ಗೋಣಿಬೀಡು ಪೊಲೀಸ್ ಠಾಣಾಧಿಕಾರಿ ಹರ್ಷವರ್ಧನ್ ಅವರಿಗೆ ಗೋಣಿಬೀಡು ಸ್ನೇಹ ಆಟೋ ಚಾಲಕರ ಮತ್ತು ಮಾಲೀಕರ ಸಂಘ ದ ವತಿಯಿಂದ ಗೌರವಿಸಿ ಬೀಳ್ಕೊಡುಗೆ ನೀಡಲಾಯಿತು.
ಕಳೆದ ಎರಡು ವರ್ಷಗಳಿಂದ ಗೋಣಿಬೀಡು ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದ ಹರ್ಷವರ್ಧನ್ ಅವರು ಗೋಣಿಬೀಡು ಠಾಣೆಯಿಂದ ಮೂಡಿಗೆರೆ ಠಾಣೆಗೆ ವರ್ಗಾವಣೆಯಾಗಿದ್ದಾರೆ. ಮೂಡಿಗೆರೆ ಠಾಣಾಧಿಕಾರಿ ಯಾಗಿದ್ದ ಶ್ರೀನಾಥ್ ರೆಡ್ಡಿಯವರು ಗೋಣಿಬೀಡು ಠಾಣಾಧಿಕಾರಿಯಾಗಿ ವರ್ಗಾವಣೆಯಾಗಿರುತ್ತಾರೆ.
ಗೋಣಿಬೀಡು ಠಾಣೆಯಿಂದ ವರ್ಗಾವಣೆಯಾದ ಹರ್ಷವರ್ಧನ್ ಅವರನ್ನು ಗೋಣಿಬೀಡು ಸ್ನೇಹ ಆಟೋ ಚಾಲಕರ ಮತ್ತು ಮಾಲೀಕರ ಸಂಘದಿಂದ ಆತ್ಮೀಯವಾಗಿ ಗೌರವಿಸಿ ಬೀಳ್ಕೊಡುಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪೂರ್ಣೇಶ್ ಹರ್ಷವರ್ಧನ್ ಅವರು ಠಾಣಾಧಿಕಾರಿಯಾಗಿದ್ದಾಗ ಕಾನೂನು ಸುವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಆಟೋ ಚಾಲಕರು ಮತ್ತು ಜನಸಾಮಾನ್ಯರಿಗೆ ಸೂಕ್ತ ಕಾನೂನು ಮಾಹಿತಿ ನೀಡುತ್ತಿದ್ದರು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಅವರ ಮುಂದಿನ ವೃತ್ತಿಜೀವನ ಯಶಸ್ವಿಯಾಗಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಮಂಜುನಾಥ್, ಸಂಘದ ಪದಾಧಿಕಾರಿಗಳಾದ ರವಿ, ರಘು, ರವಿ ಲಕ್ಷ್ಮೀಪುರ, ಅಶೋಕ್, ಆಶಿಫ್ ಮತ್ತು ಸಂಘದ ಸದಸ್ಯರು ಹಾಗೂ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.



