suddi-7

 

 

ಆಲ್ದೂರಿನಲ್ಲಿ  ನೂತನವಾಗಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಆಲ್ದೂರು ಕಾಫಿ ಘಟಕವನ್ನು ಶನಿವಾರ ಉದ್ಘಾಟಿಸಲಾಯಿತು. ಸಮೀಪದ ತುಡುಕೂರು ಗ್ರಾಮದಲ್ಲಿರುವ ಆಲ್ದೂರು ಪ್ಲಾಂಟರ್ಸ್ ಕ್ಲಬ್ ನಲ್ಲಿ ನಲ್ಲಿ ಘಟಕದ ಉದ್ಘಾಟನಾ ಸಮಾರಂಭ ನೆರವೇರಿಸಲಾಯಿತು.

ಸೀನಿಯರ್ ಪಿಪಿಎಫ್ ನ ನಿಕಟ ಪೂರ್ವ ರಾಷ್ಟ್ರೀಯ ಅಧ್ಯಕ್ಷ ಎಂ.ಆರ್. ಜಯೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಉತ್ತಮ ನಾಗರಿಕತ್ವ ಮತ್ತು ಬೆಳವಣಿಗೆ ವ್ಯಕ್ತಿತ್ವ ವಿಕಸನ ಇವೆಲ್ಲದಕ್ಕೂ ಎಸ್ ಸಿ ಐ ಘಟಕ ಮುನ್ನುಡಿಯಾಗಿದ್ದು ಜಗತ್ತಿನ ಜಾಗತಿಕ ಪ್ರಪಂಚದಲ್ಲಿ ಭಾರತವನ್ನು ದೇಶಗಳು ತಿರುಗಿ ನೋಡುವಂತೆ ಮಾಡಿದ್ದು, ಎಸ್‍ಸಿಐ ಘಟಕವು ಅದೇ ರೀತಿಯಲ್ಲಿ ಸಮಾಜಕ್ಕೆ ಉತ್ತಮ ನಾಗರಿಕರನ್ನು ಕೊಡುಗೆಯಾಗಿ ನೀಡಲು ಶ್ರಮಿಸುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಾವಯವ ಕೃಷಿ ಸಾಧಕ ಕಾಫಿ ಬೆಳೆಗಾರ ತೌಸಿಫ್ ಅಲಿ ಸಮಾಜಮುಖಿ ಚಿಂತನೆಗಳೊಂದಿಗೆ ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಿ ಕೊಡುಗೆಗಳನ್ನು ಒದಗಿಸಲಿ ಎಂದು ತಿಳಿಸಿದರು.

ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದ ಮೂಡಿಗೆರೆ ಸೀನಿಯರ್ ಛೇಂಬರ್ ನಿಕಟಪೂರ್ವ ಅಧ್ಯಕ್ಷ, ಹಿರಿಯ ಡಾ. ರಾಮಚರಣ್ ಅಡ್ಯಂತಾಯ ಮಾತನಾಡಿ ಆಲ್ದೂರು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಘಟಕವು ಸಕ್ರಿಯವಾಗಿ ವೃದ್ಧಿಗೊಳ್ಳುವಂತೆ ಶುಭ ಹಾರೈಸಿದರು.

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕಾಫಿ ಆಲ್ದೂರು ಲೀಜನ್ ಘಟಕದ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಎಸ್ ಸಿಐ, ದಿನೇಶ್ ಗುಡ್ಡದೂರು ಹಿಂದೆ ಜೆಸಿಐ ನಲ್ಲಿ ಕಾರ್ಯನಿರ್ವಹಿಸಿದ ಅನುಭವಗಳನ್ನು ಮೆಲುಕು ಹಾಕಿ ಸದಸ್ಯರೆಲ್ಲರ ಮಾರ್ಗದರ್ಶನ ಸಲಹೆಗಳು ಘಟಕ ಯಶಸ್ವಿಯಾಗಿ ಮುನ್ನಡೆಯಲು ಅತ್ಯವಶ್ಯಕ ಎಂದು ಅಭಿಪ್ರಾಯ ಹಂಚಿಕೊಂಡರು.

ಮ್ಯಾನೇಜ್ಮೆಂಟ್ ಹೆಡ್ ಸಿದ್ದಗಂಗಯ್ಯ ಎಸ್ ಸಿ ಐ ಘಟಕದ ಸಮಾಜಮುಖಿ ಕೆಲಸಗಳು ಸರ್ವರನ್ನು ಆಕರ್ಷಿಸಬೇಕು ಆ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಳೆಯ ಕೊಯ್ಲು ಮಾಡುವ ಕುರಿತು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲು ಚಿಂತಿಸಲಾಗಿದೆ ಎಂದರು.

ಪರಿಸರ ಸಂರಕ್ಷಣೆ ಪ್ರಶಸ್ತಿ ಪಡೆದ ತೌಸಿಫ್ ಅಲಿ ರವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.

ಕಾರ್ಯದರ್ಶಿ ಎಚ್ ಎಲ್ ರವಿಕುಮಾರ್, ಖಜಾಂಚಿ ಬಾಲಕೃಷ್ಣ, ನಿರ್ದೇಶಕ ರಾದ ಸಿಸಿ ಈರೇಗೌಡ, ಮೂಡಿಗೆರೆ ಘಟಕದ ಅಧ್ಯಕ್ಷ ಅಮೀನ್ ಅಹಮದ್, ಮನಮೋಹನ್, ವಿನೋದ್ ಆಳ್ವ,ಎಚ್ ಎಲ್ ಕೃಷ್ಣ, ವಿನೋದ್, ಪ್ರವೀಣ್ ವೈ ಜಿ, ಶಾಕಿರ್ ಅಹಮದ್, ಡಿಸಿ ಗಿರೀಶ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ