ಸರಳ ಭಾಷೆಯಲ್ಲಿ ಸರ್ವರಿಗೂ ಅರಿಯುವಂತೆ ವಚನಗಳನ್ನು ರ ಚಿಸಿದ ದೇವರ ದಾಸಿಮಯ್ಯ ಸಮಸಮಾಜ ನಿರ್ಮಾಣ ಮಾಡಿ ಸನ್ಮಾರ್ಗದೆಡೆಗೆ ಕೊಂಡೊಯ್ದ ಮಹಾತ್ಮ ರು ಎಂದು ಮಲೆನಾಡು ದೇವಾಂಗ ಸಂಘದ ಅಧ್ಯಕ್ಷ ಭಗವತಿ ಹರೀಶ್ ಹೇಳಿದರು.
ನಗರದ ಜಿಲ್ಲಾ ದೇವಾಂಗ ಸಂಘದ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ದೇವಾಂಗ ಸಂಘ ಮತ್ತು ಬನಶಂಕರಿ ಮಹಿಳಾ ಸಂಘದ ವತಿಯಿಂದ ಆಯೋಜಿಸಿದ್ಧ ಆದ್ಯ ವಚನಕಾರ ದೇವರ ದಾಸಿಮಯ್ಯನವರ 1046ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇವರ ದಾಸಿಮಯ್ಯ ವಚನಗಳ ಮೂಲಕ ಸಾಮಾಜಿಕ, ಅಸಮಾನತೆ ಹೋಗಲಾಡಿಸಲು ಶ್ರಮಿಸಿ ದವರು. ದಾಸಿಮಯ್ಯನವರ ವಚನಗಳ ಸಾರವನ್ನು ಆಧುನಿಕ ಜಗತ್ತಿನ ಯುವಜನರಿಗೆ ತಿಳಿಸಿ ಸುಸಂಸ್ಕøತ ರಾಗಿ ಮಾಡುವುದು ಪಾಲಕರ ಕರ್ತವ್ಯ ಎಂದು ತಿಳಿಸಿದರು.
ಹನ್ನೊಂದನೇ ಶತಮಾನದ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರು ವಚನ ಸಾಹಿತ್ಯದ ಮೂ ಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಮಾಜದಲ್ಲಿರುವ ಲೋಪಗಳನ್ನು ಸರಿಪಡಿಸಿಕೊಳ್ಳ ಲು ಈ ಮಹಾತ್ಮರ ಜಯಂತಿ ಆಚರಿಸುವ ಜೊತೆಗೆ ಮಹಾತ್ಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊ ಳ್ಳಬೇಕು ಎಂದು ಹೇಳಿದರು.
ಪರೋಪಕಾರವನ್ನೇ ಜೀವನವನ್ನಾಗಿಟ್ಟುಕೊಂಡು ಬದುಕುವ ಮಹಾನ್ ಆದರ್ಶ ಪುರುಷರಲ್ಲಿ ದಾಸಿ ಮಯ್ಯ ಕೂಡ ಪ್ರಮುಖರಾಗಿದ್ದಾರೆ. ಮಹಿಳಾ ಸಮಾನತೆ, ಅಸ್ಮಿತೆಯ ಬಗ್ಗೆ ತನ್ನ ವಚನದ ಮೂಲಕವೇ ತಿಳಿಸಿದ ಶ್ರೇಷ್ಠ ವಚನಕಾರರಾಗಿದ್ದು, ಆತ್ಮಕ್ಕೆ ಯಾವುದೇ ಜಾತಿ, ಲಿಂಗ ಭೇದವಿಲ್ಲವೆಂದು ಅಂದಿನ ಕಾಲ ದಲ್ಲಿಯೇ ತಿಳಿಸಿದ ವಚನಕಾರ ಎಂದರು.
ಸಾಹಿತಿ ಸಿಂಗಟಗೆರೆ ಸಿದ್ದಪ್ಪ ಉಪನ್ಯಾಸ ನೀಡಿ ಮಾತನಾಡಿ ಮನುಷ್ಯನ ಇಂದು ಅಂದ-ಚೆಂದದ ಉ ಡುಗೆ ತೊಡಲು ನೇಕಾರಿಕೆ ವೃತ್ತಿ ಕಾರಣ. ಆ ನಿಟ್ಟಿನಲ್ಲಿ 11ನೇ ಶತಮಾನದಲ್ಲಿ ವಚನಗಳ ಜೊತೆಗೆ ನೇಕಾರಿಕೆ ವೃತ್ತಿ ಅವಲಂಬಿಸಿದವರು ದಾಸಿಮಯ್ಯನವರು. ಇಂದು ಸಮಾಜದ ವಿವಿಧ ಕ್ಷೇತ್ರದಲ್ಲಿ ವೃತ್ತಿ ಸಲ್ಲಿಸುವವರು, ಮೂಲ ನೇಕಾರಿಕೆ ವೃತ್ತಿಯನ್ನು ಮರೆಯಬಾರದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಶ್ರೀನಿವಾಸ್ ಹುಟ್ಟಿ ದ ಮನುಷ್ಯ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಆಗಬೇಕು. ರಾಮನಿಗೆ ಅಳಿಲು ಸೇವೆ ಸಲ್ಲಿಸಿದಂತೆ. ಮನುಷ್ಯನು ನಿಸ್ವಾರ್ಥ ಸೇವಾಗುಣ ಬೆಳೆಸಿಕೊಂಡಲ್ಲಿ ದಾಸಿಮಯ್ಯನವರ ವಚನಗಳಿಗೆ ನಿಜವಾದ ಅರ್ಥ ಬರಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ದೇವಾಂಗ ಸಂಘದ ಉಪಾಧ್ಯಕ್ಷ ಸತ್ಯಮೂರ್ತಿ, ಸಂಘಟನಾ ಕಾರ್ಯದರ್ಶಿ ದಿನೇಶ್, ಸದಸ್ಯರಾದ ರಮೇಶ್, ಚಂದ್ರಶೇಖರಯ್ಯ, ಬನಶಂಕರಿ ಮಹಿಳಾ ಸಂಘದ ಉಪಾಧ್ಯಕ್ಷೆ ರಾಧಾ ರಾಜಕುಮಾರ್, ಕಾರ್ಯದರ್ಶಿ ಧನಲಕ್ಷ್ಮೀ, ಸದಸ್ಯೆ ಹೇಮಾವತಿ ಮತ್ತಿತರರು ಉಪಸ್ಥಿತರಿದ್ದರು.



