1003159581

 

 

ಗುಂಪು ಗುಂಪು ಕಾಡಾನೆಗಳ ದಾಳಿಯಿಂದ ಮಲೆನಾಡಿನ ಜನರು ಹೈರಾಣಾಗುತ್ತಿದ್ದಾರೆ. ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿ, ನಂದೀಪುರ, ಗೋಣಿಬೀಡು, ಚಿನ್ನಿಗ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜನರು ಕಾಡಾನೆ ಹಾವಳಿಯಿಂದ ತೀವ್ರವಾಗಿ ಕಂಗೆಟ್ಟಿದ್ದಾರೆ. ಇದಕ್ಕೆ ಮುಖ್ಯ ಕಾರಣ ಹಾಸನ ಜಿಲ್ಲೆಯಿಂದ ಕಾಡಾನೆಯ ಗುಂಪುಗಳನ್ನು ಚಿಕ್ಕಮಗಳೂರು ಜಿಲ್ಲೆಯ ಗಡಿ ದಾಟಿಸುತ್ತಿರುವುದು ಎಂದು ಸ್ಥಳೀಯರ ಆರೋಪ

ವಾಸ್ತವವಾಗಿ ಸಕಲೇಶಪುರ ಸುತ್ತಮುತ್ತಲ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಸುಮಾರು 40ಕ್ಕೂ ಅಧಿಕ ಕಾಡಾನೆಗಳನ್ನು ಹಾಸನ ಅರಣ್ಯ ಇಲಾಖೆ ಮತ್ತು ಆನೆ ಕಾರ್ಯಪಡೆ ತಂಡಗಳು ಚಿಕ್ಕಮಗಳೂರು ಗಡಿಯ ಕಡೆಗೆ ಅಟ್ಟುತ್ತಿದ್ದಾರೆ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಅವರು ಸುಲಭ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಡ್ರೋನ್ ಗಳ ಮೂಲಕ ಆನೆಗಳ ಚಲನವಲವನ್ನು ಗಮನಿಸುತ್ತಾ ಅವುಗಳನ್ನು ಚಿಕ್ಕಮಗಳೂರು ಜಿಲ್ಲೆಯ ಗಡಿಗಳನ್ನು ದಾಟಿಸಲು ಆದ್ಯತೆ ನೀಡುತ್ತಿದ್ದಾರೆ. ಹಾಸನ ಜಿಲ್ಲೆಯ   ಹುನಗನಹಳ್ಳಿ ಗ್ರಾಮದಿಂದ ಚಿಕ್ಕಮಗಳೂರು ಜಿಲ್ಲೆಯ ಗಡಿ ಗ್ರಾಮಗಳಾದ ಕಲ್ಲುಗುಡ್ಡ, ಚಟ್ಟನಹಳ್ಳಿ, ಪುರ, ಗಬ್ಬಳ್ಳಿ, ಕಂಬರಗೋಡು  ಕಡೆಗೆ ಹಾಸನ್ ಜಿಲ್ಲಾ ಇಟಿಎಫ್ ಸಿಬ್ಬಂದಿ ಕಾಡಾನೆಗಳನ್ನು ಅಟ್ಟುತ್ತಿದ್ದಾರೆ ಎಂದು ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುಮಾರು 30 ರಿಂದ 40 ಕಾಡಾನೆಗಳ ಗುಂಪನ್ನು ಪ್ರತಿದಿನ ಪಟಾಕಿ ಸಿಡಿಸಿ ಬೊಬ್ಬೆ ಹಾಕಿ ಹಾಸನ ಜಿಲ್ಲೆಯ ಬೇಲೂರು ಮತ್ತು ಸಕಲೇಶಪುರ ಕಡೆಯಿಂದ ಮೂಡಿಗೆರೆ ಕಡೆಗೆ ಅಟ್ಟಲಾಗುತ್ತಿದೆ.  ಎರಡು ಜಿಲ್ಲೆಯ ಆನೆ ಕಾರ್ಯಪಡೆಗಳ ನಡುವೆ ಸಮನ್ವಯತೆಯ ಕೊರತೆ ಇದ್ದು, ಅವರು ಇತ್ತ ಕಡೆ ಇವರು ಅತ್ತ ಕಡೆ ಆನೆಗಳನ್ನು ಓಡಿಸುತ್ತಿರುವುದರಿಂದ ಗೊಂದಲ ಉಂಟಾಗುತ್ತಿದೆ. ಎರಡೂ ಜಿಲ್ಲೆಯ ಕಾರ್ಯಪಡೆಗಳು ಸೇರಿ ಜಂಟಿಯಾಗಿ ಒಂದು ನಿರ್ದಿಷ್ಟ ದಿಕ್ಕಿನ ಅಭಯಾರಣ್ಯದ ಕಡೆಗೆ ಆನೆಗಳನ್ನು ಅಟ್ಟುವ ಕೆಲಸ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ