February 26, 2026

 

 

ದೇಶದ ಮಾನವನ್ನು ಹರಾಜಿಗಿಟ್ಟಿರುವ ಕೇಂದ್ರ ಸರ್ಕಾರ ಮತ್ತು ಕಾಂಪ್ರಮೈಸ್ ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಚಿಕ್ಕಮಗಳೂರು ವಿಧಾನಸಭಾ ಕೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಲಾಕೇಶ್ ಒತ್ತಾಯಿಸಿದ್ದಾರೆ.

ಅವರು ಜಿಲ್ಲಾಧಿಕಾರಿಗಳ ಕಛೇರಿಯ  ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ಎಪ್ಸ್ಟೀನ್ ಸಂಸ್ಥೆ ಬಹಿರಂಗಪಡಿಸಿರುವ ದಾಖಲೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ದೊರೆ ಭೇಟಿ ಸಂದರ್ಭದಲ್ಲಿ 2017ರಲ್ಲಿ ತಮಗೆ ಬೆಂಬಲ ನೀಡುವಂತೆ ವಿದೇಶಿ ಪ್ರಧಾನಿಗಳೆದುರು ನೃತ್ಯ ಮಾಡುವ ಮೂಲಕ ದೇಶದ ಮಾನ ಹರಾಜಿಗಿಟ್ಟರುವುದು ಬಹಿರಂಗವಾಗಿದೆ ಎಂದು ತಿಳಿಸಿದ್ದಾರೆ.

ಅಮೇರಿಕಾದ ಕೃಷಿ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಯಾವುದೇ ಸುಂಕವಿಲ್ಲದೇ ಶೇ.0 ಸುಂಕದಲ್ಲಿ ನೇರವಾಗಿ ಭಾರತದ ಮಾರುಕಟ್ಟೆಗೆ ಅಮೇರಿಕದ ಉತ್ಪನ್ನಗಳು ಬರಲು ಅವಕಾಶ ಮಾಡಿಕೊಟ್ಟಿದ್ದಾರೆ.ಮೊದಲೇ ಸಾಲದ ಸುಳಿಯಲ್ಲಿ ನಲುಗಿ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದೇಶದ ರೈತರು ವಿದೇಶದ ಕಾರ್ಪೋರೇಟ್ ಕೃಷಿ ಉದ್ಯಮದ ಎದುರು ಪೈಪೋಟಿ ಕೊಡಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಮೋದಿಯವರ ಈ ನಿರ್ಧಾರ ದೇಶದ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಕೊಂಡೊಯ್ಯಲಿದೆ ಎಂದಿದ್ದಾರೆ.

ಕಾಂಪ್ರಮೈಸ್ ಪ್ರಧಾನಮಂತ್ರಿ ನರೇಂದ್ರ ಮೋದಯವರು ಸುಳ್ಳು ಹೇಳಿಕೊಂಡೆ ಪ್ರಧಾನಿ ಹುದ್ದೆಗೇರಿದವರು.ಅವರು ಅಧಿಕಾರಕ್ಕೆ ಬಂದ ದಿನದಿಂದ ಒಂದಲ್ಲೊಂದು ಸುಳ್ಳು ಹೇಳಿಕೊಂಡು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ.ಮೇಕ್ ಇನ್ ಇಂಡಿಯಾ ಹೇಳಿಕೊಂಡ ಪ್ರಧಾನಿಗಳು, ಮೇಕ್ ಇನ್ ಇಂಡಿಯಾಕ್ಕೆ ಅವಕಾಶವನ್ನೇ ನೀಡಿಲ್ಲ ಎಂದು ದೂರಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಫ್ಯಾಕ್ಟ್ ಶೃಂಗಸಭೆಯಲ್ಲಿ ವಿದೇಶಿ ಆವಿಷ್ಕಾರವನ್ನು ಸ್ವದೇಶಿ ಸೆಂಟರ್ ಆಫ್ ಎಕ್ಸಲೆನ್ಸ್‍ನಲ್ಲಿ ಓರಿಯನ್ ಎಂಬ ಹೆಸರಿನ ರೋಬೊಟ್ ನಾಯಿಯನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ಹೇಳಲಾಗಿದೆ. ಆದರೆ ಇದು ಮೂಲದಿಂದ ಚೀನಾದ ಅವಿಷ್ಕಾರ ಎಂದು ತಜ್ಷರು ಪತ್ತೆ ಹಚ್ಚಿದ್ದಾರೆ ಎಂದು ತಿಳಿಸಿದ್ದಾರೆ.

ದಕ್ಷಿಣ ಕೊರಿಯಾದ ಸಾಕರ್ ಡ್ರೋಣ್ ಅನ್ನು ತಮ್ಮ ಕ್ಯಾಂಪಸ್‍ನಲ್ಲಿ ತಯರಿಸಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ. ಈ ರೀತಿ ಸುಳ್ಳು ಹೇಳುವ ಮೂಲಕ ದೇಶದ ಮಾನವನ್ನು ಹರಾಜಿಗೆ ಹಾಕಿರುವ ಉತ್ತರ ಪ್ರದೇಶದ ಗಲ್ಗೋಟಿಯಾ ವಿವಿಗೂ ಪ್ರಧಾನಿ ನರೇಂದ್ರಮೋದಿಯವರಿಗೂ ಗಾಡವಾದ ನಂಟಿದೆ ಎನ್ನುವುದು ಜಗಜ್ಜಾಹೀರಾಗಿದೆ. ಹಿಂದೆ ಕೋರೊನಾದ ಸಂದರ್ಭದಲ್ಲಿ ತಟ್ಟೆ, ಲೋಟ, ಗಂಟೆ ಬಡಿಯುವ ಮೂಲಕ ಕೊರೋನಾ ವೈರಸ್ ನಿಯಂತ್ರಿಬಹುದು ಎಂದು ಹೇಳುವ ಮೂಲಕ ಪ್ರಧಾನಿ ನಗೆಪಾಟಲಿಗೆ ಗುರಿಯಾಗಿದ್ದರು ಎಂದು ಹೇಳಿದ್ದಾರೆ.

ಪ್ರಧಾನಿಯಿಂದ ಒಂದೆಡೆ ಮಾನ ಹರಾಜಾದರೆ, ಮತ್ತೊಂದೆಡೆ ಅವೈಜ್ಞಾನಿಕ ಆರ್ಥಿಕ ನೀತಿಗಳಿಂದಾಗಿ ಇಡೀ ದೇಶ ಸಂಕಷ್ಟಕ್ಕೀಡಾಗುತ್ತಿದೆ. ಈಚೆಗೆ ಹೊರಬಂದ ಎಪ್ಸ್ಟೀನ್ ಸಂಬಂಧಿತ ದಾಖಲೆಗಳು ಪ್ರಧಾನಿ  ಮೋದಿಯವರು ದೇಶದ ಮಾನ ಹರಾಜಿಗಿಟ್ಟಿರುವುದು ಸಾಕ್ಷಿಯಾಗಿದೆ. ಅಧಿಕಾರ ಉಳಿಸಿಕೊಳ್ಳಲು ಈ ಮಟ್ಟಕ್ಕೆ ಪ್ರಧಾನಿಗಳು ಇಳಿದಿರುವ ಉದಾಹರಣೆಯೇ ಇಲ್ಲ. ಆದ್ದರಿಂದ ಕೂಡಲೇ ಕಾಂಪ್ರಮೈಸ್ ಪ್ರಧಾನಮಂತ್ರಿ ನರೇಂದ್ರಮೋದಿಯವರನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸುವಂತೆ ಆಗ್ರಹಿಸಿದ್ದಾರೆ.

ಮನವಿ ಸಲ್ಲಿಸುವಾಗ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಖಲೀಲ್ ಖಾನ್, ಸಖರಾಯಪ್ಟಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಎತ್ತಿನಮನೆ, ಚಿಕ್ಕಮಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿ ನಲ್ಲೂರು, ಉಪಾಧ್ಯಕ್ಷರಾದ ಆದಿಲ್, ಅಂತಕರ್ಣ, ಯುವ ಕಾಂಗ್ರೆಸ್ ಮುಖಂಡರಾದ ಜೋಶ್ವ, ಹೇಮಂತ್ ಅರಸ್, ದರ್ಶನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ