ಮೂಡಿಗೆರೆ ತಾಲೋಕು ಪಂಚಾಯಿತಿ ಸಂಜೀವಿನಿ ಒಕ್ಕೂಟ ಸ್ವ ಸಹಾಯ ಸಂಘಗಳಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ತಾಲೋಕು ಸಂಜೀವಿನಿ ಒಕ್ಕೂಟದ ಎಲ್ಲ ಮಹಿಳೆಯರಿಗೆ ಆಟೋಟ ಸ್ಪರ್ಧೆ ಏರ್ಪಡಿಸಿದ್ದು ಸ್ಪರ್ಧೆಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ತಾಲೋಕು ಅರೋಗ್ಯ ಅಧಿಕಾರಿಗಳ ತಂಡದೊಂದಿಗೆ ಅರೋಗ್ಯ ಶಿಬಿರವನ್ನು ವಿಮುಕ್ತಿ ಸಂಸ್ಥೆಯ ವತಿಯಿಂದ ಏರ್ಪಡಿದಸಿದ್ದು ಏನ್ ಅರ್ ಎಂ ಎಲ್ ನ ತಾಲೋಕು ಅಧ್ಯಕ್ಷರಾದ ಚಂದ್ರಾವತಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಚಂದ್ರಾವತಿ ಮಾತನಾಡಿ ಸಂಜೀವಿನಿ ಒಕ್ಕೂಟದಲ್ಲಿ ಮಹಿಳೆಯರಿಗೆ ಹಲವು ಸವಲತ್ತುಗಳಿದ್ದು ಇವುಗಳ ಸದುಪಯೋಗ ಪಡಿಸಿಕೊಂಡಲ್ಲಿ ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗಲಿದೆ. ಸೃಷ್ಟಿಗೆ ಮೂಲ ಕಾರಣಕರ್ತಳು ಹೆಣ್ಣು. ಪುರಾತನ ಕಾಲದಿಂದಲೂ ಹೆಣ್ಣಿಗೆ ತನ್ನದೇ ಅದ ಗೌರವವಿದೆ. ಇಂದು ಸಾಮಾಜಿಕ, ಶೈಕ್ಷಣಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ತನ್ನದೆ ಅದ ಛಾಪು ಮೂಡಿಸಿದ್ದಾರೆ. ಮಹಿಳೆಯರು ಕ್ರೀಡೆ, ಸಿನಿಮಾ, ಗಗನಯಾನ ಹೀಗೆ ಹಲವು ಕ್ಷೇತ್ರದಲ್ಲೂ ಅಗಾದ ಸಾಧನೆ ಮಾಡಿದ್ದಾಳೆ ಎಂದರು.
ವಿಮುಕ್ತಿ ಸಂಸ್ಥೆಯ ಸಂಯೋಜಕರಾದ ವಿಂದ್ಯಾ ಮಾತನಾಡಿ ನಮ್ಮ ಸಂಸ್ಥೆ ಮಹಿಳೆ ಮತ್ತು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ತಾಲೂಕಿನಾದ್ಯಂತ ಅರೋಗ್ಯ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಇದೆ ಉದ್ದೇಶದಿಂದ ಈ ತಿಂಗಳ 29.03.3026 ರರಂದು ಬಣಕಲ್ ಚರ್ಚ್ ಸಮುದಾಯ ಭವನದಲ್ಲಿ ಉಚಿತ ಅರೋಗ್ಯ ಶಿಬಿರವನ್ನು ಏರ್ಪಡಿಸಿದ್ದು ಶಿಬಿರದಲ್ಲಿ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಚರ್ಮರೋಗ ತಜ್ಞರು, ಮಕ್ಕಳ ತಜ್ಞರು, ಸ್ತ್ರೀ ರೋಗ ತಜ್ಞರು, ಕಣ್ಣಿನ ತಜ್ಞರಿಂದ ಉಚಿತ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ ನಮ್ಮ ದೇಶ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ಒಂದಾಗಿದ್ದರು ಇಲ್ಲಿ ಬಹುತೇಕ ಮಹಿಳೆಯರು ಮತ್ತು ಮಕ್ಕಳು ನಾನಾ ಸಂಕಷ್ಟಗಳನ್ನು ಎದುರಿಸುತ್ತಿದ್ದು ಮಹಿಳೆಯರಿಗೆ ಕಾನೂನು ಅರಿವು ಇಲ್ಲದಿರುವುದು ಬಹು ಮುಖ್ಯ ಕಾರಣವಾಗಿದೆ. ಇಂದಿನ ಮಕ್ಕಳು ತಮ್ಮ ಶಾಲಾ ದಿನಗಳಲ್ಲಿಯೇ ಅತಿಯಾಗ ಮೊಬೈಲ್ ಬಳಕೆಯಿಂದ ಅಡ್ಡದಾರಿ ಹಿಡಿಯುತ್ತಿದ್ದು ಕೆಲ ದುಷ್ಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿಯಾಗಿದ್ದು ಯುವಕರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹಾಗೂ ಸ್ವ ಸಹಾಯ ಸಂಘ ಮತ್ತು ಶ್ರೀ ಶಕ್ತಿ ಸಂಘಗಳು ನನ್ನ ಅಧಿಕಾರಿ ಅವಧಿಯಲ್ಲಿ ಸ್ಥಾಪನೆಯಾಗಿರುವದು ಎಂದು ನೆನಪಿಸಿದರು.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ದಯಾವತಿ ಮಾತನಾಡಿ ಮಹಿಳೆಯರ ಆರೋಗ್ಯ ಮುಖ್ಯವಾದದ್ದು, ಮಹಿಳೆಯರು ಆರೋಗ್ಯವಾಗಿದ್ದರೆ ಇಡೀ ಕುಟುಂಬವೇ ಸುರಕ್ಷಿತವಾಗಿರುತ್ತದೆ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಮಹಿಳೆಯರಿಗೆ ಕಬ್ಬಡಿ, ಹಗ್ಗ ಜಗ್ಗಾಟ, ವಾಲಿಬಾಲ್, ತ್ರೋಬಾಲ್ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಯ ತಾಲ್ಲೂಕು ಅಧ್ಯಕ್ಷ ಬಿ.ಎಸ್. ಜಯರಾಮ್, ಎಸ್ ಕೆ ಎಸ್ ಕಾರ್ಯದರ್ಶಿ ಸರೋಜಾ, ಡಾ. ಅಮೀನಾ ಕೌಸರ್ (ಸಿಎಚ್), ರವಿ ಎನ್ ಆರ್ ಎಲ್ ಎಂ ನಿರ್ದೇಶಕರು ತಾಲೂಕು ಪಂಚಾಯತಿ ಶಾಲಿನಿ ಹಾಗೂ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಭಾಗಿಯಾಗಿದ್ದರು.



