IMG-20260428-WA0206

 

 

ದಿನಾಂಕ 28-04-2026 ಮಂಗಳವಾರ ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿ ಗುತ್ತಿ ಕೋಗಿಲೆ ಗ್ರಾಮದ ತೋಟದಲ್ಲಿ ಬೆಳಿಗ್ಗೆ 9:30 ರ ಸಮಯದಲ್ಲಿ   ಶ್ರೀಮತಿ ಲಕ್ಷ್ಮಿ (48ವರ್ಷ)  ಎಂಬ ಮಹಿಳೆಯ ಮೇಲೆ ಕಾಡು ಹಂದಿ ದಾಳಿಮಾಡಿದ್ದು, ಪರಿಣಾಮ ಮೊಣಕಾಲು ಬಳಿ ಗಂಭೀರ ಗಾಯವಾಗಿದ್ದು ಕೂಡಲೇ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ಆಸ್ಪತ್ರೆ ಗೆ ದಾಖಲಿಸಲಾಯಿತು. ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.

ಸದರಿ ಮಹಿಳೆ ಮೂಡಿಗೆರೆ  ಜೋಗಣ್ಣಕೆರೆ ಗ್ರಾಮದ ಚಕ್ರಮಣಿ ನಿವಾಸಿಯಾಗಿದ್ದು ಕೋಗಿಲೆ ಗ್ರಾಮದ ತನ್ನ ತವರು ಮನೆಯಲ್ಲಿ ಸುಗ್ಗಿ ಹಬ್ಬಕ್ಕೆ ಬಂದಿದ್ದರು ಎನ್ನಲಾಗಿದೆ. ಸೌದೆ ತರಲು ತೋಟಕ್ಕೆ ಹೋಗಿದ್ದಾಗ ಏಕಾಏಕಿ ಕಾಡುಹಂದಿಯೊಂದು ಲಕ್ಷ್ಮಿಯವರ ಮೇಲೆ ದಾಳಿ ಮಾಡಿದ್ದು, ಹಂದಿ ತನ್ನ ಕೋರೆಯಿಂದ ಮಹಿಳೆಯ ಕಾಲಿಗೆ ಗುದ್ದಿದ್ದು, ಮೊಣಕಾಲು ಬಳಿ ಆಳವಾದ ಗಾಯವಾಗಿದ್ದು, ಅಪಾರ ರಕ್ತಸ್ರಾವವಾಗಿದೆ.

 

ಜಿಲ್ಲಾ ಆಸ್ಪತ್ರೆಗೆ ಮೂಡಿಗೆರೆ ACF  ಆಕರ್ಷ್,  RFO ಮಂಜುನಾಥ್, ಕೋಗಿಲೆ Dyrfo ರಂಜಿತ್, ಜೋಗಣ್ಣನಕೆರೆ Dyrfo ಅಶ್ವಥ್ ರವರು ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಸಂಬಂಧಿಕರಾದ ಸತೀಶ್, ಮಂಜುನಾಥ್, ಶರತ್, ಕಲಾವತಿ, ಗೀತ ಉಪಸ್ಥಿತರಿದ್ದರು.

ಗಾಯಾಳು ಮಹಿಳೆಗೆ ಅರಣ್ಯ ಇಲಾಖೆ ಇಂದ ಸೂಕ್ತ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ