suddi-6

 

 

ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಕಾರುಹರಿದು ಪ್ರಾಣ ಕಳೆ ದುಕೊಂಡ ಕುಟುಂಬ ಹಾಗೂ ತೀವ್ರ ಗಾಯಗೊಂಡಿರುವ ವ್ಯಕ್ತಿಗಳಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇ ಕು ಎಂದು ಬಿಳೇಕಲ್ಲು ಗ್ರಾಮಸ್ಥರು ಬಿಎಸ್ಪಿ ನೇತೃತ್ವದಲ್ಲಿ ಜಿಲ್ಲಾಡಳಿತ ಮೂಲಕ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದರು.

ಚಿಕ್ಕಮಗಳೂರು ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಬಿಎಸ್ಪಿ ರಾಜ್ಯ ಪ್ರಧಾ ನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಅತಿವೇಗವಾಗಿ ಜನರ ಗುಂಪಿನ ಮೇಲೆ ಕಾರು ಹಾಯಿಸಿರುವುದು ದು ರಾದೃಷ್ಟಕರ ಸಂಗತಿ. ಈ ಅಪಘಾತದಲ್ಲಿ ಬಡವರೇ ಹೆಚ್ಚು ನೋವು ಅನುಭವಿಸುತ್ತಿದ್ದು ಇವರಿಗೆ ಪರಿಹಾರ ಸರ್ಕಾರ ಕಲ್ಪಿಸಿಕೊಡಬೇಕು ಎಂದರು.

ಅಪಘಾತ ಸ್ಥಳದಲ್ಲಿ ಏಳು ವರ್ಷದ ಮಗು ಮೃತಪಟ್ಟಿದೆ. ಏಳು ಮಂದಿಗೆ ಗಂಭೀರವಾದ ಗಾಯಗ ಳಾಗಿವೆ. ಜಿಲ್ಲಾಸ್ಪತ್ರೆ ಚಿಕಿತ್ಸೆ ಪಡೆದು, ಇದೀಗ ಹಾಸನ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡ ಏಳು ಮಂ ದಿಯ ಪೈಕಿ ಕೆಲವರಿಗೆ ಕಿಡ್ನಿಗೆ ಪೆಟ್ಟುಬಿದ್ದಿದೆ. ಬೆನ್ನು ಮೂಳೆ ಮುರಿದಿದೆ. ಬಹುತೇಕರು ಪರಿಶಿಷ್ಟ ಜಾತಿಗೆ ಸೇರಿದ ಕೂಲಿ ಕಾರ್ಮಿಕರಾಗಿದ್ದಾರೆ ಎಂದು ಹೇಳಿದರು.

ಪ್ರಸ್ತುತ ಆ ಬಡ ಕುಟುಂಬಗಳು ಚಿಕಿತ್ಸೆ ವೆಚ್ಚ ಭರಿಸಲು ಕಷ್ಟಸಾಧ್ಯವಾಗಿದೆ. ಹೀಗಾಗಿ ಸರ್ಕಾರ ಚಿಕಿತ್ಸೆ ಯ ಸಂಪೂರ್ಣ ವೆಚ್ಚವನ್ನು ಭರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಘಟನೆಯಿಂದ ಕೆಲವರಿಗೆ ಶಾಶ್ವತ ವಾದ ಅಂಗವಿಕಲತೆ ಕಂಡುಬರುತ್ತಿರುವುದರಿಂದ ಇವರಿಗೆ ಸೂಕ್ತ ಪರಿಹಾರ ಘೋಷಿಸಬೇಕು. ಮೃತಪಟ್ಟ ಮಗುವಿನ ಪಾಲಕರಿಗೆ ಕನಿಷ್ಟ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ಉಡುಪಿ-ಚಿಕ್ಕಮಗಳೂರು ಲೋಕಸ ಭಾ ಸಂಯೋಜಕ ಕೆ.ಆರ್.ಗಂಗಾಧರ್, ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ್, ಉಪಾಧ್ಯಕ್ಷೆ ಕೆ.ಎಸ್.ಮಂಜುಳಾ, ಅಸೆಂಬ್ಲಿ ಉಪಾಧ್ಯಕ್ಷ ಸಿದ್ದಯ್ಯ, ಪ್ರಧಾನ ಕಾರ್ಯದರ್ಶಿ ಆರ್.ವಸಂತ್, ನಗರಾಧ್ಯಕ್ಷ ವಿಜಯ್‍ಕುಮಾರ್, ಬಿಳೇಕಲ್ಲು ಗ್ರಾಮಸ್ಥರಾದ ಚೇತನ್, ಯೋಗೀಶ್, ಶರತ್, ಹೇಮಂತ್‍ಕುಮಾರ್, ಮಿಥುನ್, ಚಂದನ್ ಮತ್ತಿ ತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ