ಪ್ರಕೃತಿಯ ಮಡಿಲಿನಲ್ಲಿ ಮನುಷ್ಯನಿಗೆ ಹೊಸತನ ಹಾಗೂ ಸ್ವಚ್ಚಂಧ ವಾತಾವರಣ ಸೃಷ್ಟಿಯಾಗುವುದು ಯುಗಾದಿ ಹಬ್ಬದಲ್ಲಿ ಮಾತ್ರ. ಹಿಂದುತ್ವದಲ್ಲಿ ವೈಜ್ಞಾನಿಕ ಚಿಂತನೆ ಹಾಗೂ ಬದುಕಿನ ಮೌಲ್ಯಗಳನ್ನು ಸ್ವವಿಸ್ತಾರವಾಗಿ ತಿಳಿಸಲಾಗಿದೆ ಎಂದು ಸ್ವದೇಶಿ ಜಾಗರಣ ಮಂಚ್ ಕ್ಷೇತ್ರಿಯ ಸಂಚಾಲಕ ಜಗದೀಶ್ ಹೇಳಿದರು.
ಚಿಕ್ಕಮಗಳೂರು ನಗರದ ಗಾಯತ್ರಿ ಸಮುದಾಯ ಭವನದಲ್ಲಿ ಭಾನುವಾರ ಸಂಜೆ ರಾಷ್ಟ್ರೀಯ ಸೇವಂಸೇವಕ ಸಂಘದ ವತಿಯಿಂದ ಆಯೋಜಿಸಿದ್ಧ ಯುಗಾದಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನೆಯ ಅಗ್ನಿಮೂಲೆಗೆ ಅಡುಗೆ ಕೋಣೆ, ಸೂರ್ಯೋದಯದ ಕಡೆ ಬಾಗಿಲು ನಿರ್ಮಾಣವು ಪ್ರಕೃತಿ ದತ್ತವಾದ ಪದ್ಧತಿಗಳು. ಹಿಂದುತ್ವದ ಜೀವನಶೈಲಿಗೆ ಸಾವಿರಾರು ವರ್ಷಗಳ ಆಚಾರವಿದೆ. ಹಿಂದೂ ಧರ್ಮ ವೈಜ್ಞಾನಿಕ ಮತ್ತು ಸತ್ಯಕ್ಕೆ ಪೂರಕವಾದ ಧರ್ಮವಾಗಿದೆ. ಹೊಸವರ್ಷದಂದೇ ಹೆಗಡೇವಾರ್ ಜನ್ಮದಿನದಲ್ಲಿ ವ್ಯಕ್ತಿಪೂಜೆಗಿಂತ, ಪ್ರಕೃತಿಯನ್ನು ಪೂಜಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.
1925ರಲ್ಲೇ ನವ ತರುಣರೊಂದಿಗೆ ಆರ್‍ಎಸ್‍ಎಸ್ ಸಂಘಟನೆ ಸ್ಥಾಪಿಸಿದ ಹೆಗಡೇವಾರ್, ಹಿಂದುತ್ವದ ಉಳಿವಿಗಾಗಿ ಅಹಂಕಾರ ಪಡದೇ, ಸಹನೆಯಿಂದಲೇ ಸಂಘಟನೆಯನ್ನು ಬೆಳೆಸಿದವರು. ಇದೀಗ ಶತಮಾನೋತ್ಸವ ಸಂಭ್ರಮ ಆಚರಿಸಿಕೊಂಡಿದ್ದು ಈ ಸಂಘದಿಂದ ಬೆಳೆದ ವ್ಯಕ್ತಿ ರಾಷ್ಟ್ರದ ಪ್ರಧಾನಿಯಾಗಿ, ವಿಶ್ವನಾಯಕರಾಗುತ್ತಿದ್ದಾರೆ ಎಂದು ತಿಳಿಸಿದರು.
ಮನುಷ್ಯ ನಾನು ಎಂಬ ಅಹಂಕಾರ ಬಿಟ್ಟಲೇ ಮಾತ್ರ ಬೆಳವಣೀಗೆ ಹೊಂದಲು ಸಾಧ್ಯ. ಆ ನಿಟ್ಟಿನಲ್ಲಿ ನಾನು ಎಂಬುವ ಬದಲು, ನಮ್ಮದು ಎಂಬ ಧ್ಯೇಯವಿರಬೇಕು. ಈ ಸಂಘದಲ್ಲಿ ಭಾರತೀಯರು ಕೈಜೋಡಿಸಿ ದ್ದಾರೆ. ಪ್ರತಿಯೊಬ್ಬ ಆರ್‍ಎಸ್‍ಎಸ್ ಕಾರ್ಯಕರ್ತರಲ್ಲಿ ತಮ್ಮದೇ ಜವಾಬ್ದಾರಿ ನಿರ್ವಹಿಸಿಕೊಂಡು, ಪ್ರತಿ ಮನೆಗೂ ರಾಷ್ಟ್ರದ ಚಿಂತನೆ ತಿಳಿಸಬಹುದು ಎಂದರು.
ಕೇಶವಜೀ ಅವರು ರಾಷ್ಟ್ರ ಸೇನಾಪತಿ ಬಿರುದನ್ನು ತಿರಸ್ಕರಿಸಿದವರು. ಸಂಘದಲ್ಲೂ ಸಹ ಈ ಬಿರುದು ಎಲ್ಲಿಯೂ ಪ್ರಚಾರಪಡಿಸಬಾರದೆಂಬ ಆಜ್ಞೆ ಹೊರಡಿಸಿದ್ದರು. ಈ ಸದ್ವಿಚಾರದಡಿ ಕೇಶವ್‍ಜೀ ಅವರು ಸಂಘ ಸ್ಥಾಪಿಸಿದ ಕಾರಣ ಇಂದು ದೇಶಾದ್ಯಂತ ಅನೇಕ ಶಾಖೆಗಳನ್ನು ತೆರೆದು ಹಿಂದುತ್ವದ ಪ್ರಚಾರದಲ್ಲಿ ತೊಡಗಿ ಸಿಕೊಂಡಿದೆ ಎಂದು ಹೇಳಿದರು.
ರಾಷ್ಟ್ರನಿಷ್ಟೆ, ಸ್ವಾಭೀಮಾನಕ್ಕೆ ಎಂದಿಗೂ ರಾಜೀಯಾಗದ ವ್ಯಕ್ತಿ ಹೆಗಡೇವಾರ್. ಗೋಹತ್ಯೆ ಸಂಪೂರ್ಣ ವಿರೋಧಿಸುತ್ತಿದ್ದರು. ಒಮ್ಮೆ ಬಾಲಗಂಗಾಧರ್ ತಿಲಕ್ ಬಗ್ಗೆ ಕೆಲವರು ತುಚ್ಯವಾಗಿ ಮಾತನಾಡಿದ್ದನ್ನು ಕಂಡು ಸಹಿಸಿಕೊಳ್ಳದೇ ಭಾಷಣಕಾರರಿಗೆ ಬಿಸಿಮುಟ್ಟಿಸಿದ ಸನ್ನಿವೇಶವು ಹೆಗಡೇವಾರ್ ಜೀವನದಲ್ಲಿ ನಡೆದಿತ್ತು ಎಂ ದು ತಿಳಿಸಿದರು.

ಇಂದು ರಾಷ್ಟ್ರದಲ್ಲಿ ಅನೇಕ ರಾಜಕೀಯ, ಕಮ್ಯೂನಿಸ್ಟ್ ಹಾಗೂ ಸಂಘ-ಸಂಸ್ಥೆಗಳು ಉಗಮಿಸಿದ್ದು, ಅ ವುಗಳಲ್ಲಿ ಬಹುತೇಕರು ಹತ್ತಾರು ವಿಂಗಡಣೆಗೊಂಡಿವೆ. ಆದರೆ ಆರ್‍ಎಸ್‍ಎಸ್ ಸಂಘಟನೆ ಸ್ಥಾಪನೆಗೊಂಡು ನೂರು ವರ್ಷ ಪೂರೈಸಿದರೂ, ಒಂದೇ ಹಾದಿಯಲ್ಲಿ ಸಾಗಿ, ರಾಷ್ಟ್ರದಹಿತ ಚಿಂತನೆಯನ್ನು ಎತ್ತಿಹಿಡಿಯುತ್ತಿದೆ ಎಂದರು.
ಹಿಂದು ಧರ್ಮವು ವಸುದೇವ ಆಶಯದಲ್ಲಿ ಜಗತ್ತಿಗಿರುವುದು ಒಂದೇ ಕುಟುಂಬವೆಂದು ಭಾವಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲೂಮ್ ಬಯೋಟೆಕ್ ಮಾಲೀಕ ಸುಹಾಸ ಮೋಹನ್, ಆರ್‍ಎಸ್‍ಎಸ್ ಸಂಘ ಟಕರಾದ ರಾಜಾರಾಮ್ ಕೋಟೆ, ಘನಶ್ಯಾಮ್‍ಆಳ್ವಾ ಹಾಗೂ ಗಣವೇಷದಾರಿಗಳು ಉಪಸ್ಥಿತರಿದ್ದರು.



