suddi-8

 

 

ಶ್ರೀರಾಮನ ಆದರ್ಶಗಳು ನಮ್ಮಗಳ ಬದುಕಿನಲ್ಲಿ ಹಾಸುಹೊಕ್ಕಾಗಬೇಕು ಅದೇ ಶ್ರೀರಾಮನವಮಿಯ ದೊಡ್ಡ ಸಂಕೇತ ಎಂದು ಕನ್ನಡ ಪೂಜಾರಿ ಹಿರೇಮಗಳುರು ಕಣ್ಣನ್ ಹೇಳಿದರು.

ಶ್ರೀರಾಮನವಮಿ ಅಂಗವಾಗಿ ಹಿರೇಮಗಳೂರು ಶ್ರೀ ಕೋದಂಡರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಸೀತಾರಾಮನ ಮೂರ್ತಿಗೆ ಪಂಚಾಮೃತ ಅಭಿಷೇಕದ ಮೂಲಕ ವಿಶೇಷ ಪೂಜೆ ಸಲ್ಲಿಸಿ ನಂತರ ಮಾತನಾಡಿದರು.

ಮರ್ಯದ ಪುರುಶೋತ್ತಮ ಇಡೀ ಭಾರತದ ಮೂಲಕ ತಾನು ಅವತರಿಸಿ ಜಗದಗಲ, ಮುಗಿಲಗಲ, ಮಿಗೆಯಗಲ ಅವನ ಕಾರ್ಯಕ್ಷೇತ್ರವನ್ನು ಜಗತ್ತಿಗೆ ವಿಸ್ತರಿಸಿ ವಿಶ್ವ ಮಾನವತ್ವವನ್ನು ಪ್ರತಿಪಾದಿಸಿದಂತಹ ಮಾನವ ಅವತಾರಿ ಶ್ರೀರಾಮಚಂದ್ರ. ರಾಮನೆಲ್ಲರ ತಂದೆ, ಜಾನಕಿಯ ತಾಯಿ, ಭೂಮಿಯ ಜನವೆಲ್ಲ ಅಣ್ಣ ತಮ್ಮಂದಿರು, ಬಿಡು ಹಾಳು ಜಗಳಗಳ, ಮರೆ ಕೆಟ್ಟ ನುಡಿಯ, ತೊಡು ಸತ್ಯ ವ್ರತವ, ತೊರೆ ದುಷ್ಟ ಕತೆಯ, ಧರ್ಮಕ್ಕೆ ಹೋರಾಡು, ನ್ಯಾಯಕ್ಕೆ ಬಾಗು, ನಲ್ಮೆತೊರೆಲ್ಲರಿಗೂ ಪ್ರೀತಿ ದರೆಗಾಗು ಎಂದು ಹನುಮಂತನ ಮೂಲಕ ಜಗತ್ತಿನ ಎಲ್ಲರಿಗೂ ರಾಮನ ಕೃಪೆ ಪ್ರಾಪ್ತವಾಗಲಿ ಹಾಗೂ ರಾಮರಾಜ್ಯದ ಸ್ಥಾಪನೆಗೆ ಪ್ರಾರ್ಥಿಸಲಾಗಿದೆ. ಪ್ರಪಂಚದಲ್ಲಿ ನಡೆಯುತ್ತಿರುವ ಯುದ್ಧಗಳೆಲ್ಲಾ ನಿಂತು ಎಲ್ಲರಿಗೂ ಬುದ್ದನಂತೆ ಜ್ಞಾನೋದಯವಾಗಿ ಎಲ್ಲರ ಬದುಕು ಸುಖವಾಗಿ ಸಿದ್ದಿಸಲಿ ಎಂದು ಹೇಳಿದರು.

ಹಿಂದು ಎಂದರೇನು ಎಂಬುದನ್ನು ನಮ್ಮ ಜನ ತಿಳಿಯಬೇಕು, ಹಿಂಸೆಯಿಂದ ದೂರ ಸರಿದವನೆ ಹಿಂದೂ ಎಂಬುದೆ ಹಿಂದುವಿನ ಅರ್ಥ ಅಂತಹ ಹಿಂಸೆಯನ್ನು  ದೂರಸರಿಸಿ ಶಾಂತಿ ಮೂರ್ತಿಯಾಗಿ ಬದುಕಿ, ಬಾಳಿ ಇದು ಮನುಕುಲವೆಂದು ತಮ್ಮೆಲ್ಲರಿಗೂ ತೋರಿಸಿಕೊಟ್ಟ ಶ್ರೀರಾಮನ ಗುಣವಾಚಕ ನಮ್ಮೆಲ್ಲರ ಹೃದಯದಲ್ಲಿ ನಿತ್ಯ ನಳನಳಿಸಲಿ ಎಂದರು.

ಬೆಳ್ಳಗ್ಗೆ ಸೀತಾರಾಮನ ಮೂರ್ತಿಗೆ ಪ್ರಧಾನ ಅರ್ಚಕ ಕಣ್ಣನ್ ಹಾಗೂ ಅರ್ಚಕ ವೈಷ್ಣವ ಸಿಂಹ ನೇತೃತ್ವದಲ್ಲಿ ಸುಪ್ರಬಾತ ಸೇವೆ, ಹಾಲು, ಮೊಸರು, ತುಪ್ಪ, ಸಕ್ಕರೆ ವಿವಿಧ ಬಗೆಯ ಫಲಗಳೊಂದಿಗೆ ಪಂಚಾಮೃತ ಅಭಿಷೇಕ , ಹೋಮ ಹವನದೊಂದಿಗೆ ವಿಶೇಷ ಪುಷ್ಪಾಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು. ನಂತರ ಮಾಡಿದ ಅರಿಶಿಣದ ಅಭಿಷೇಕ ಭಕ್ತರ ಗಮನ ಸೆಳೆಯಿತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ