26ckm1

 

 

ಆಧುನಿಕ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಅಲೈಡ್ ಹೆಲ್ತ್ ಸೈನ್ಸ್(ಎಎಚ್‍ಎಸ್) ಕೋರ್ಸ್ ಬಹಳ ಮಹತ್ವಪೂರ್ಣವಾದುದಾಗಿದೆ ಎಂದು ಆಶ್ರಯ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಅನಿಕೇತ್‍ವಿಜಯ್‍ ಅಭಿಪ್ರಾಯಪಟ್ಟರು.

ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2022-23 ನೇ ಶೈಕ್ಷಣಿಕ ಸಾಲಿನ ಅಲೈಡ್ ಹೆಲ್ತ್ ಸೈನ್ಸ್ ವಿದ್ಯಾರ್ಥಿಗಳ ಪ್ರಥಮ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಎಎಚ್‍ಎಸ್  ಕೋರ್ಸ್ (ಫಿಸಿಯೋಥೆರಪಿಸ್ಟ್‌ಗಳು, ಡಯೆಟಿಷಿಯನ್‌ಗಳು, ಆಪ್ಟೋಮೆಟ್ರಿಸ್ಟ್‌ಗಳು (ಕಣ್ಣಿನ ತಜ್ಞರು), ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್‌ಗಳು, ರೇಡಿಯೋಗ್ರಾಫರ್‌ಗಳು, ಆಕ್ಯುಪೇಷನಲ್ ಥೆರಪಿಸ್ಟ್‌) ಪಡೆದ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ನಾಗರೀಕ ನಿರಂತರ ಅಧ್ಯಯನ, ದಯೆ ಮತ್ತು ಪರಿಣತಿಯೊಂದಿಗೆ ತಮ್ಮ ವೃತ್ತಿಗೆ ಗೌರವ ತಂದುಕೊಡಬೇಕು ಎಂದರು.

ಮೆಡಿಕಲ್ ಕಾಲೇಜಿನ ಡೀನ್ ಮತ್ತು ನಿರ್ದೇಶಕರಾದ ಡಾ.ಎಂ.ಆರ್.ಹರೀಶ್ ಅಧ್ಯಕ್ಷತೆ ವಹಿಸಿ, ಪ್ರಥಮ ವರ್ಷದ ಎಎಚ್‍ಎಸ್ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿದರಲ್ಲದೆ ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡುವಲ್ಲಿ ಬದ್ದತೆ ಹೊಂದಿದೆ ಎಂದು ಹೇಳಿದರು.ಎಎಚ್‍ಎಸ್ ಕೋರ್ಸಿನ ಸಂಯೋಜಕರಾದ ಡಾ.ಜೆ.ಲಾವಣ್ಯ ಅವರು ಕೋರ್ಸಿನ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ,ಪದವೀಧರರಿಗೆ ಪ್ರತಿಜ್ಞೆ ಬೋಸಿದರು.

ಜಿಲ್ಲಾ ಸರ್ಜನ್ ಡಾ.ಎಚ್.ಬಿ.ಚಂದ್ರಶೇಖರ್, ಡಾ.ಚಂದ್ರಶೇಖರಸಾಲಿಮಠ, ಆರ್‍ಎಂಒ ಡಾ.ಬಿ.ಎಲ್.ಕಲ್ಪನ, ಆರ್ಥಿಕ ಸಲಹೆಗಾರರಾದ ಸರಿತಾ, ನೊಡೆಲ್ ಅಧಕಾರಿ ಡಾ.ಲೋಹಿತ್‍ಕುಮಾರ್, ಡಾ.ಶ್ರೀನಿವಾಸ್ ಆರ್.ದೇಶಪಾಂಡೆ, ಡಾ.ಎಂ.ಕೆ.ಯುವರಾಜ್, ಡಾ.ಶ್ರೀನಿವಾಸಮೂರ್ತಿ, ಡಾ.ಕೆ.ಎನ್.ಶ್ರೀಚರಣ್, ಡಾ.ಕೆ.ಪ್ರಜ್ವಲ್, ಕೆ.ಜೆ.ಜಾಸ್ಮಿನ್, ಡಾ.ಪ್ರೀತಿ ಎಲ್ಲ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಡಾ.ಜೆ.ಲಾವಣ್ಯ ಸ್ವಾಗತಿಸಿ, ಶ್ರೀಲಕ್ಷ್ಮಿ ವಂದಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ