ಅಂತರಾಷ್ಟ್ರೀಯ ಸೇವಾ ಸಂಸ್ಥೆಗಳಾದ ರೋಟರಿ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಗಳು ಸಮಾಜ ಮುಖಿ ಸೇವೆಯಲ್ಲಿ ಮಂಚೂಣಿಯಲ್ಲಿದೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ ಡಿ ರಾಜೇಗೌಡ ತಿಳಿಸಿದರು.
ಬಾಳೆಹೊನ್ನೂರು ಪಟ್ಟಣದ ಬಸ್ ಸ್ಟ್ಯಾಂಡ್ ಮುಂಭಾಗದಲ್ಲಿ ಇನ್ನರ್ ವ್ಹೀಲ್ ಕ್ಲಬ್ ನಿರ್ಮಿಸಿದ ಐ ಲವ್ ಯೂ ಬಾಳೆಹೊನ್ನೂರು ಹಾಗೂ ಮಲೆನಾಡಿನ ಸ್ಥಬ್ದ ಚಿತ್ರದ ಕಲಾಕೃತಿಯನ್ನು ಅನಾವರಣ ಮಾಡಿ ಮಾತನಾಡಿದರು.
ಈ ಕಲಾಕೃತಿಯೂ ಪಟ್ಟಣದ ಸೌಂದರ್ಯವನ್ನು ಹೆಚ್ಚಿಸಿರುವುದು ಜಿಲ್ಲೆಯಲ್ಲೆ ಪ್ರಥಮವಾಗಿದೆ. ದುಡಿಮೆಯ ಒಂದು ಭಾಗವನ್ನು ಸಮಾಜ ಮುಖಿ ಸೇವೆಗೆ ಮೀಸಲಿಟ್ಟು ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ, ಶಾಲಾ ಕಾಲೇಜುಗಳಿಗೆ ಅಗತ್ಯ ವಸ್ತುಗಳ ನೆರೆವು ನೀಡುವುದು.ಹಾಗೂ ಮಕ್ಕಳಿಗೆ ಮಾಹಿತಿ ಶಿಬಿರ ಏರ್ಪಡಿಸುವುದು ಪ್ರಮುಖವಾಗಿದೆ.
ಪಟ್ಟಣದ ಬಸ್ ನಿಲ್ದಾಣವು ಶೃಂಗೇರಿ, ಕೊಪ್ಪ, ನ ರಾ ಪುರ, ಕಳಸ, ಹೊರನಾಡಿಗೆ ಸಂಪರ್ಕ ಕಲ್ಪಿಸುವ ಕೇಂದ್ರವಾಗಿದ್ದು ಈ ಕಲಾಕೃತಿಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ ಹಾಗೂ ಲಯನ್ಸ್ ಕ್ಲಬ್ ನವರು ಜೋಡೆತ್ತು ಹಾಗೂ ರೈತನ ಸ್ಥಬ್ದ ಚಿತ್ರ ನಿರ್ಮಿಸಿ ಲೋಕಾರ್ಪಣೆ ಮಾಡಿದ್ದಾರೆ. ಗ್ರಾಪಂ ನವರು ಮಹಾತ್ಮ ಗಾಂಧೀಜಿಯವರ ಪ್ರತಿಮೆ ಸ್ಥಾಪಿಸಿ ರಾಷ್ಟ್ರಪಿತನಿಗೆ ಗೌರವ ಸಲ್ಲಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ರವಿಚಂದ್ರ ಮಾತನಾಡಿ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡ ಸಂಘ ಸಂಸ್ತೆಗಳಿಗೆ ಸಹಕಾರ ನೀಡುವುದು ಗ್ರಾಪಂ ಜವಬ್ದಾರಿಯಾಗಿದೆ. ಬಸ್ ಸ್ಟ್ಯಾಂಡ್ ಆವರಣದಲ್ಲಿ ನಿರ್ಮಿಸಿರುವ ಕಲಾಕೃತಿಗಳು ಅಜರಾಮರವಾಗಿದೆ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಸಹನಾ ಯೋಗೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ದಾನಿಗಳ ಸಹಕಾರದಿಂದ ಈ ಕಲಾಕೃತಿಗಳನ್ನು ನಿರ್ಮಿಸಲಾಗಿದೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಇನ್ನರ್ ವ್ಹೀಲ್ ಕ್ಲಬ್ ನ ವೈಶಾಲಿ ಕುಡ್ವ , ರೋಟರಿ ಅಧ್ಯಕ್ಷ ತಿಮ್ಮಯ್ಯ, ಠಾಣಾಧಿಕಾರಿ ಅಂಬರೀಶ್, ಸಿ ಟಿ ರೇವತಿ, ಹಿರಿಯಣ್ಣ, ಮಹಮ್ಮದ್ ಹನೀಫ್, ಸುರೇಶ್ ಸೇರಿದಂತೆ ಇನ್ನರ್ ವ್ಹೀಲ್ ಹಾಗೂ ರೋಟರಿ ಸದಸ್ಯರು ಭಾಗವಹಿಸಿದ್ದರು. ಶಬರೀನ್ ಪ್ರಾರ್ಥಿಸಿ, ನಂದಿಸಿ ಸ್ವಾಗತಿಸಿ, ಎಂ ಸಿ ಯೋಗೇಶ್ ನಿರೂಪಿಸಿ, ಕಾರ್ಯದರ್ಶಿ ಸುಪ್ರಿಯ ರಮೇಶ್ ವಂದಿಸಿದರು.



