suddi-5

 

 

ವಿವಿಧ ಮಸೀದಿ ವ್ಯಾಪ್ತಿಯಲ್ಲಿ ಬ್ಯಾರಿ ಪಂಗಡದವರು ಶುಕ್ರವಾರ ಈದ್ ಉಲ್ ಫಿತರ್ ಹಬ್ಬವನ್ನು ಆಚರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಕೇರಳದ ಪರಪ್ಪನಂಗಡಿಯ ಸಮುದ್ರ ತೀರದಲ್ಲಿ ಗುರುವಾರ ಸಂಜೆ ಶವ್ವಾಲ್ ತಿಂಗಳ ಮೊದಲ ಚಂದ್ರ ದರ್ಶನವಾಗಿದೆ. ಇದನ್ನು ಅಲ್ಲಿನ ಧಾರ್ಮಿಕ ವಿದ್ವಾಂಸರು ಸ್ಪಷ್ಟಪಡಿಸಿದ ನಂತರ ಮೂಡಿಗೆರೆ ಖಾಝಿ ಕೊಯ್ಯೋಡು ಉಮರ್ ಮುಸ್ಲಿಯರ್ ಅವರು, ಶುಕ್ರವಾರ ಈದ್ ಉಲ್ ಫಿತರ್ ಹಬ್ಬ ಆಚರಿಸುವಂತೆ ಪತ್ವಾ ಹೊರಡಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ರಂಜಾನ್ ತಿಂಗಳ ಉಪವಾಸ ವ್ರತಾಚರಣೆ ಕೊನೆಗೊಂಡಿದರಿಂದ ಈದ್ ಉಲ್ ಫಿತರ್ ಹಬ್ಬವನ್ನು ಪಟ್ಟಣದ ಬದ್ರಿಯಾ ಕೇಂದ್ರ ಜುಮಾ ಮಸೀದಿ, ಅರಳಿಗಂಡಿ, ಬಿಳಗುಳ, ಭೂತನಕಾಡು, ಹಾಂದಿ, ಹ್ಯಾಂಡ್ ಪೋಸ್ಟ್, ಬಣಕಲ್, ಚಕ್ಕಮಕ್ಕಿ, ಕೊಟ್ಟಿಗೆಹಾರ, ಗಬ್ಗಲ್, ತಲಗೂರು, ಹಿರೇಬೈಲ್, ಕಿತ್ತಲೆಗಂಡಿ, ಹಂಡುಗುಳಿ, ಅಣಜೂರು, ಕಸ್ಕೇಬೈಲ್ ಮತ್ತಿತರೆ ಕಡೆಗಳಲ್ಲಿ ಈದ್ ಉಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು. ಬೆಳಿಗ್ಗೆ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಬಳಿಕ ಖಬರ್ ಝಿಯಾರತ್ ನಡೆಯಿತು. ಆನಂತರ ಮುಸ್ಲಿಮರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಆಲ್ದೂರು ಸಮೀಪದ ಹಾಂದಿಯ ಖಿಲಾರಿಯ ಜುಮ್ಮಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಭಕ್ತಿ ಭಾವದಿಂದ ಈದ್ ಉಲ್ ಫಿತರ್ ಹಬ್ಬದ ಆಚರಣೆಯಲ್ಲಿ ಭಾಗವಹಿಸಿದ್ದರು.

ಮಸೀದಿಯ ಖಾತೀಬ್ ಕಯ್ಯುಮ್ ಫೈಝಿ ಹಬ್ಬದ ನಮಾಜ್ ನೇತೃತ್ವ ವಹಿಸಿದ್ದರು.

ರಂಜಾನ್ ಪ್ರಯುಕ್ತ 40 ದಿನಗಳ ಉಪವಾಸವನ್ನು ಕೈಗೊಂಡು ಕೆಡುಕಿನಿಂದ ಪರಿವರ್ತನೆ ಹೊಂದಿ ಒಳಿತನ್ನು ಬದುಕಿಗೆ ಅಳವಡಿಸಿಕೊಳ್ಳೋಣ ಶಾಂತಿ ಪ್ರೀತಿ ಸಹೋದರತ್ವದಿಂದ ಸರ್ವ ಸಮುದಾಯವನ್ನು ಗೌರವಿಸಿ ಸಹಬಾಳ್ವೆ ನಡೆಸೋಣ ಎಂದು ಹಬ್ಬದ ಸಂದೇಶ ನೀಡಿದರು. ಪ್ರಾರ್ಥನೆ ಬಳಿಕ ಹಬ್ಬದ ಶುಭಾಶಯಗಳು ವಿನಿಮಯ ಮಾಡಲಾಯಿತು.

ಸದರ್ ಉಮರ್ ಫಾರೂಕ್, ಹಸನಬ್ಬ, ಇಬ್ರಾಹಿಂ, ಮಸೀದಿಯ ಅಧ್ಯಕ್ಷರಾದ ಸೈಯದ್ ಸಮಿತಿಯ ಸದಸ್ಯರಾದ ಶರೀಫ್, ಕಲಂದರ್, ಸಲೀಂ, ಉಮರ್, ಖಾಸಿಂ ,ಅಬ್ದುಲ್ ರೆಹಮಾನ್, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ