PosterA3_copy_570x390

 

 

ಮೂಡಿಗೆರೆ ಪಟ್ಟಣದ ಛತ್ರಮೈಧಾನದ ಸಮೀಪದ ಜೆಎಸ್ ಶಾಲೆ ಹಿಂಭಾಗದಲ್ಲಿ ಡರ್ಟ್ ಟ್ರಾಕ್ 2026 ವತಿಯಿಂದ ಏ.25 ಮತ್ತು 26ರಂದು ಬೆಳಗ್ಗೆಯಿಂದ ಸಂಜೆವರೆಗೆ ಬೈಕ್ ಮತ್ತು ಕಾರ್‌ಗಳ  ರ‍್ಯಾಲಿ ಏರ್ಪಡಿಸಲಾಗಿದೆ ಎಂದು ಆಯೋಜಕ ಅನುಪ್ ವಿ.ಶೆಟ್ಟಿ ಹೇಳಿದರು.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲ ದಿನ ಶನಿವಾರದಂದು ಬೈಕ್ ರ‍್ಯಾಲಿ ನಡೆಯಲಿದ್ದು, ಇದರಲ್ಲಿ 2ಮತ್ತು 4 ಸ್ಟೊಕ್ ಎಕ್ಸ್ಪೋರ್ಟ್ ಮತ್ತು ಬಿಗಿನಿಯರ್ಸ್ ನೋಯ್ಸ್.-1, ಇಂಡಿಯನ್ ಓಪನ್ ಮತ್ತು ಬುಲೆಟ್ ಕ್ಲಾಸಿಕ್, ಇನ್ವಟೇಷನ್ ಕ್ಲಾಸ್‌ನಲ್ಲಿ ಸ್ಟಾರ್ ಆಫ್ ಚಿಕ್ಕಮಗಳೂರು, ಬೆಸ್ಟ್ ರೈಡರ್, ಕಿಡ್ಸ್ ಕ್ಲಾಸಸ್, ಮೊಪೆಡ್ ಕ್ಲಾಸಸ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.

ಕಾರುಗಳ ವಿಭಾಗದಲ್ಲಿ 800, 1100, 1400, 1600, 2000 ಸಿಸಿ, ಇಂಡಿಯನ್ ಓಪನ್, ಲೇಡಿಸ್ ಕ್ಲಾಸ್, ನೋಯ್ಸ್ ಓಪನ್ ಕ್ಲಾಸ್ ನಡೆಯಲಿದ್ದು, ಇಂಟರ್ ನ್ಯಾಷನಲ್ ಕ್ಲಾಸ್‌ನಲ್ಲಿ ಓಲ್ಡ್ ಮಾಸ್ಟರ್, ಫಾಸ್ಟೆಸ್ಟ್ ಡ್ರೆöÊವ್, ಸ್ಟಾರ್ ಆಫ್ ಚಿಕ್ಕಮಗಳೂರು, ಡೀಸೆಲ್ ಓಪನ್ ಕ್ಲಾಸ್, ಸ್ಟಿಟ್ ಸ್ಟೋಕ್ ಸ್ಪರ್ಧೆಗಳು ನಡೆಯಲಿದೆ.

ಫಾಸ್ಟೆಸ್ಟ್ ಡ್ರೆವರ್ ವಿಭಾಗದಲ್ಲಿ 25 ಸಾವಿರ ಕ್ಯಾಶ್ ಮತ್ತು ಟ್ರೋಫಿ, ಫಾಸ್ಟೆಸ್ಟ್ ರೈಡರ್ ವಿಭಾಗದಲ್ಲಿ 15ಸಾವಿರ ಮತ್ತು ಟ್ರೋಫಿ ಬಹುಮಾನವಿದ್ದು, ಅಲ್ಲದೇ ಪ್ರಥಮ ಸ್ಥಾನ ಪಡೆದವರಿಗೆ 12000 ರೂ, ದ್ವಿತೀಯ 8000, ತೃತೀಯ 4000 ರೂ ನಗದು ಬಹುಮಾನ ನೀಡಲಾಗುತ್ತಿದ್ದು,

ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 200ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಸಾರ್ವಜನಿಕರು ಮತ್ತು ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುವ ಮೂಲಕ ಮಡ್ ಎಕ್ಸ್ಪಿರಿಯನ್ಸ್ ಟ್ರಾಕ್‌ನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಸುಪ್ರಿತ್ ಶೆಟ್ಟಿ, ಆಕರ್ಷ್ ಮೂಡಿಗೆರೆ, ಅಭಿಷೇಕ್ ಹೊಸಮನೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ