suddi-8

 

 

ಆಟೋ ಚಾಲಕರಿಗೆ ಒಂದೇ ದರದಲ್ಲಿ ಎಲ್.ಪಿ.ಜಿ. ಗ್ಯಾಸ್ ದರವನ್ನು ನಿಗಧಿಪಡಿಸಬೇಕು ಎಂದು ಒತ್ತಾಯಿಸಿ ಶನಿವಾರ ಕನ್ನಡಸೇನೆ ಆಟೋ ಘಟಕದ ವತಿಯಿಂದ ಚಿಕ್ಕಮಗಳೂರು ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಅವರಿಗೆ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ನಗರದಲ್ಲಿ ಆಟೋ ಚಾಲಕರಿಗೆ ಗ್ಯಾಸ್ ಏಜೆನ್ಸಿ ಒಂದೊಂದು ಬಂಕ್‍ನಲ್ಲಿ ಒಂದೊಂದು ರೀತಿಯ ದರವನ್ನು ನೀಡುತ್ತಿದೆ. 120, 136 ಹಾ ಗೂ 90 ರೂ.ಗಳ ದರದಲ್ಲಿ ಎಲ್‍ಪಿಜಿ ಗ್ಯಾಸ್ ನೀಡುತ್ತಿರುವ ಪರಿಣಾಮ ಆಟೋ ಚಾಲಕರಿಗೆ ತೀವ್ರ ಸಮಸ್ಯೆ ಯಾಗುತ್ತಿದೆ ಎಂದರು.

ಮೊದಲೇ ಆಟೋ ಚಾಲಕರಿಗೆ ಮದ್ಯಪ್ರಾಚ ಯುದ್ಧದಿಂದ ದುಡಿಮೆ ಇಲ್ಲದೇ ಪರಿತಪಿಸುವಂತಾಗಿದೆ. ಈ ನಡುವೆ ಗ್ಯಾಸ್ ಏಜೆನ್ಸಿಗಳು ಒಂದೊಂದು ರೀತಿ ದರ ನಿಗಧಿಪಡಿಸಿದರೆ ಬಡ ಆಟೋ ಚಾಲಕರು ಬದು ಕುವುದು ಹೇಗೆ ಎಂದು ಪ್ರಶ್ನಿಸಿದ ಅವರು ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು ಎಂದರು.

ಗ್ಯಾಸ್ ಏಜೆನ್ಸಿಗಳು ಆಟೋ ಚಾಲಕರಿಗೆ ಸರಿಯಾದ ರೀತಿಯಲ್ಲಿ ದರ ನೀಡದೇ ಬ್ಲಾಕ್‍ನಲ್ಲಿ ಅವರವರ ದರ ನಿಗಧಿಪಡಿಸಿ ಆಟೋ ಚಾಲಕರು ಮತ್ತು ಮಾಲೀಕರಿಗೆ ತೊಂದರೆ ನೀಡುತ್ತಿದ್ದಾರೆ. ಇದರಿಂದ ಆಟೋ ಚಾಲಕರಿಗೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಜಿಲ್ಲಾಡಳಿತ ಸ್ಥಳ ಪರಿಶೀಲನೆ ಮಾಡಿ ಒಂದೇ ದರದ ಎಲ್‍ಪಿಜಿ ಗ್ಯಾಸ್ ಅನ್ನು ವಿತರಿಸಬೇಕು ಎಂದು ಹೇಳಿದರು.

ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ ಗ್ಯಾಸ್ ಏಜೆನ್ಸಿಗಳು ದಿನಕ್ಕೊಂದು ದರ ನಿಗಧಿಪ ಡಿಸಿದರೆ ಆಟೋ ಚಾಲಕರು ಬದುಕುವುದು ಅಸಾಧ್ಯ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ವಹಿಸಬೇಕು. ಇಲ್ಲವಾ ದಲ್ಲಿ ಪ್ರತಿ ಚಾಲಕರಿಗೆ ಮಾಸಿಕ 15 ಸಾವಿರ ಮಾಶಾಸನ ಒದಗಿಸಿಕೊಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕನ್ನಡಸೇನೆ ಮುಖಂಡುರಗಳಾದ ಶಂಕರೇಗೌಡ, ನವೀನ್‍ಕುಮಾರ್, ವಿಶ್ವನಾಥ್, ಪಾಲಾಕ್ಷಿ, ಹುಣಸೇಮಕ್ಕಿ ಲಕ್ಷ್ಮಣ್, ಷರೀಫ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ