮತ್ತು  ಅಜರುದ್ದೀನ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ  ರವೀಂದ್ರ,  ರಾಜ್ ಕುಮಾರ್,  ಲಿಂಗಮೂರ್ತಿ,  ಮಧುಸೂಧನ್,  ಜಯರಾಮ ಮತ್ತು  ಚಂದ್ರಶೇಖರ್ ರವರು ಕಾರ್ಯನಿರ್ವಹಿಸಿರುತ್ತಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ