ಮೂಡಿಗೆರೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಹಾಲೂರು ಶಾಲೆಯ ಮೃತ ಶಿಕ್ಷಕರಾದ ಹೆಚ್.ಜಿ. ರಾಜಪ್ಪ ಅವರ ಕುಟುಂಬಕ್ಕೆ 1 ಕೋಟಿ ವಿಮಾ ಪರಿಹಾರ ಒದಗಿಸಿದ ಹಿನ್ನೆಲೆಯಲ್ಲಿ ಕೆನರಾ ಬ್ಯಾಂಕ್ ಮೂಡಿಗೆರೆ ಶಾಖೆಗೆ ಭೇಟಿ ನೀಡಿ, ಶಾಖಾ ವ್ಯವಸ್ಥಾಪಕ ಜಗನ್ನಾಥ್ ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಿದರು.
ರಾಜಪ್ಪ ಅವರು ಆಕಸ್ಮಿಕ ಅಪಘಾತದಲ್ಲಿ ನಿಧನ ಹೊಂದಿದ ಬಳಿಕ, ಸಮಗ್ರ ವೇತನ ಖಾತೆ ಯೋಜನೆಯಡಿ ಈ ವಿಮಾ ಪರಿಹಾರವನ್ನು ಬ್ಯಾಂಕ್ ವತಿಯಿಂದ ವಿತರಿಸಲಾಗಿದೆ.
ಸಂಘದ ನಿಕಟ ಪೂರ್ವ ಅಧ್ಯಕ್ಷ ನವೀನ್ ಬಿ.ಆರ್ ಮಾತನಾಡಿ, ?ಈ ಘಟನೆ ಸಮಗ್ರ ವೇತನ ಪ್ಯಾಕೇಜ್ ಖಾತೆಗಳ ಮಹತ್ವವನ್ನು ತೋರಿಸಿದೆ. ಎಲ್ಲಾ ಸರ್ಕಾರಿ ನೌಕರರು ತಮ್ಮ ಖಾತೆಗಳನ್ನು ಈ ಯೋಜನೆಗೆ ಪರಿವರ್ತಿಸಿಕೊಳ್ಳಬೇಕು,? ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೃತ ಶಿಕ್ಷಕರನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು ಹಾಗೂ ಅವರ ಕುಟುಂಬಕ್ಕೆ ಸಂತಾಪ ಸೂಚಿಸಲಾಯಿತು.ಈ ಕಾರ್ಯಕ್ಕೆ ಸಹಕರಿಸಿದ ಕರ್ನಾಟಕ ಸರ್ಕಾರ, ರಾಜ್ಯ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘ ಮತ್ತು ಕೆನರಾ ಬ್ಯಾಂಕ್‍ಗೆ ಧನ್ಯವಾದಗಳನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ರಾಮಯ್ಯ, ನವೀನ್ ಬಿ.ಆರ್, ಮಲ್ಲಪ್ಪ, ದಿನೇಶ್, ಅಮೀನ್, ಮಂಜುನಾಥ, ನೂರ್ ಜಾನ್, ಪ್ರತಿಮಾ, ಆನಂದ್ ಕುಮಾರ್ ಸೇರಿದಂತೆ ಹಲವರು, ಶಿಕ್ಷಕರಾದ ಮಂಜಪ್ಪ ಟಿ., ಅನಿಲ್, ಕುಮಾರ್, ರುದ್ರಪ್ಪ ಹಾಗೂ ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.



