IMG-20260418-WA0030_copy_1078x809

 

 

ಕಾಫಿನಾಡಲ್ಲಿ ಕಾಡುಕೋಣ ದಾಳಿಗೆ ಯುವಕ ಬಲಿ ಆಗಿರುವ ಘಟನೆ ನಡೆದಿದೆ.

ಚೇತನ್ (30) ಮೃತ‌ ದುರ್ದೈವಿ

ಕಳಸ ತಾಲೂಕಿನ ಮರಸಣಿಗೆ ಮೈದಾಡಿಯ ಯಮಗೊಂಡ ಎಸ್ಟೇಟ್ ನಲ್ಲಿ ದುರ್ಘಟನೆ ನಡೆದಿದೆ

ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಕೋಣ ದಾಳಿ ಮಾಡಿದ್ದು ತೀವ್ರವಾಗಿ ಗಾಯಗೊಂಡಿದ್ದ ಚೇತನ್ ಅವರನ್ನು ಕೂಡಲೇ ಕಳಸ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಯುವಕ ಸಾವನ್ನಪ್ಪಿದ್ದಾರೆ, ಆಸ್ಪತ್ರೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಚೇತನ ಅವರ ಹೊಟ್ಟೆ ಭಾಗಕ್ಕೆ ಕಾಡುಕೋಣ ಕೊಂಬಿನಿಂದ ತಿವಿದಿದ್ದು ತೀವ್ರವಾಗಿ ಗಾಯವಾಗಿದ್ದು ಅಪಾರ ರಕ್ತಸ್ರಾವ ಆಗಿ ಅವರು ಮೃತಪಟ್ಟಿದ್ದಾರೆ.

ಕಳಸದಲ್ಲಿ ಆಗಾಗ್ಗೆ ನಿರಂತರವಾಗಿರೋ ಕಾಡುಕೋಣ ದಾಳಿ ಪ್ರಕರಣಗಳು.

ಕಾಡುಕೋಣ ದಾಳಿಗೆ ಶಾಶ್ವತವಾಗಿ ಬ್ರೇಕ್ ಹಾಕುವಂತೆ  ಆಗ್ರಹಿಸಿದ್ದಾರೆ

ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಿಸಲಾಗಿದೆ.

ಮೃತ ಚೇತನ್ ಕಳಸ ಹಳುವಳ್ಳಿ ಸಮೀಪದ ಕವನಳ್ಳ ಗ್ರಾಮದವರು ಎಂದು ತಿಳಿದುಬಂದಿದೆ. ಚೇತನ್ ಅವರಿಗೆ ವಿವಾಹವಾಗಿದ್ದು ಚಿಕ್ಕ ಮಗು ಇದ್ದು ಅವರ ಪತ್ನಿ ಈಗ ತುಂಬು ಗರ್ಭಿಣಿ ಎಂದು ತಿಳಿದುಬಂದಿದೆ.

ವರದಿ -ಸುದರ್ಶನ್ ಕಳಸ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ