love mocktile

 

 

ಲವ್ ಮಾಕ್‌ಟೇಲ್ 3   ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ಮತ್ತು ಯದುನಂದನ್ ಅವರ ಕತೆಯನ್ನೊಳಗೊಂಡ ಚಿತ್ರವನ್ನು ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿದ್ದಾರೆ.

ಇದು ಲವ್ ಮಾಕ್ಟೇಲ್  ಸರಣಿಯ ಮೂರನೇ ಮತ್ತು ಅಂತಿಮ ಕಂತಿನ ಚಿತ್ರವಾಗಿದೆ. ಈಗಾಗಲೇ ಲವ್ ಮಾಕ್ಟೇಲ್ 1 ಮತ್ತು 2 ಯಶಸ್ಸಿನ ನಂತರ ಇದೀಗ ಬಹುನಿರೀಕ್ಷೆಯ ಮೂರನೇ ಆವೃತ್ತಿ ಬಿಡುಗಡೆಯಾಗಿದೆ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ಜೊತೆ ನಮ್ಮ ಮಲೆನಾಡಿನ ಪ್ರತಿಭೆ ಮೂಡಿಗೆರೆ ನಿಯಾರ ದೀಪಕ್ (ವೈಶಾಲಿ ದೀಪಕ್ ಕಣಚೂರು) ಅವರು ಅಭಿನಯಿಸಿರುವುದು ವಿಶೇಷವಾಗಿದೆ. ನಕುಲ್ ಆಭ್ಯಂಕರ್ ಸಂಗೀತ ಸಂಯೋಜಿಸಿದ್ದಾರೆ, ಛಾಯಾಗ್ರಹಣ ಮತ್ತು ಸಂಕಲನವನ್ನು ಶ್ರೀ ಕ್ರೇಜಿಮೈಂಡ್ಜ್ ನಿರ್ವಹಿಸಿದ್ದಾರೆ. ಈ ಚಿತ್ರ  ಮಾರ್ಚ್ 19 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

ಲವ್ ಮಾಕ್‌ಟೇಲ್ 2 ರ ಘಟನೆಗಳ ಹಲವಾರು ವರ್ಷಗಳ ನಂತರ, ಲವ್ ಮಾಕ್‌ಟೇಲ್ 3   ಚಿತ್ರದಲ್ಲಿ ಆದಿ ಪಾತ್ರವನ್ನು ಅನುಸರಿಸುತ್ತದೆ, ಅವನು ಹಿಂದಿನ ಚಿತ್ರದ ಕೊನೆಯಲ್ಲಿ ದತ್ತು ಪಡೆದ ಹುಡುಗಿ ನಿಧಿಗೆ ಈಗ ಒಂಟಿ ತಂದೆಯಾಗಿದ್ದಾನೆ. ಅವರ ಜೀವನವು ಸರಳ ದಿನಚರಿಗಳು,  ಕಥೆಗಳು, ಶಾಲಾ ಘಟನಾವಳಿಗಳ ಸುತ್ತ ನಿರ್ಮಿಸಲಾಗಿದೆ.

ಚಿತ್ರದ ಕಥೆಯು ತೆರೆದುಕೊಳ್ಳುತ್ತಿದ್ದಂತೆ, ವಯಸ್ಸಾದ ಮಹಿಳೆ ಡಾ. ಶಾಂತಾ ನಿಧಿ ತನ್ನ ಜೈವಿಕ ಮೊಮ್ಮಗಳು ಎಂದು ಪ್ರತಿಪಾದಿಸಿದಾಗ ಅನಿರೀಕ್ಷಿತ ಹೇಳಿಕೆ ಹೊರಹೊಮ್ಮುತ್ತದೆ. ಇದು ಭಾವನಾತ್ಮಕವಾಗಿ ತೀವ್ರವಾದ ಪಾಲನೆ ಹೋರಾಟವನ್ನು ಹುಟ್ಟುಹಾಕುತ್ತದೆ, ಆದಿ ತಾನು ಆಳವಾಗಿ ಪ್ರೀತಿಸುವ ಮಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಾಗ ತನ್ನ ಹಿಂದಿನ ಬಗೆಹರಿಯದ ಭಾಗಗಳನ್ನು ಎದುರಿಸಲು ಒತ್ತಾಯಿಸುತ್ತದೆ. ಕಾನೂನು ಮತ್ತು ಭಾವನಾತ್ಮಕ ಸವಾಲುಗಳು ಅನುಸರಿಸುತ್ತವೆ, ಆದಿಯ ಮಾನಸಿಕ ಸ್ಥೈರ್ಯದ ಮಿತಿಗಳನ್ನು ಮತ್ತು ಅವರ ತಂದೆ-ಮಗಳ ಬಾಂಧವ್ಯದ ಬಲವನ್ನು ಪರೀಕ್ಷಿಸುತ್ತವೆ.  ಈ ಚಿತ್ರವೂ ಭಾವನಾತ್ಮಕ ಸನ್ನಿವೇಶಗಳ ಹೂರಣವಾಗಿದ್ದು, ನೋಡುಗರ ಹೃದಯವನ್ನು ಆರ್ಧವಾಗಿಸುತ್ತದೆ.

ದುರಂಧರ್-2 ಸಿನಿಮಾ ಬಿಡುಗಡೆಯ ಹಿನ್ನಲೆಯಲ್ಲಿ ಅನೇಕ ಪ್ರಸಿದ್ಧ ನಟ ನಿರ್ದೇಶಕರ ಸಿನಿಮಾಗಳ ಬಿಡುಗಡೆಯನ್ನೇ ಮುಂದೂಡಿದ್ದಾರೆ. ಆದರೆ ಲವ್ ಮಾಕ್ಟೈಲ್ ತಂಡ ಮಾತ್ರ ದುರಂಧರ್-2 ಸಿನಿಮಾದ ಅಬ್ಬರದ ನಡುವೆಯೂ ಸಿನಿಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಸಿನಿಮಾದಲ್ಲಿ ಮುಖ್ಯಪಾತ್ರವೊಂದರಲ್ಲಿ ನಮ್ಮ ಮೂಡಿಗೆರೆ ತಾಲ್ಲೂಕಿನ ಕಣಚೂರು ಗ್ರಾಮದ ಕಣಚೂರು ಎಸ್ಟೇಟ್ ಮಾಲೀಕರಾದ ದೀಪಕ್ ಅವರ ಪುತ್ರಿ(ಕಣಚೂರು ಮೊಗಣ್ಣಗೌಡರ ಮೊಮ್ಮಗಳು) ವೈಶಾಲಿ (ನಿಯಾರ ದೀಪಕ್) ನಟಿಸಿರುವುದು ವಿಶೇಷ. ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿ ತನ್ನ ಮನೋಜ್ಞ ಅಭಿನಯದಿಂದ ಗಮನಸೆಳೆದಿರುವ ನಿಯಾರ ದೀಪಕ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ನಟನೆ ಮತ್ತು ಫ್ಯಾಷನ್ ವಿಷಯಗಳನ್ನು ಹಂಚಿಕೊಳ್ಳುತ್ತಾರೆ.

ಚಿತ್ರವನ್ನು ಚಿತ್ರಮಂದಿರಕ್ಕೆ ಹೋಗಿ ನೋಡುವ ಮೂಲಕ ನಮ್ಮ ಅಪ್ಪಟ ಕನ್ನಡ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ