suddi-16 (1)

 

 

ರಕ್ತದಾನಕ್ಕೆ ಜಾತಿ ತಾರತಮ್ಯವಿಲ್ಲ. ಜೀವ ಉಳಿಸುವ ಪ್ರತಿಯೊಬ್ಬ ವ್ಯಕ್ತಿಯು ಜೀವಸಂರಕ್ಷಕರೇ. ಶ್ರೀಮಂತಿಕೆ ಎಷ್ಟೇ ಉತ್ತಮವಾಗಿದ್ದರೂ, ತುರ್ತು ವೇಳೆ ರಕ್ತದ ಅವಶ್ಯವಿದ್ದಾಗ ಬಡವ ಅಥವಾ ಶ್ರೀಮಂತನೆಂಬ ಬೇಧವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ನಗರದ ಗೃಹ ಮಂಡಳೀ ಬಡಾವಣೆ ಸಮೀಪದ ತ್ರಿಮೂರ್ತಿ ದೇಗುಲದ ಸಭಾಂಗಣದಲ್ಲಿ ಭಾನುವಾ ರ ಪರಮಪೂಜ್ಯ ಗುರುಗಳಾದ ಡಾಕ್ಟರ್‍ಜೀಯವರ ಜನ್ಮದಿನದ ಪ್ರಯುಕ್ತ ವಿವೇಕ ಜಾಗೃತ ಬಳಗದಿಂದ ಆಯೋಜಿಸಿದ್ಧ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸೇವೆಯ ಮೂಲಕ ಪರೋಪಕಾರ ಧರ್ಮ ಪಾಲಿಸಬೇಕು. ಮಾನವ ಹಾಗೂ ಮೂಖಪ್ರಾಣಿಗಳಿಗೆ ಸ್ಪಂದಿಸುವ ಸೇವಾಗುಣ ಬೆಳೆಸಿಕೊಂಡಲ್ಲಿ ಮನುಷ್ಯನ ಜೀವನ ಸಾರ್ಥಕವಾದಂತೆ ಹಾಗೂ ಇತರರಿಗೂ ಪ್ರೇ ರಣೆಯಾಗಲಿದೆ. ಆ ನಿಟ್ಟಿನಲ್ಲಿ ರಕ್ತದಾನಿಗಳ ಪಟ್ಟಿಯನ್ನು ಪ್ರತಿವರ್ಷ ಹೆಚ್ಚಿಸಬೇಕು ಎಂದರು.

ರಕ್ತದಾನಿಗಳಿಗೆ ಜಾತಿ-ಧರ್ಮ, ಬಡವ-ಶ್ರೀಮಂತ ಹಾಗೂ ಮೇಳು-ಕೀಳು ಬೇಧವಿಲ್ಲ. ಕೇವಲ ರಕ್ತ ಕಣಕ್ಕೆ ಬೇರೆ ಬೇರೆ ಗ್ರೂಪ್‍ಗಳಿವೆ. ವಾಸ್ತವಿಕ ನೆಲೆಗಟ್ಟಿನಲ್ಲಿ ಮನುಷ್ಯ ಮತ್ತು ಪ್ರಾಣಿ ಎಲ್ಲರನ್ನೊಳಗೊಂಡು ಬದುಕಬೇಕು. ಜಗದ ಕವಿ ಕುವೆಂಪು ಆಶಯದಂತೆ ವಿಶ್ವಮಾನವ ಸಂದೇಶವನ್ನು ನಾವುಗಳು ಅಳವಡಿಸಿ ಕೊಳ್ಳಬೇಕು ಎಂದು ತಿಳಿಸಿದರು.

ರಕ್ತದಾನದಿಂದ ಹೃದಯ ಸಂಬಂಧ ತೊಂದರೆ ಕಡಿಮೆಯಾಗಲಿದೆ. ಹೊಸ ಕೆಂಪು ರಕ್ತ ಕಣಗಳು ಉ ತ್ಪತಿಯಾಗಿ ದೇಹವು ಹೊಸ ರಕ್ತವನ್ನು ಉತ್ಪಾದಿಸಲಿದೆ ಹಾಗೂ ದೇಹದ ಅಂಗಾಂಗಗಳಲ್ಲಿ ಅನಾವಶ್ಯಕ ಕಬ್ಬಿ ನಾಂಶ ಕ್ರೂಢೀಕರಣ ಆಗುವುದನ್ನು ತಪ್ಪಿಸುತ್ತದೆ ಎಂದು ಹೇಳಿದರು.

ಪ್ರಕೃತಿಯ ಪಂಚ ಭೂತಗಳಾದ ಗಾಳಿ, ನೀರು, ಬೆಳಕು, ಅಗ್ನಿ ಹಾಗೂ ಆಕಾಶವನ್ನು ಪೂಜಿಸಬೇಕು. ನಾನು, ನನ್ನದು ಅಥವಾ ಅಹಂನಲ್ಲಿ ಬದುಕಬಾರದು. ನಾವುಗಳು ಎಂಬುವಂತೆ ಜೀವಿಸಬೇಕು. ಆದರಂತೆ ಡಾಜೀಯವರು ಹಣ, ಕೀರ್ತಿಗೆ ಬದುಕಿದವರಲ್ಲ. ಸಮಾಜದ ಏಕತೆ ಹಾಗೂ ಸದ್ವಿಚಾರದಡಿ ಜೀವನ ರೂಪಿ ಸಿಕೊಂಡ ಅಪರೂಪ ವ್ಯಕ್ತಿ ಎಂದರು.

ವಿವೇಕ ಜಾಗೃತ ಬಳಗದ ಅಧ್ಯಕ್ಷ ರಾಜೀವ್ ಮಾತನಾಡಿ ಕಳೆದ ಮೂರು ವರ್ಷಗಳಿಂದ ಡಾ||ಜೀಯ ವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತಿದ್ದೇವೆ. ರಕ್ತಕ್ಕೆ ಮತ್ಯಾವ ಪರ್ಯಾಯವು ಇಲ್ಲ. ವೈದ್ಯಕೀಯ ಕ್ಷೇತ್ರ ಇಷ್ಟೆಲ್ಲಾ ಮುಂದುವರೆದಿದ್ದರೂ ರಕ್ತಕ್ಕೆ ಬದಲಿ ವ್ಯವಸ್ಥೆಯನ್ನು ಇಲ್ಲಿಯತನ ಕಂಡುಹಿಡಿ ಯಲಾಗಿಲ್ಲ ಎಂದು ತಿಳಿಸಿದರು.

ಮಾನವರು ಮಾತ್ರ ಇನ್ನೋರ್ವ ಮಾನವನಿಗೆ ರಕ್ತದಾನವನ್ನು ಮಾಡಬಹುದು ಹಾಗೂ ಜೀವ ಉಳಿಸ ಬಹುದು. ಬಹುತೇಕರು ಜನರು ಎಂದಾದರೂ ತಮಗೂ ಕೂಡ ರಕ್ತದ ಅವಶ್ಯಕತೆ ಬೀಳಬಹುದು ಎಂದು ಯೋಚಿಸುವುದಿಲ್ಲ. ಅವಶ್ಯವಿದ್ದಾಗ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ವಾಸ್ತವವಾಗಿ ಓರ್ವ ಆರೋ ಗ್ಯವಂತ ವ್ಯಕ್ತಿ ರಕ್ತದಾನ ಮಾಡಿದರೆ ಮೂರು ಮಂದಿ ಜೀವ ಉಳಿಸಲು ಸಾಧ್ಯ ಎಂದರು.

ಸಾಂಸ್ಕøತಿಕ ಚಿಂತಕ ಡಾ|| ಜೆ.ಪಿ.ಕೃಷ್ಣೇಗೌಡ ಮಾತನಾಡಿ ರಕ್ತದಾನ ಮಾಡುವುದರಿಂದ ಹೆಚ್ಚುವರಿ ಕೊ ಲೆಸ್ಟ್ರಾಲ್ ಕಡಿಮೆಗೊಳಿಸಲಿದೆ. ಕ್ಯಾನ್ಸರ್‍ನಂಥ ರೋಗಳನ್ನು ಕೂಡ ತಡೆಗಟ್ಟಬಹುದು. ಮಾನವನ ರಕ್ತದಲ್ಲಿ ರುವ ಬ್ಯಾಡ್ ಕೊಲೆಸ್ಟಾಲ್ ಅನ್ನು ಕೂಡಾ ಕಡಿಮೆ ಹಾಗೂ ಚರ್ಮದ ಆರೋಗ್ಯವನ್ನು ಉತ್ತಮಗೊಳಿಸಲಿದೆ ಎಂದು ತಿಳಿಸಿದರು.

ಇದೇ ವೇಳೆ ಶಿಬಿರದಲ್ಲಿ 120ಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಿತರಾಗಿ ಪಾಲ್ಗೊಂಡ ರಕ್ತದಾನ ಮಾಡಿ ಡದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಕವಿತಾ ಶೇಖರ್, ವಿವೇಕ ಜಾಗೃತ ಬಳಗದ ಗೌರವಾಧ್ಯಕ್ಷ ಸುಬ್ಬಣ್ಣ, ಹೋಲಿಕ್ರಾಸ್ ಆಸ್ಪತ್ರೆ ಆಡಳಿತಾಧಿಕಾರಿ ಲೀಸಿಜಾನ್, ಡಾ|| ಅನೀತ್‍ಕುಮಾರ್, ಡಾ|| ಗೌರಿ ಹಾಗೂ ಜಾಗೃತ ಬಳಗದ ತಂಡದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ