suddi6_copy_930x582

 

 

ಶೋಷಿತ ಹಾಗೂ ದೌರ್ಜನ್ಯಕ್ಕೆ ಒಳಗಾಗಿದ್ಧ ಜನಾಂಗವನ್ನು ಹನ್ನೇರಡನೇ ಶತಮಾನದಲ್ಲೇ ಸಮಾನತೆ ದಾರಿತೋರಿದ ಅಪ್ರತಿಮ ಸಾಧಕ ಬಸವಣ್ಣ. ಈ ಸಾಧಕರ ಆದರ್ಶ, ಸದ್ವಿಚಾರಗಳು ಆಧುನಿಕ ಕಾಲಕ್ಕೂ ಪ್ರಸ್ತುತ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಹೇಳಿದರು.

ಚಿಕ್ಕಮಗಳೂರು ನಗರದ ಜಿಲ್ಲಾ ಬಹುಜನ ಸಮಾಜ ಪಾರ್ಟಿ ಕಚೇರಿಯಲ್ಲಿ ಸೋಮವಾರ ಸಾಂಸ್ಕೃತಿಕ ಚಿಂತಕ, ಜಗ ಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನುವಾದ, ಲಿಂಗತಾರತಮ್ಯ ಹಾಗೂ ಅಸಮಾನತೆ ವಿರುದ್ಧ ಸರ್ವರು ಸಮಾನರಾಗಿ ಬದುಕಬೇಕೆಂ ಬ ವಿಚಾರದಡಿ ದೊಡ್ಡ ಕ್ರಾಂತಿ ಮೂಡಿಸಿದವರು ಬಸವಣ್ಣ. ಇಂದಿನ ದೆಹಲಿಯ ಸಂಸತ್ ಭವನವನ್ನು, ಅಂದಿನ ಕಾಲದಲ್ಲೇ ಅನುಭವ ಮಂಪಟದಲ್ಲೇ ರಚಿಸಿ ಸರ್ವರಿಗೂ ಮುಕ್ತ ಅವಕಾಶ ಕಲ್ಪಿಸಿದ ಶ್ರೇಷ್ಟರು ಎಂ ದು ಬಣ್ಣಿಸಿದರು.

ಸಮಾಜಕ್ಕೆ ವಿಷಬೀಜದಂತೆ ಅಂಟಿಕೊಂಡಿದ್ದ  ಮೌಡ್ಯ, ಅಸೃಶ್ಯತೆ, ಸ್ತಿಯರಿಗೆ ವಂಚಿತವಾಗಿದ್ಧ ಹಕ್ಕಿನ ವಿರುದ್ಧ ಚಳುವಳಿ ರೂಪಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲಬೇಕು. ಈ ಮಹಾತ್ಮರ ಸಿದ್ದಾಂತಗಳು ಯಥಾ ವತ್ತಾಗಿ ಅಂಭೇಡ್ಕರ್ ಸಂವಿಧಾನದಲ್ಲಿ ಅಡಕವಾಗಿಸಿದ್ದಾರೆ. ಆದರೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ರಾ ಜಕೀಯ ಲಾಭಕ್ಕಾಗಿ ಸಂವಿಧಾನದ ತಿರುಚಿವಂಥ ಕೆಲಸ ಮಾಡುತ್ತಿವೆ ಎಂದರು.

ಮುಂಬರುವ ದಿನಗಳಲ್ಲಿ ಅಂಬೇಡ್ಕರ್ ಕನಸನ್ನು ಬಿಎಸ್ಪಿ ಪಕ್ಷ ನನಸಾಗಿಸಲು ಪಣತೊಟ್ಟಿದೆ. ರಾಜ್ಯ ಹಾ ಗೂ ದೇಶದಲ್ಲಿ ಬಹುಜನ ಪಾರ್ಟಿ ಅಧಿಕಾರಕ್ಕೆ ಬಂದು ಬುದ್ಧ, ಬಸವಣ್ಣ, ಅಂಬೇಡ್ಕರ್ ವಿಚಾರದಡಿ ಸರ್ಕಾ ರ ರಚಿಸುವ ಮೂಲಕ ರಾಷ್ಟದಲ್ಲಿ ಎಲ್ಲರೂ ಒಂದೇ ಎಂಬ ಮನೋಭಾವನೆ ಭಿತ್ತುವ ಕೆಲಸ ಮಾಡಲಿದೆ ಎಂದು ಹೇಳಿದರು.

ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಟಿ.ಸುಧಾ ಮಾತನಾಡಿ ಬಸವಣ್ಣನವರು ಮೂಲತಃ ಬ್ರಾಹ್ಮಣ ಸಮು ದಾಯದಲ್ಲಿ ಜನಿಸಿದ್ದು, ಎಂಟನೇ ವಯಸ್ಸಿನಲ್ಲಿ ತಾರತಮ್ಯ ವಿರುದ್ಧ ಪ್ರಶ್ನಿಸಿದವರು. ಅಸೃಶ್ಯತೆ, ಜಾತಿ ತಾರತ ಮ್ಯ ವಿರುದ್ಧ ದೊಡ್ಡ ಹೋರಾಟ ನಡೆಸಿದ್ದರು. ದೇವರು ತನ್ನಲ್ಲಿಯೇ ನೆಲೆಸಿದ್ದು, ಬೇರೆಲ್ಲೂ ಹುಡುಕಾಡ ಬೇಡಿ ಎಂಬ ಮಹತ್ವದ ಸಂದೇಶ ರವಾನಿಸಿದ ಆದರ್ಶ ಪುರುಷ ಎಂದರು.

ಅಧ್ಯಕ್ಷತೆ ವಹಿಸಿ ಬಿಎಸ್ಪಿ ಜಿಲ್ಲಾಧ್ಯಕ್ಷ ಪರಮೇಶ್ವರ್ ಮಾತನಾಡಿ ಬಸವಣ್ಣ, ಅಂಬೇಡ್ಕರ್, ಜ್ಯೋತಿಬಾಪು ಲೆ ಸೇರಿದಂತೆ ಅನೇಕರು ಸಮಾಜ ಸುಧಾರಣೆ ಮತ್ತು ಸಮಸಮಾಜಕ್ಕೆ ಜೀವನ ಮುಡಿಪಿಟ್ಟವರು. ಬಸವಣ್ಣ ಎಲ್ಲರನ್ನು ಒಂ ದುಗೂಡಿಸುವ ಪ್ರಯತ್ನ ನಡೆಸಿದ್ದರು. ಆದರೆ ಲಿಂಗಾಧರಿತ ಕೆಲವರು ವರ್ಣ ವ್ಯವಸ್ಥೆಯಡಿ ಅದನ್ನೇ ಜಾತಿ ಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಎಸ್ಪಿ ಅಸ್ಸೆಂಬ್ಲಿ ಪ್ರಧಾನ ಕಾರ್ಯದರ್ಶಿ ಆರ್.ವಸಂತ್, ಜಿಲ್ಲಾ ಉಪಾಧ್ಯಕ್ಷೆ ಕೆ. ಎಸ್. ಮಂಜುಳಾ, ಖಜಾಂಚಿ ವಾಹಿದ್ ಜಾನ್, ಅಸ್ಸೆಂಬ್ಲಿ ಉಪಾಧ್ಯಕ್ಷರಾದ ಸಿದ್ದಯ್ಯ, ಹೊನ್ನಪ್ಪ, ಖಜಾಂಚಿ ಟಿ.ಎಚ್.ರತ್ನ, ಕಚೇರಿ ಕಾರ್ಯದರ್ಶಿ ಕಲಾವತಿ, ಬೇಲೂರು ಅಸೆಂಬ್ಲಿ ಅಧ್ಯಕ್ಷರು ರಂಗನಾಥ್, ಮುಖಂಡರು ಗಳಾದ ಕೈಮರ ನಾಗರಾಜ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ