suddi-7

 

 

ಚಿಕ್ಕಮಗಳೂರು ಜಿಲ್ಲೆಯ ಮೂಗುತಿಹಳ್ಳಿಯಿಂದ ಮೂಡಿಗೆರೆ ರಾಷ್ಟ್ರೀಯ  ಹೆದ್ದಾರಿ 173 -26 ಕಿಲೋಮೀಟರ್ ಭೂಸ್ವಾದಿನ ಪ್ರಕ್ರಿಯೆ, ವಿಳಂಬವಾದ ಹಿನ್ನೆಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬೆಂಗಳೂರಿನ  ಪರಿಸರ ಅರಣ್ಯ ಮತ್ತು ಹವಾಮಾನ ಬಲಾವಣೆ ಸಚಿವಾಲಯ ಇಲಾಖೆಯ ಅರಣ್ಯ ಉಪ ಮಹಾನಿರ್ದೇಶಕರ ಕಚೇರಿಗೆ ಖುದ್ದು ಭೇಟಿ ನೀಡಿ ಹಿರಿಯ ಅಧಿಕಾರಿ ಐ.ಎಫ್.ಎಸ್ ಸೆಂಥಿಲ್ ಕುಮಾರ್‍ ಜೊತೆ ಚರ್ಚಿಸಿದರು.

ಈ ಹಿನ್ನಲೆಯಲ್ಲಿ ಬಹಳ ದಿನಗಳಿಂದ ನೆನೆಗುದಿಗೆಯಲ್ಲಿದ್ದ ಭೂಸ್ವಾದೀನ ಪ್ರಕರಣಕ್ಕೆ ಅರಣ್ಯ ಇಲಾಖೆ ಮೂರೇ ದಿನಗಳಲ್ಲಿ ತುರ್ತು ಅನುಮೋದನೆ ನೀಡಿದೆ.

ಅನುಮೋದಿತ ರಾಷ್ಟ್ರೀಯ ಹೆದ್ದಾರಿ ಅಂಚಿನ ಮರಗಳ ಮೌಲ್ಯ ನಿಗಧಿಕರಿಸಿ, ತೆರುವುಗೊಳಿಸಿ, ಎನ್‍ಎಚ್-173 ಮೂಡಿಗೆರೆ-ಮೂಗುತಿಹಳ್ಳಿ ಹೆದ್ದಾರಿ ಕಾಮಗಾರಿ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದೆಂದು ಸಂಸದ ಕೋಟ ಕಚೇರಿಯ ಪ್ರಕಟಣೆ ತಿಳಿಸಿದೆ.

ಅರಣ್ಯಾಧಿಕಾರಿ ಕಚೇರಿ ಭೇಟಿ ಸಂದರ್ಭ ಸಂಸದರೊಂದಿಗೆ ಎನ್.ಹೆಚ್ ಪ್ರಾಧಿಕಾರದ ಹಾಸನ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ವಿಘ್ನೇಶ್, ಸಹಾಯಕ ಕಾರ್ಯ ಪಾಲಕ ಕಾಂಬ್ಳೆ, ಶಶಿಕುಮಾರ್, ಸಂಸದರ ಆಪ್ತ ಸಹಾಯಕ ಯತೀಶ್ ಬೆಟ್ಟಗೆರೆ ಇದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ