snr 2

 

 

ದಿನಾಂಕ 08/05/2026ರ ಶುಕ್ರವಾರದಂದು ಮೂಡಿಗೆರೆಯ ಜೇಸಿ ಭವನದಲ್ಲಿ  “ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್” – ಲೀಜನ್ – ಮೂಡಿಗೆರೆ  ವತಿಯಿಂದ 2026-27ನೇ ಸಾಲಿನ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಯಶಸ್ವಿಯಾಗಿ ನೆರವೇರಿತು.

‘ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್’ ಮೂಡಿಗೆರೆ ಘಟಕವು ದಾನಿಗಳ ಸಹಾಯದಿಂದ ವಿಶೇಷಚೇತನರಿಗೆ ಒಟ್ಟು ಸುಮಾರು ಎಪ್ಪತ್ತೈದು ಸಾವಿರ ರೂಪಾಯಿಗಳ ಬೆಲೆಬಾಳುವ  3 ಗಾಲಿ ಕುರ್ಚಿಗಳು, 2 ಕಂಕುಳ ಕೋಲು, 2 ವಾಕರ್’ಗಳನ್ನು ಅರ್ಹ ವಿಶೇಷಚೇತನ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಯಿತು.

 

ಇದೇ ಸಂದರ್ಭದಲ್ಲಿ ಮೇ 8ನೇ ತಾರೀಖಿನ ‘ಅಂತರರಾಷ್ಟ್ರೀಯ ರೆಡ್ ಕ್ರಾಸ್ ದಿನ’ದ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚಿಕ್ಕಮಗಳೂರು ಜಿಲ್ಲಾ ಘಟಕದ ವತಿಯಿಂದ ಅತ್ಯುತ್ತಮ ದರ್ಜೆಯ ಒಟ್ಟು 7 ಶ್ರವಣ ಸಾಧನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ  ಅಧ್ಯಕ್ಷತೆಯನ್ನು  ಮೂಡಿಗೆರೆ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷ  ಡಾ. ರಾಮಚರಣ ಅಡ್ಯಾಂತಾಯ’ ಅವರು ವಹಿಸಿದ್ದು, ನಿಕಟಪೂರ್ವ ಅಧ್ಯಕ್ಷರಾದ  ಬಸವರಾಜ್ ಬಿ. ಅವರು ಸ್ವಾಗತಿಸಿದರು,  ಮುಖ್ಯ ಅತಿಥಿಗಳಾಗಿ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷರಾದ   ಜಯೇಶ M.R., ಹಾಗೂ    ಸಿದ್ದಗಂಗಯ್ಯ, ರಾಷ್ಟ್ರೀಯ ಉಪಾಧ್ಯಕ್ಷ   ಶಶಿಕಲಾ ಶೆಟ್ಟಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ – ಚಿಕ್ಕಮಗಳೂರು ಜಿಲ್ಲಾ ಸಭಾಪತಿಯವರಾದ ಪ್ರದೀಪ್ ಗೌಡ ಅವರುಗಳು ಗೌರವಾನ್ವಿತ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

2026 – 2027ನೇ ಸಾಲಿನ ಮೂಡಿಗೆರೆ ಲೀಜನ್  ಘಟಕದ ನೂತನ ಅಧ್ಯಕ್ಷರಾಗಿ  ಅಮೀನ್ ಅಹಮದ್ ಅವರೊಂದಿಗೆ  ಘಟಕದ ಕಾರ್ಯದರ್ಶಿಯಾಗಿ  ಚಂದ್ರಶೇಖರ್ ಕುನ್ನಹಳ್ಳಿ, ಖಜಾಂಚಿಯಾಗಿ   ರವಿಕುಮಾರ್, ಉಪಾಧ್ಯಕ್ಷರುಗಳಾಗಿ ಬಿ.ಕೆ. ಜಗಮೋಹನ್.,   ಪ್ರದೀಪ್ ಕುಮಾರ್ ದುಂಡುಗ, ಬಿ.ಎನ್.  ಮನಮೋಹನ್  ,  ವಿನೋದ್ ಕುಮಾರ್ ಶೆಟ್ಟಿ,   ಸತ್ಯನಾರಾಯಣ ಹಾಗೂ ನಿರ್ದೇಶಕರುಗಳಾಗಿ ಕೆ.ಎಲ್.ಎಸ್. ತೇಜಸ್ವಿ ,  ಅತುಲ್ ರಾವ್,   ವಿಜಯ್ ಕುಮಾರ್,   ರವಿಶಂಕರ್, ಶಶಿಕರಣ್ ಮಾಕೋನಹಳ್ಳಿ ಅವರುಗಳು ಪ್ರಮಾಣವಚನ ಸ್ವೀಕರಿಸಿದರು.

‘ಸೀನಿಯರ್ ಚೇಂಬರ್’ ಮೂಡಿಗೆರೆ ಲೀಜನ್ ಸಂಸ್ಥಾಪಕ ಅಧ್ಯಕ್ಷರಾದ ಎನ್.ಎಲ್. ಪುಣ್ಯ ಮೂರ್ತಿ   ರವರಿಗೆ PPF ಫೆಲೋಶಿಪ್ ಗೌರವವನ್ನು ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷರಾದ   ಜಯೇಶ್. ಎಂ.ಆರ್. ಅವರು ವಿತರಿಸಿದರು.

ಸೀನಿಯರ್ ಚೇಂಬರ್ ಮೂಡಿಗೆರೆಯ 2025ರ ಕಾರ್ಯದರ್ಶಿಯವರಾದ  ಮನಮೋಹನ್ B.N. ಅವರು  ಕಾರ್ಯಕ್ರಮವನ್ನು ನಿರೂಪಿಸಿದರು,  2026ರ ಕಾರ್ಯದರ್ಶಿ  ಚಂದ್ರಶೇಖರ್ ಕುನ್ನಹಳ್ಳಿ ಅವರು ವಂದಿಸಿದರು.

ಜೇಸಿಸ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ, ಲಯನ್ಸ್ ಸಂಸ್ಥೆ, ಕರ್ನಾಟಕ ರಕ್ಷಣಾ ವೇದಿಕೆಗಳೂ ಸೇರಿದಂತೆ ಇನ್ನಿತರ ನಾನಾ ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ನೂತನ ಸಮಿತಿಯ ಪದಾಧಿಕಾರಿಗಳು ಶುಭ ಹಾರೈಸಿದರು. ನಂತರದಲ್ಲಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಲಾಯಿತು..

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ