ಆಲ್ದೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದ ನವ ನಿರ್ಮಾಣ ಕಾಮಗಾರಿಗೆ ಸೋಮವಾರ ವಿದ್ಯಾ ಕಾಫಿ ಮತ್ತು ಹರ್ಬ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ ಶ್ಯಾಮ್ ಪ್ರಸಾದ್, ಅವರ ಧರ್ಮಪತ್ನಿ ವೀಣಾ ಶ್ಯಾಮ್ ಪ್ರಸಾದ್, ಶಾಸಕಿ ನಯನ ಮೋಟಮ್ಮ, ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಈಚೆಗೆ ಅಮೆರಿಕಾದ ಪ್ಲೋರಿಡಾದಲ್ಲಿ ವಿದ್ಯಾ ಕಾಫಿ ಸಂಸ್ಥೆಯ ಶಾಖೆಯನ್ನು ತೆರೆದಿದ್ದು, ಅಲ್ಲಿನ ಸ್ಥಳೀಯ ಜನಪ್ರತಿನಿಧಿ ಆಗಮಿಸಿ ಸಂಸ್ಥೆಯ ಉತ್ಪಾದನೆ ಕುರಿತು ವೀಕ್ಷಣೆ ಮಾಡಿ ತಾವುಗಳು ತಮ್ಮ ಸಂಸ್ಥೆಯ ಕುರಿತು ಅಧ್ಯಕ್ಷ ಟ್ರಂಪ್ ರವರಿಗೆ ವಿಡಿಯೋ ಬೈಟ್ ನೀಡಬೇಕೆಂದು ಕೇಳಿದರು ಅದಕ್ಕೆ ನಾವು ಭಾರತದಿಂದ ಉತ್ಪಾದಿಸಿ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದು ವಾಟ್ ವಿ ಕಾಂಟ್ರಿಬ್ಯೂಟ್ ಟು ಅಮೆರಿಕ ಎಂಬ ಶೀರ್ಷಿಕೆ ಅಡಿಯಲ್ಲಿ ಅಮೆರಿಕದಲ್ಲಿಯೇ ಕಂಪನಿ ಪ್ರಾರಂಭಿಸಿದ್ದೇವೆ ಆ ಮೂಲಕ ಮೇಡ್ ಫಾರ್ ಅಮೆರಿಕನ್ಸ್ ಮೇಡ್ ಬೈ ಇಂಡಿಯನ್ಸ್ ಎಂದು ತಿಳಿಸಿ ನಮ್ಮ ಸಂಸ್ಥೆಯ ಮೂಲಕ ನೂರಾರು ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿ ಅಮೆರಿಕ ಜನತೆಗೆ ಒದಗಿಸುವ ಗುರಿ ಹೊಂದಿದ್ದೇನೆ ಎಂದು ತಿಳಿಸಿದೆ ಎಂದರು.
ಚಿಕ್ಕಮಗಳೂರಿನಲ್ಲಿ ಸಾಕಷ್ಟು ಮಂದಿ ಬಡ ಕೂಲಿ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರು ಇದ್ದು, ಅವರಿಗೆ ಯಾವುದೇ ಖಾಯಿಲೆಗೆ ಪ್ರಾಥಮಿಕ ಹಂತದಲ್ಲಿಯೇ ಗುಣಮಟ್ಟದ ಚಿಕಿತ್ಸೆ ಒದಗಿಸಬೇಕೆಂಬುದೇ ನಮ್ಮ ಸಂಸ್ಥೆಯ ಮಹತ್ತರ ಗುರಿ ಹಾಗೂ ಎಂಟು ತಿಂಗಳೊಳಗೆ ಆಸ್ಪತ್ರೆಯ ಕಟ್ಟಡ ನಿರ್ಮಾಣ ಮಾಡುವ ಉದ್ದೇಶ ಇಟ್ಟುಕೊಂಡಿದ್ದು, ಮುಂದಿನ ಸಂಕ್ರಾಂತಿಗೆ ಆದರೂ ಲೋಕಾರ್ಪಣೆ ಮಾಡುವ ಚಿಂತನೆ ನಮ್ಮದು, ನಿರ್ಮಾಣದ ಬಳಿಕ ಆಸ್ಪತ್ರೆಯನ್ನು ನಿರ್ವಹಣೆ ಕೂಡ ಸಂಸ್ಥೆ ವತಿಯಿಂದ ಮಾಡಲಾಗುವುದು ಎರಡು ಹೊತ್ತಿನ ಉಚಿತ ದಾಸೋಹ ರೋಗಿಗಳಿಗೆ ಒದಗಿಸಲಾಗುವುದುಮತ್ತು ಇಲ್ಲಿಯ ಜನತೆ ಸಾಕಷ್ಟು ಬೆಂಬಲವನ್ನು ಆಸ್ಪತ್ರೆ ನಿರ್ಮಾಣಕ್ಕೆ ನೀಡಿದ್ದು,
ಈ ವಿಷಯವನ್ನು ವರದಿಗಾರರಾದ ಜೋಸೆಫ್ ರವರು ನಮ್ಮ ಬಳಿ ಮನವಿ ಮಾಡಿದಾಗ ಆ ಕೂಡಲೇ ಆಸ್ಪತ್ರೆ ನಿರ್ಮಾಣಕ್ಕೆ ನಾನು ಒಪ್ಪಿಕೊಂಡೆ. ಊರಿಗೆ ಭೇಟಿ ನೀಡಿದಾಗಲೇ ತಿಳಿದದ್ದು ಆಸ್ಪತ್ರೆಯ ಅವಶ್ಯಕತೆ ಇಲ್ಲಿ ಎಷ್ಟಿದೆ ಎಂಬುದು ಅತ್ಯುತ್ತಮ ಆಸ್ಪತ್ರೆಯನ್ನು ನಿರ್ಮಿಸಿ ಆಲ್ದೂರನ್ನು ಮಾದರಿಯಾಗಿ ರೂಪಿಸೋಣ ಎಂದರು.
ವಿದ್ಯಾ ಕಾಫಿ ಸಂಸ್ಥೆಯ ಚಿಕ್ಕಮಗಳೂರು ಬೇಲೂರು ಮುಂತಾದ ಕಡೆಗಳಲ್ಲಿ ಪ್ರಮುಖ ಶಾಖೆಗಳಿದ್ದು, ವತಿಯಿಂದ ಇನ್ಸ್ಟಂಟ್ ಕಾಫಿ ಮತ್ತು ಗಿಡಮೂಲಿಕೆ ಯುಕ್ತ ಉತ್ಪನ್ನ ಕಾಫಿ ಕುರಿತು ವಿವಿಧ ಬಗೆಯಲ್ಲಿ ಸಂಶೋಧನೆ ನಡೆಸಿ ಇನ್ನಷ್ಟು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಿ ಅಮೇರಿಕಾ, ಗಲ್ಫ್ ದೇಶಗಳು, ಯೂರೋಪ್ ದೇಶಗಳಿಗೂ ರಫ್ತು ಮಾಡುತ್ತಿದ್ದೇವೆ ಎಂದು ಸಂಸ್ಥೆ ಕುರಿತು ಮಾಹಿತಿ ಹಂಚಿಕೊಂಡರು.
ಶಾಸಕಿ ನಯನ ಮೋಟಮ್ಮ, ಆಸ್ಪತ್ರೆ ಬೇಡಿಕೆಯನ್ನು ಕೆ ಶ್ಯಾಮ್ ಪ್ರಸಾದ್ ರವರ ಬಳಿ ಮನವಿ ಮಾಡಿ ಸಾಕಾರಗೊಳಿಸಲು ಕಾರಣರಾದ ಪತ್ರಕರ್ತ ಜೋಸೆಫ್, ಮತ್ತು ಸಂಸ್ಥೆಯ ನಿರ್ವಹಣ ಮುಖ್ಯಸ್ಥ ಹಾಗೂ ಗ್ರಾಮಸ್ಥರಾದ ಭಾನುಪ್ರಕಾಶ್ ರವರಿಗೆ ಅಭಿನಂದಿಸಿದರು. ಆಸ್ಪತ್ರೆ ನಿರ್ಮಾಣಕ್ಕೆ ಸಹಕರಿಸಿದಂತಹ ವಿದ್ಯಾ ಕಾಫಿ ವ್ಯವಸ್ಥಾಪಕ ನಿರ್ದೇಶಕರಾದ ಕೆ ಶ್ಯಾಮ್ ಪ್ರಸಾದ್ ರವರಿಗೆ, ಕ್ಷೇತ್ರದ ಮತ್ತು ಆಲ್ದೂರು ಜನತೆ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿಟಿ ರವಿ, ಮಾತನಾಡಿ ತಾವು ಕೂಡ ಇದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನಿಸಿದ್ದು ಭಾವನಾತ್ಮಕ ಸಂಬಂಧ ಇದೆ ಎಂದು ಅಭಿಪ್ರಾಯ ಹಂಚಿಕೊಂಡರು.
ಕೆ ಶ್ಯಾಮ್ ಪ್ರಸಾದ್ ರವರಂತಹ ಸಹೃದಯಿಗಳು ಸಮಾಜದಲ್ಲಿ ಇರುವುದರಿಂದ ನಿಸ್ವಾರ್ಥಮಯವಾಗಿ ಚಿಂತಿಸಿ ಸಮಾಜಕ್ಕಾಗಿ ಸಮಾಜಮುಖಿ ಕೊಡುಗೆಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಅಶ್ವತ್ ಬಾಬು ಆಸ್ಪತ್ರೆಯಲ್ಲಿರುವಂತಹ ಕಟ್ಟಡ ವಿನ್ಯಾಸ ಮತ್ತು ಮುಂಬರುವ ದಿನಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಈಗಾಗಲೇ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿರುವ ಮಾಹಿತಿಯನ್ನು ಹಂಚಿಕೊಂಡರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಸೀಮಾ, ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಯ ಆಡಳಿತ ಮುಖ್ಯಸ್ಥರಾದ ಬಿಬಿ ರೇಣುಕಾರ್ಯ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೆ ಶ್ಯಾಮ್ ಪ್ರಸಾದ್ ರವರನ್ನು ಶ್ರೀ ಶನೇಶ್ವರ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿ, ಸವಿತಾ ಸಮಾಜ ಸೇವಾ ಸಂಘ, ಹಂಝ ತುಲ್ ಖರ್ರಾರ್ ಮಸೀದಿ, ಸಮಿತಿ, ಸಿಟಿ ರವಿ ರವರು ಸನ್ಮಾನಿಸಿದರು. ಶ್ಯಾಮ್ ಪ್ರಸಾದ್ ರವರ ಪುತ್ರಿಯರಾದ ವಿದ್ಯಾ ಹಾಗೂ ವಿನಯ ಗುತ್ತಿಗೆದಾರ ಪಾಂಡುರಂಗ ಕಾರ್ಯಕ್ರಮದಲ್ಲಿ ಹಾಜರಿದ್ದರು. ಊರಿನ ಸಮುದಾಯ ಸಂಘಟನೆಗಳ ಪದಾಧಿಕಾರಿಗಳು ಗ್ರಾಮಸ್ಥರುಗಳು ಭಾಗವಹಿಸಿದ್ದರು




